ಕೋಲಾರ :ಜಾಗೃತಿ ಸಮಿತಿಯ ನಿಯಮಗಳನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ಆಯ್ಕೆ ಮಾಡಿರುವ (ಅಟ್ರಾಸಿಟಿ ಸಮಿತಿ) ಸಮಿತಿಯನ್ನು ವಜಾಗೊಳಿಸಿ, ಕಾನೂನಿನ ಪ್ರಕಾರ ಆಯ್ಕೆ ಮಾಡದೆ ಶಿಫಾರಸ್ಸು ಮಾಡಿರುವ ಸಮಾಜ ಕಲ್ಯಾಣ ಇಲಾಖೆಯ ಭ್ರಷ್ಟ ಅಧಿಕಾರಿ ಶ್ರೀನಿವಾಸನ್ ಅವರನ್ನು ಇಲಾಖೆಯ ನಿಯೋಜನೆಯನ್ನು ರದ್ದು ಮಾಡಿ ಇಲಾಖೆಗೆ ನಿಷ್ಠಾವಂತ ಅಧಿಕಾರಿಯನ್ನು ನೇಮಕ ಮಾಡುವಂತೆ ದಲಿತ ಸಂಘಟನೆಗಳ ಸಂಯುಕ್ತ ರಂಗದ ನೇತೃತ್ವದಲ್ಲಿ ಬುಧವಾರ ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ದಲಿತ ಸಂಘಟನೆಗಳ ಸಂಯುಕ್ತ ರಂಗದ ಅಧ್ಯಕ್ಷ ಡಿಪಿಎಸ್ ಮುನಿರಾಜು ಮಾತನಾಡಿ ಜಿಲ್ಲಾ ಜಾಗೃತಿ ಸಮಿತಿಯನ್ನು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಲವಾರು ನಿಬಂಧನೆಗಳು ಹಾಗೂ ಷರತ್ತುಗಳು ಇದ್ದರು ಅವುಗಳನ್ನು ಗಾಳಿಗೆ ತೂರಿ ಏಕಾಏಕಿ ನೇಮಕ ಮಾಡಿದ್ದಾರೆ. ಮೊದಲಿಗೆ ಅರ್ಜಿ ಆಹ್ವಾನಿಸಿ ಎಲ್ಲಾ ದಲಿತ ಸಂಘ ಸಂಸ್ಥೆಗಳು ಮತ್ತು ಸಮುದಾಯದ ಸೇವಕರಿಗೆ ಅವಕಾಶ ನೀಡಬೇಕು, ಮತ್ತು ಅರ್ಜಿ ಹಾಕಲು ಪ್ರಚಾರಗೊಳಿಸಬೇಕು. ಸಮುದಾಯದ ಬಡವರ ಪರವಾಗಿ ಯಾರು ಸೇವೆಗಳನ್ನು ಸಲ್ಲಿಸಿರುತ್ತಾರೆ. ಅವರಿಗೆ ಮೊದಲ ಆದ್ಯತೆ ನೀಡಬೇಕು. ಆದರೆ ಜೆಡಿ ಶ್ರೀನಿವಾಸನ್ ಇದ್ಯಾವುದನ್ನು ಮಾಡದೆ ಈತನಿಗೆ ಬೇಕಾದವರಿಂದ ಅರ್ಜಿಗಳು ಎಷ್ಟು ಬೇಕೋ ಅಷ್ಟನ್ನು ಮಾತ್ರವೇ ಪಡೆದುಕೊಂಡು ನೇಮಕ ಮಾಡಿದ್ದಾರೆ ಎಂದು ಆರೋಪಿಸಿದರು.
ಹಿಂದಿನ ವರ್ಷಗಳಲ್ಲಿ ಸಮಿತಿಗೆ ಅರ್ಜಿಗಳನ್ನು ಕರೆದಾಗ ನೂರಾರು ಅರ್ಜಿಗಳನ್ನು ಸಲ್ಲಿಸಿರುವುದು ಕೂಡ ದಾಖಲೆಗಳು ಇವೆ. ಆದರೆ ಏಕಾಏಕಿ ಆಯಾ ಶಾಸಕರ ಶಿಫಾರಸ್ಸು ಪತ್ರಗಳನ್ನು ಪಡೆದುಕೊಂಡ ಈ ಭ್ರಷ್ಟ ಅಧಿಕಾರಿ ಶ್ರೀನಿವಾಸನ್ ರವರು ರಾಜಕೀಯ ಏಜೆಂಟರನ್ನು ಹಾಗೂ ಸಮುದಾಯದ ಬಗ್ಗೆ ಯಾವುದೇ ಅರಿವು ಇಲ್ಲದಂತಹವರನ್ನು ಕಾನೂನು ಬಾಹಿರವಾಗಿ ಜಾಗೃತಿ ಸಮಿತಿಗೆ ಆಯ್ಕೆ ಮಾಡಲು ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಿ ನೇಮಕ ಮಾಡಿದ್ದು ಕೂಡಲೇ ಅ ಸಮಿತಿಯನ್ನು ವಜಾಗೊಳಿಸಿ ಹೊಸ ಸಮಿತಿ ನೇಮಕ ಮಾಡುವಂತೆ ಒತ್ತಾಯಿಸಿದರು.
ದಮನಿತರ ಸೇವಾ ಸಮಿತಿ ಸಂಸ್ಥಾಪಕ ರಾಜ್ಯ ಅಧ್ಯಕ್ಷ ಮೇಡಿಹಾಳ ಮುನಿಅಂಜಿನಪ್ಪ ಮಾತನಾಡಿ ಸಮಾಜ ಕಲ್ಯಾಣ ಇಲಾಖೆಯ ಜೆಡಿ ಶ್ರೀನಿವಾಸನ್ ಮಾತೃ ಸಂಸ್ಥೆ ತೋಟಗಾರಿಕೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಅಂತರವನ್ನು ಪ್ರಭಾರಿಯಾಗಿ ಸಮಾಜ ಕಲ್ಯಾಣ ಇಲಾಖೆಗೆ ನಿಯೋಜನೆಗೊಂಡಿದ್ದಾರೆ ಇವರಿಗೆ ದಲಿತರ ಮತ್ತು ಸಮಾಜ ಕಲ್ಯಾಣ ಇಲಾಖೆಯ ಬಗ್ಗೆ ಯಾವುದೇ ಅರಿವು ಇಲ್ಲ ಇಲಾಖೆಯಲ್ಲಿ ಭ್ರಷ್ಟಾ
ಚಾರದಲ್ಲಿ ತೊಡಗಿದ್ದಾರೆ ಕೂಡಲೇ ಅವರನ್ನು ಇಲಾಖೆಯ ನಿಯೋಜನೆ ರದ್ದು ಮಾಡಿ ಸಮಾಜ ಕಲ್ಯಾಣ ಇಲಾಖೆಗೆ ನಿಷ್ಠಾವಂತರನ್ನು ಹಾಗೂ ದಲಿತರ ಬಗ್ಗೆ ಕಾಳಜಿ ಇರುವ ಅಧಿಕಾರಿಯನ್ನು ನೇಮಕ ಮಾಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಮುಖಂಡರಾದ ದಲಿತ ನಾರಾಯಣಸ್ವಾಮಿ, ಗಾಂಧಿನಗರ ಚೇತನ್ ಬಾಬು, ಮೋಚಿಪಾಳ್ಯ ನಾಗೇಶ್, ರಾಜಕುಮಾರ್, ರಾಂಪುರ ಮುನಿ
ರಾಜು, ಅಂಬೇಡ್ಕರ್ ನಗರ ಮಂಜುನಾಥ್, ಜ್ಞಾನೇಶ್, ಕರಗಪ್ಪ, ಮತ್ತಿಕುಂಟೆ ಕೃಷ್ಣಪ್ಪ, ಸೇಎ ದಲಿತ ಸಂಘಟನೆಗಳ ಸಂಯುಕ್ತರAಗದ ಪದಾಧಿಕಾರಿಗಳು ಕಾರ್ಯಕರ್ತರು ಇದ್ದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸನ್ ನಿಯೋಜನೆ ರದ್ದುಪಡಿಸಲು ಒತ್ತಾಯ



