ಬಂಗಾರಪೇಟೆ: ಸರ್ಕಾರದ ಆಸ್ತಿಗಳನ್ನು ಉಳಿಸಿಕೊಳ್ಳುವಲ್ಲಿ ತಾಲ್ಲೂಕು ಆಡಳಿತ ವಿಫಲವಾಗಿದ್ದು, ಈಗಾಗಲೇ ಸುಪ್ರಿಂಕೋರ್ಟ್ನ ತೀರ್ಪುನಂತೆ ದೇವರ ಹೆಸರಿನಲ್ಲಿರುವ ಜಮೀನಿಗೆ ದೇವರೇ ಮಾಲೀಕ ಎಂದು ಆದೇಶ ಮಾಡಿದ್ದರೂ ಸಹ ತಾಲ್ಲೂಕಿನ ಕಸಬಾ ಹೋಬಳಿ ಕೊಪ್ಪ ಗ್ರಾಮದ ಸರ್ವೆನಂ.189ರಲ್ಲಿ 5ಎಕರೆ 11ಗುಂಟೆ ಜಮೀನು ಆಂಜನೇಯ ದೇವರ ಹೆಸರಿನಲ್ಲಿ ಸುಮಾರು 70ವರ್ಷಗಳಿಂದ ಪಹಣಿಯಲ್ಲಿ ಹಾಗೂ ಇತರೆ ದಾಖಲೆಗಳಲ್ಲಿ ನಮೂದಾಗಿದ್ದು, ಕೆಲವು ಪಟ್ಟಾಭದ್ರ ಹಿತಾಸಕ್ತಿಗಳು 1985-86ನೇ ಸಾಲಿನಲ್ಲಿ ಉಸ್ಮಾನ್ ಷರೀಪ್ ಅವರ ಹೆಸರನ್ನು ಸೇರಿಸಿ ಮೇಲಿನ ಜಂಟಿ ಎಂದು ಪಹಣಿಯಲ್ಲಿ ಅಕ್ರಮವಾಗಿ ನಮೂದಿಸಿ ದೇವರ ಜಮೀನನ್ನು ಕಬಳಿಸಲು ಕೆಲವು ರಿಯಲ್ ಎಸ್ಟೇಟ್ ಮಾಲೀಕರು ಯತ್ನಿಸುತ್ತಿರುವುದನ್ನು ಕರ್ನಾಟಕ ದಲಿತ ರೈತಸೇನೆ ಹುಣಸನಹಳ್ಳಿ ಎನ್.ವೆಂಕಟೇಶ್ ಅವರು ತೀವ್ರವಾಗಿ ಖಂಡಿಸಿದ್ದಾರೆ.
ನಗರದಲ್ಲಿ ಅವರ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲ್ಲೂಕಿನ ಕೊಪ್ಪ ಗ್ರಾಮದ ಸರ್ವೆನಂ.189ರಲ್ಲಿ 5-11ಗುಂಟೆ ಜಮೀನು ಆಂಜನೇಯ ದೇವರು ಎಂಬ ಹೆಸರಿನಲ್ಲಿ ಸುಮಾರು 70ವರ್ಷಗಳಿಂದ ಕೈ ಬರಹದ ಪಹಣಿಗಳಲ್ಲಿ ಹಾಗೂ ಹಾಲಿ ಗಣಕೀಕೃತ ಪಹಣಿಯಲ್ಲೂ ಸಹ ದೇವರ ಹೆಸರು ಹಾಗೂ ಉಸ್ಮಾನ್ಷರೀಪ್ ಜಂಟಿಯಾಗಿ ಬರುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ 2011ನೇ ಸಾಲಿನಲ್ಲಿ ತಹಸೀಲ್ದಾರ್ ನ್ಯಾಯಾಲಯದ ಪ್ರಕರಣ ಆರ್ಎ27/10-11 ರಂತೆ ಖಾತೆ ಮಾಡಲು ಪ್ರಸ್ತಾವನೆ ಸಲ್ಲಿಸಿರುತ್ತಾರೆ. ಅದರಲ್ಲಿ ಮರು ಮಂಜೂರಾತಿ ಆದೇಶ ಮೂಲ ಕಡತ, ಮುಟೇಷನ್ ಮತ್ತು ಕೈಬರಹ ಪಹಣಿಗಳು ಹಾಗೂ ಇತರೆ ಕಂದಾಯ ದಾಖಲೆಗಳನ್ನು ದೃಢೀಕರಿಸಲು ಸೂಚಿಸಿರುತ್ತಾರೆ. ಆದರೆ ಹುಸೇನ್ಷರೀಪ್ ಉರುಫ್ ಸಿರಾಜ್ ಬಿನ್ ಲೇಟ್ ಹುಸ್ಮಾನ್ಷರೀಪ್ ಅವರಿಗೆ ದಾಖಲೆಗಳನ್ನು ನೀಡಲು ಅನೇಕ ಭಾರಿ ತಿಳಿಸಿದರೂ ಸಹ ಅವರು ದಾಖಲೆಗಳನ್ನು ನೀಡಿರುವುದಿಲ್ಲ ಹಾಗೂ ಗ್ರಾಮದಲ್ಲಿ ವಾಸವಿರುವುದಿಲ್ಲ, ತದನಂತರ ಈ ಜಮೀನನ್ನು ವೈ.ಪಿ.ಶೇಖರ್ ಬಿನ್ ಪಾಪಯ್ಯ ಎಂಬುವವರಿಗೆ ಬಂಗಾರಪೇಟೆ ಸಬ್ರಿಜಿಸ್ಟರ್ ಕಛೇರಿಯಲ್ಲಿ ಕ್ರಯದ ಕರಾರು ಮಾಡಲು ಹೋದಾಗ ಇಲ್ಲಿ ದೇವರ ಹೆಸರಿನಲ್ಲಿರುವ ಜಂಟಿ ಜಮೀನನ್ನು ನಾವು ಕ್ರಯ ಮಾಡಲು ಸಾಧ್ಯವಿಲ್ಲವೆಂದು ತಿಳಿಸಿದಾಗ ಕೆಜಿಎಫ್ ಉಪ ನೊಂದಣಾಧಿಕಾರಿಗಳ ಕಛೇರಿಯಲ್ಲಿ ದಿ.12/02/2025 ನೊಂದಣಿ ನಂ.4711/2024-25ರಂತೆ ವೈ.ಪಿ.ಶೇಖರ್ ಅವರಿಗೆ ಕ್ರಯದ ಕರಾರನ್ನು ಅಕ್ರಮವಾಗಿ ಮಾಡಿಕೊಂಡಿರುತ್ತಾರೆ.ಈ ಎಲ್ಲಾ ಹಾಗೂ-ಹೋಗುವಗಳನ್ನು ತಹಸೀಲ್ದಾರ್ ನ್ಯಾಯಾಲಯದಲ್ಲಿ ಆರ್ಟಿ/ಸಿ.ಆರ್/507/2024-25 ರಂತೆ ಹುಸ್ಮಾನ್ ಷರೀಪ್ ಅವರಿಗೆ ಇನಾಂತಿ ಮೂಲಕ ಮಂಜೂರಾಗಿರುವುದು ಕಂಡು ಬಂದಿರುವುದಿಲ್ಲ ಹಾಗಾಗಿ ಸದರಿ ಪಹಣಿಯಲ್ಲಿ ಅನಧಿಕೃತವಾಗಿ ನಮೂದಾಗಿರುವ ಕೆ.ಎ.ಹುಸ್ಮಾನ್ಶರೀಫ್ ಅವರ ಹೆಸರನ್ನು ರದ್ದುಪಡಿಸಿ ಆಂಜನೇಯ ದೇವರು ಎಂದು ಮುಂದುವರೆಸಲು ಕೋರಿ ಇನಾಂ ಅಬಲೀಷನ್ ಕಾಯ್ದೆ 1977ರ ಕಲಂ6ರಲ್ಲಿ ವಿವರಿಸಿ ಮರು ಮಂಜೂರಾಗದ ಹಾಗೂ ಸಾಗುವಳಿ ಇಲ್ಲದ ಎಲ್ಲಾ ಜಮೀನುಗಳು ಸರ್ಕಾರದಲ್ಲಿ ವಿಹಿತವಾಗತಕ್ಕದ್ದು ಎಂದಿರುವಂತೆ ಆಂಜನೇಯ ದೇವರು ಜೊತೆಗೆ ಜಂಟಿಯಾಗಿ ಸರ್ಕಾರ ಎಂದು ನಮೂದಿಸಲು ಸೂಕ್ತ ಆದೇಶ ಹೊರಡಿಸುವಂತೆ ಕೋರಿ ಉಪವಿಭಾಗಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ ಎಂದರು.ಆದರೆ ಎಸಿ ಅವರ ನ್ಯಾಯಾಲಯದಲ್ಲಿ ಪ್ರಕರಣ ಸಂಖ್ಯೆ ಆರ್ಎ35/2025 ರಂತೆ ಪ್ರಕರಣ ದಾಖಲಿಸಿಕೊಂಡು ಎಸಿ ಡಾ.ಮೈತ್ರಿ ಅವರು ಯಾವುದೇ ಆದೇಶ ಮಾಡದೇ ಯಥಾಸ್ಥಿತಿ ಇರಿಸಿದ್ದರು. ಆದರೆ ದಾಖಲೆಗಳನ್ನು ಪರಿಶೀಲಿಸದೇ ಸರ್ಕಾರದ ಜಮೀನನ್ನು ಉಳಿಸಿಕೊಳ್ಳಲು ಆಸಕ್ತಿಯಿಲ್ಲದೆ ರಾಜಕೀಯ ಒತ್ತಡಕ್ಕೆ ಮಣಿದೋ ಅಥವಾ ಹಣದ ಆಮಿಷಕ್ಕೆ ಒಳಪಟ್ಟೋ ತಿದ್ದುಪಡಿ ಮಾಡುವ ಸಂಬAಧ ತಹಸೀಲ್ದಾರ್ ಬಂಗಾರಪೇಟೆ ಅವರಿಗೆ ಮರು ಪರಿಶೀಲನೆಗಾಗಿ ಆದೇಶವನ್ನು ಹಾಲಿ ಎಸಿ ಅವರು ಮಾಡಿರುತ್ತಾರೆ.ಆಗಾಗಿ ಸುಪ್ರೀಂಕೋರ್ಟ್ ಆದೇಶದಂತೆ ದೇವರ ಹೆಸರಿನಲ್ಲಿರುವ ಜಮೀನು ದೇವರೇ ಮಾಲೀಕ ಎಂಬAತೆ ಅಕ್ರಮ ದಾಖಲೆಗಳನ್ನು ಸೃಷ್ಠಿಸಿ ದೇವರ ಜಮೀನನ್ನು ಕಬಳಿಸಲು ಮುಂದಾಗಿರುವ ಕೆ.ಎ.ಹುಸ್ಮಾನ್ಶರೀಫ್ ಮತ್ತು ಕುಟುಂಬ ಹಾಗೂ ವೈ.ಪಿ.ಶೇಖರ್ ಬಿನ್ ಪಾಪಣ್ಣ ಹಾಗೂ ಇದಕ್ಕೆ ಬೆಂಬಲವಾಗಿ ನಿಂತಿರುವ ಸರ್ಕಾರಿ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲು ಒತ್ತಾಯಿಸಿದರು.
ದೇವರ ಹೆಸರಲ್ಲಿರುವ ಜಮೀನಿಗೆ ದೇವರೇ ಮಾಲೀಕ” ಆಂಜನೇಯ ದೇವರ ಹೆಸರಿಗೆ ಉಂಡೇನಾಮ, ದೇವರ ಜಮೀನು ಕಬಳಿಸಲು ಹುನ್ನಾರ



