ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದ್ದೂರು ನಿರ್ಮಿಸಿ ಪಿ.ಸಿ.ಶೇಖರ್ ನಿರ್ದೇಶಿಸುತ್ತಿರುವ “ಮಹಾನ್” ಚಿತ್ರದ ವಿಶೇಷಪಾತ್ರದಲ್ಲಿ ಶಿವಣ್ಣ ಅಭಿನಯಿಸಿದ್ದಾರೆ.ವಿಜಯ್ ರಾಘವೇಂದ್ರ ಈ ಚಿತ್ರದ ನಾಯಕರಾಗಿ ನಟಿಸಿದ್ದಾರೆ. ಬಹಳ ವರ್ಷಗಳ ನಂತರ ಶಿವರಾಜಕುಮಾರ್ ಹಾಗೂ ವಿಜಯ ರಾಘವೇಂದ್ರ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. “ಮಹಾನ್” ರೈತರ ಕುರಿತಾದ ಕಥಾಹಂದರ ಹೊಂದಿರುವ ಚಿತ್ರ. ಈ ಚಿತ್ರದಲ್ಲಿ ಬರುವ ಪ್ರತಿಯೊಂದು ಪಾತ್ರವೂ ಮುಖ್ಯ ಪಾತ್ರಗಳಾಗಿರುತ್ತದೆ. ಮನೆಯಲ್ಲಿ ನಾವೇನಾದರೂ ತಪ್ಪು ಮಾಡಿದರೆ, ನಮಗೆ ಬುದ್ದಿ ಹೇಳಲು ತಂದೆ – ತಾಯಿ ಇರುತ್ತಾರೆ. ಅಂತಹುದೇ ಪರಿಸ್ಥಿತಿ ಸಮಾಜದಲ್ಲಿ ನಿರ್ಮಾಣವಾದಾಗ ಅಲ್ಲಿನ ತೊಂದರೆಗಳನ್ನು ತಿದ್ದಲು “ಮಹಾನ್” ವ್ಯಕ್ತಿಯ ಅಗತ್ಯವಿರುತ್ತದೆ. ಅಂತಹ “ಮಹಾನ್” ವ್ಯಕ್ತಿಯ ಪಾತ್ರದಲ್ಲಿ ಶಿವಣ್ಣ ಇದ್ದಾರೆ. ಎಲ್ಲಾ ನಿರ್ದೇಶಕರಿಗೂ ಶಿವರಾಜಕುಮಾರ್ ಅವರ ಚಿತ್ರ ನಿರ್ದೇಶನ ಮಾಡುವ ಆಸೆ ಇರುತ್ತದೆ. ನನಗೂ ಅದು ಬಹಳ ದಿನಗಳ ಹಂಬಲ. ಆ ಆಸೆ ಈಗ ಈಡೇರಿದೆ. “ಮಹಾನ್” ಬಹು ತಾರಾಬಳಗದ ಚಿತ್ರವಾಗಿದ್ದು, ಶಿವರಾಜಕುಮಾರ್, ವಿಜಯ ರಾಘವೇಂದ್ರ, ರಾಧಿಕಾ ನಾರಾಯಣ್, ಮಿತ್ರ, ನಮ್ರತಾ ಗೌಡ, ವರ್ಷ ಬೊಳ್ಳಮ್ಮ, ಕಿರಣ್ ಶ್ರೀನಿವಾಸ್ ಸಹ ಆಭಿನಯಿಸಿದ್ದಾರೆ.



