ಭಾಗ್ಯನಗರ: ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಎಂ-ಸ್ಯಾಂಡ್, ಡಸ್ಟ್ ಮತ್ತು ಇತರೆ ನಿರ್ಮಾಣ ಸಾಮಗ್ರಿಗಳನ್ನು ಅಧಿಕ ಭಾರ ಹೊತ್ತು ಸಾಗಿಸುವ ಟ್ರಾಕ್ಟರ್ಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಟ್ರಾಕ್ಟರ್ಗಳಲ್ಲಿ ಸಾಗಿಸುವ ಎಂ-ಸ್ಯಾಂಡ್ ಮತ್ತು ಡಸ್ಟ÷್ಗಳನ್ನು ಸಮರ್ಪಕವಾಗಿ ಮುಚ್ಚದೇ ಸಾಗಿಸಲಾಗುತ್ತಿರುವುದರಿಂದ ಧೂಳು ರಸ್ತೆಯಲ್ಲಿ ಹರಡುತ್ತಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳ ಕಣ್ಣಿಗೆ ಬೀಳುತ್ತಿದೆ. ಇದರಿಂದ ರಸ್ತೆ ಅಪಘಾತಗಳ ಅಪಾಯ ಹೆಚ್ಚಾಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ.ಇದಲ್ಲದೆ, ಹಲವಾರು ಟ್ರಾಕ್ಟರ್ಗಳು ಅಗತ್ಯ ದಾಖಲೆಗಳಾದ ವಿಮೆ (ಇನ್ಷೂರೆನ್ಸ್), ಫಿಟ್ನೆಸ್ ಪ್ರಮಾಣಪತ್ರ (ಎಫ್.ಸಿ.), ನೋಂದಣಿ ದಾಖಲೆಗಳು ಹಾಗೂ ಚಾಲನಾ ಪರವಾನಗಿ ಇಲ್ಲದೇ ಸಂಚರಿಸುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ನಿಯಮಗಳನ್ನು ಉಲ್ಲಂಘಿಸಿ ಸಂಚರಿಸುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಸಂಬಂಧಿತ ಅಧಿಕಾರಿಗಳು ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ರಾತ್ರಿ ವೇಳೆ ಸಂಚರಿಸುವ ಅನೇಕ ಟ್ರಾಕ್ಟರ್ಗಳ ಹಿಂಭಾಗದಲ್ಲಿ ಎಚ್ಚರಿಕಾ ದೀಪಗಳು ಹಾಗೂ ಪ್ರತಿಫಲಕ (ರಿಫ್ಲೆಕ್ಟರ್) ವ್ಯವಸ್ಥೆ ಇಲ್ಲದಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಇಂತಹ ಅಪಘಾತಗಳಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದು, ಇನ್ನೂ ಹಲವರು ಶಾಶ್ವತ ಅಂಗವಿಕಲತೆಗೆ ಒಳಗಾಗಿದ್ದಾರೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.ತಕ್ಷಣವೇ ಆರ್ಟಿಓ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ವಿಶೇಷ ಕಾರ್ಯಾಚರಣೆ ನಡೆಸಿ, ಅಧಿಕ ಭಾರ ಹೊತ್ತು ಸಾಗುವ ಹಾಗೂ ದಾಖಲೆಗಳಿಲ್ಲದೆ ಸಂಚರಿಸುವ ಟ್ರಾಕ್ಟರ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜೊತೆಗೆ ಎಂ-ಸ್ಯಾAಡ್ ಮತ್ತು ಡಸ್ಟ್ ಸಾಗಿಸುವ ವಾಹನಗಳನ್ನು ಕಡ್ಡಾಯವಾಗಿ ಮುಚ್ಚಳದೊಂದಿಗೆ ಸಾಗಿಸಲು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಭಾರ ಹೊತ್ತು ಸಂಚರಿಸುವ ಟ್ರಾಕ್ಟರ್ಗಳಿಂದ ಸಾರ್ವಜನಿಕರಿಗೆ ತೊಂದರೆ ಸೈಯದ್ ಸಿದ್ದೀಕ್, ಬಾಗೇಪಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ



