ಚಂದಾಪುರ: ಆನೇಕಲ್ ತಾಲ್ಲೂಕಿನ ಚಂದಾಪುರದ ಕವಿ, ಸಾಹಿತಿ ಹಾಗೂ ಸಾಹಿತ್ಯ ಸಾಂಸ್ಕೃತಿಕ ಸಂಘಟನೆಯ ಕಾರ್ಯದರ್ಶಿಯಾಗಿ, ಕಳೆದ ಮೂವತ್ತು ವರ್ಷಗಳಿಂದ ನಿರಂತರವಾಗಿ, ನಾಡು, ನುಡಿ, ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮದೇ ಆದ ಅಮೂಲ್ಯ ಸೇವೆಯನ್ನು ಸಲ್ಲಿಸುತ್ತಿರುವ ಇವರನ್ನು ಗುರುತಿಸಿ, ಬೆಂಗಳೂರಿನ ಚಿತ್ರಸಂತೆ ಸಂಸ್ಥೆಯು, ಚಂದಾಪುರದ ಜೇನುಗೂಡು ಮಹೇಶ್ ಊಗಿನಹಳ್ಳಿ ಅವರಿಗೆ 2026ರ ಕರ್ನಾಟಕ ಸಾಧಕರ ಸರಣಿಯ ಹೆಮ್ಮೆಯ ಕನ್ನಡಿಗ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ನಾಡಿನ ಖ್ಯಾತ ಜ್ಯೋತಿಷಿ ಹಾಗೂ ಗೂರೂಜಿಗಳಾದ ಬ್ರಹ್ಮಾಂಡ ಗುರೂಜಿ, ಖ್ಯಾತ ಚಲನ ಚಿತ್ರ ನಟಿ, ನಿಖಿತಾ ಸ್ವಾಮಿ, ಬಿಗ್ ಬಾಸ್ ಸ್ಪರ್ಧಿಯಾದ ನೀತೂ,ಹಾಗೂ ಚಿತ್ರಸಂತೆ ಸಂಸ್ಥೆಯ ಅಧ್ಯಕ್ಷರಾದ ಗಿರೀಶ್ ಗೌಡ ಅವರು ಪ್ರಶಸ್ತಿಯನ್ನು ನೀಡಿದೆ
ಇದೇ ಸಂದರ್ಭದಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡಿ ಮಾತನಾಡಿದ ನಾಡಿನ ಖ್ಯಾತ ಜ್ಯೋತಿಷಿ ಹಾಗೂ ಗೂರೂಜಿಗಳಾದ ಬ್ರಹ್ಮಾಂಡ ಗುರೂಜಿ ಮಾತನಾಡುತ್ತಾ, ಜೇನುಗೂಡು ಮಹೇಶ್ ಊಗಿನಹಳ್ಳಿ ಅವರು ಗ್ರಾಮಾಂತರ ಪ್ರದೇಶದಲ್ಲಿ ಹುಟ್ಟಿಬೆಳೆದ ಇವರು, ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸೇವೆಗಾಗಿ ಆನೇಕಲ್ಲಿನ ಚಂದಾಪುರದಲ್ಲಿ ಜೇನುಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಟನೆಯನ್ನು ಕಟ್ಟಿ, ನೂರಾರು ಕಾರ್ಯಕ್ರಮಗಳನ್ನು ಮಾಡಿದ್ದಾರೆ,ಹಲವಾರು ಉದಯೋನ್ಮುಖ ಕವಿಗಳಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟಿದ್ದಾರೆ, ಇದರ ಜೊತೆ ಜೊತೆಯಲ್ಲಿ, ಕೈಗಾರಿಕೆಗಳಲ್ಲಿ ಸಾಹಿತ್ಯ ಮತ್ತು ನಾಟಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡು ,ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡು ಹಲವಾರು ಕವಿತೆಗಳನ್ನು ರಚಿಸಿದ್ದಾರೆ ,ಹಾಗೂ ಜೇನುಗೂಡು ಪ್ರಕಾಶನದ ಮೂಲಕ ಹಲವು ಸಾಹಿತ್ಯ ಪುಸ್ತಕಗಳನ್ನು ಹೊರತಂದಿದ್ದಾರೆ ಇವರ ನಾಡು ನುಡಿ ಹಾಗೂ ಸಾಹಿತ್ಯ ಸೇವೆಗೆ ಇಂತಹ ಪ್ರಶಸ್ತಿ ಪುರಸ್ಕಾರಗಳು ಮತ್ತಷ್ಟು ಶಕ್ತಿ ನೀಡಿದಲಿ ಎಂಬುದಾಗಿ ಆಶೀರ್ವದಿಸಿದರು.
ಇದೇ ಸಂದರ್ಭದಲ್ಲಿ ಜೇನುಗೂಡು ಮಹೇಶ್ ಊಗಿನಹಳ್ಳಿ ಮಾತನಾಡುತ್ತಾ ಚಿತ್ರಸಂತೆಯ ಸಂಸ್ಥೆಯು ನನನ್ನು ಗುರುತಿಸಿ 2026 ರ ಹೆಮ್ಮೆಯ ಕನ್ನಡಿಗ ಸಾಧನ ಪ್ರಶಸ್ತಿಯನ್ನು ನೀಡಿರುವುದು ನನಗೆ ಬಹಳ ಸಂತೋಷ ಮತ್ತು ಹೆಮ್ಮೆಯಾಗಿದೆ, ಕನ್ನಡಿಗೆ ಎಂಬುದೇ ಮೊದಲಿಗೆ ಹೆಮ್ಮೆ ವಿಷಯ ಅದರಲ್ಲಿ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಎಂದರೆ ನನ್ನ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸೇವಾ ಕಾರ್ಯಗಳು ಮತ್ತಷ್ಟು ಮುಂದುವರಿಸಲು ಪ್ರೇರಣೆಯಾಗಿದೆ ಎಂದರು.
ಜೇನುಗೂಡು ಮಹೇಶ್ ಊಗಿನಹಳ್ಳಿಗೆ ಹೆಮ್ಮೆಯ ಕನ್ನಡಿಗ, ಸಾಧನಾ ಪ್ರಶಸ್ತಿ



