ದೆಹಲಿ: ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧ ಕೊನೆಗೊಳಿಸಲು ಎರಡು ದೇಶಗಳು ಮಾತುಕತೆ ಮೂಲಕ ಒಮ್ಮತಕ್ಕೆ ಬಂದಿವೆ. ಎರಡು ರಾಷ್ಟ್ರಗಳ ನಡುವೆ ಈ ತಿಂಗಳ 19ರಂದು ಸ್ವಿಡ್ಜರ್ಲ್ಯಾಂಡ್ನ ಜಿನೆವಾದಲ್ಲಿ ಯುದ್ಧಾಂತ್ಯಕ್ಕೆ ಸಹಿ ಹಾಕಲಿವೆ.ಹಾರ್ಮೋಜ್ ಜಲಸಂಧಿ ತೆರವು ಸೇರಿದಂತೆ ಒಟ್ಟು 14 ಅಂಶಗಳುಳ್ಳ ಷರತ್ತಿನ ಮಾತುಕತೆ ಮೂಲಕ ಒಪ್ಪಂದಕ್ಕೆ ಬರಲಾಗಿದೆ. ಮಾತುಕತೆ ಯಶಸ್ವಿಯಿಂದಾಗಿ ಒಟ್ಟು 108 ದಿನಗಳಿಗೂ ಹೆಚ್ಚು ಕಾಲ ನಡೆದ ಯುದ್ಧ ಅಂತ್ಯ ಕಾಣಲಿದೆ. ವಿಶ್ವದ ಹಡುಗುಗಳಿಗೆ ನಿಮ್ಮ ಇಂಜಿನ್ ಸ್ಟಾರ್ಟ್ ಮಾಡಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆ ನೀಡಿದ್ದಾರೆ.



