ಬೆಂಗಳೂರು: ಬೆಂಗಳೂರಲ್ಲಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್ ತೂಗುದೀಪ, ರೌಡಿಶೀಟರ್ ಆಗುವುದು ಬಹುತೇಕ ನಿಶ್ಚಿತವಾಗಿದೆ.
ದರ್ಶನ್ ತೂಗುದೀಪ್ ಮೇಲೆ ಓಪನ್ ಆಗುತ್ತಾ ರೌಡಿಶೀಟರ್ ಎಂಬ ಪ್ರಶ್ನೆ ಎದ್ದಿದ್ದು, ಸದ್ಯ ರೇಣುಕಾಸ್ಚಾಮಿ ಪ್ರಕರಣದಲ್ಲಿ ಸೆಕ್ಷನ್ 302 ಅಡಿ ಪ್ರಕರಣ ದರ್ಶನ್ ವಿರುದ್ಧ ದೂರು ದಾಖಲಾಗಿದೆ.
ದರ್ಶನ್ ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಹಿನ್ನೆಲೆ, ನಟ ದರ್ಶನ್ ಹೋಟೆಲ್ನಲ್ಲಿ ಕೂಡ ಕಿರಿಕ್ ಮಾಡಿಕೊಂಡಿದ್ದ. ಹಲವು ಪ್ರಕರಣಗಳಲ್ಲಿ ಭಾಗಿ ಹಿನ್ನೆಲೆ, ಕೌಟುಂಬಿಕ ಕಲಹ ಹೊರತುಪಡಿಸಿ ಇನ್ನುಳಿದ ಪ್ರಕರಣಗಳನ್ನು ಆಧರಿಸಿ ರೌಡಿಶೀಟರ್ ಓಪನ್ ಮಾಡಲು ಪೊಲೀಸರ ಚಿಂತನೆ ಶುರುವಾಗಿದೆ.