ಕನಕಪುರ: ನಗರದ ಪ್ರಸಿದ್ಧ ಅಡ್ವೆಂಚರ್ ಅಥ್ಲೆಟಿಕ್ಸ್ಅಕಾಡೆಮಿ ಕ್ರೀಡಾ ಸಂಸ್ಥೆಯ ಮಕ್ಕಳು ಅಂತರ ಶಾಲಾ ಅಥ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ ಅತ್ಯುತ್ತಮ ಸಾಧನೆ ಮಾಡಿ ಚಿನ್ನ, ಬೆಳ್ಳಿ, ಕಂಚಿನ ಪದಕಗಳ ಜೊತೆಗೆ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿಯನ್ನು ಗಳಿಸಿದ್ದಾರೆ.
ಬೆಂಗಳೂರಿನ ಪೂರ್ಣ ವಿಕಾಸ್ ವಿಧ್ಯಾಲಯ ವತಿಯಿಂದ ಎನ್ವಿಟ್ ಸ್ಪೋರ್ಟ್ಸ್ ಫೌಂಡೇಶನ್ ಸಹಕಾರದೊಂದಿಗೆ ಬೆಂಗಳೂರು ವಿಶ್ವವಿದ್ಯಾಲಯದ ಮೈದಾನದಲ್ಲಿ ನಡೆದ ಎಂಟರಿಂದ ಹದಿನಾರು ವರ್ಷದೊಳಗಿನ ಬಾಲಕ-ಬಾಲಕಿ ಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ನಗರದ ಅಡ್ವೆಂಚರ್ ಅಥ್ಲೆಟಿಕ್ಸ್ ಅಕಾಡೆಮಿಯ ಸುಮಾರು ಹನ್ನೆರಡು ಮಕ್ಕಳು 60,80,100,200,400,600, ಮೀಟರ್ ಓಟದ ಸ್ಪರ್ಧೆ ಸೇರಿದಂತೆ ರಿಲೇ ಓಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಚಿನ್ನ, ಬೆಳ್ಳಿ,ಕಂಚಿನ ಪದಕ ಗಳಿಸಿದ್ದಾರೆ.
ಮಕ್ಕಳ ಈ ಸಾಧನೆಗೆ ಅಕಾಡೆಮಿಯ ಅಧ್ಯಕ್ಷ ಕೆ.ವಿ.ಆನಂದ್, ಉಪಾಧ್ಯಕ್ಷರಾದ ಧನಂಜಯ್,ಆನಂದ್ ಅರಸು ಸೇರಿದಂತೆ ನಿರ್ದೇಶಕರು ಹಾಗೂ ಪೋಷಕರು ಮಕ್ಕಳ ಸಾಧನೆಗೆ ಬೆನ್ನೆಲು ಬಾಗಿ ನಿಂತು ಹಗಲಿರುಳು ಶ್ರಮಿಸುತ್ತಿರುವ ತರಬೇತಿದಾರೆ ಅಕ್ಷತಾ ರವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.