ಬೆಂಗಳೂರು: ಕಾಂಗ್ರೆಸ್ ಪಕ್ಷದ ರಾಜ್ಯ ವಿದ್ಯಮಾನಗಳ ಬಗ್ಗೆ ಕಾಂಗ್ರೆಸ್ ಪಕ್ಷದ ವರಿಷ್ಠರಿಂದ ದೆಹಲಿಯಲ್ಲಿಂದು ಮಹತ್ವದ ಸಮಾಲೋಚನಾ ಸಭೆ ನಡೆದಿದೆ. ಪಕ್ಷದ ಕಚೇರಿ ಇಂದಿರಾಭವನದಲ್ಲಿ ನಡೆದಿರುವ ಸಭೆಯಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ಗಾಂಧಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಮುಖರಾದ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾಲ್ಗೊಂಡಿದ್ದಾರೆ.
ಕಳೆದ ಹಲವು ತಿಂಗಳಿನಿAದ ಪಕ್ಷದಲ್ಲಿ ನಡೆಯುತ್ತಿದ್ದ ನಾಯಕತ್ವ ಬದಲಾವಣೆ, ಸಂಪುಟ ಪನಾರಚನೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಬಹುದು ಎಂದು ಬಹುತೇಕರ ಊಹಾಪೋಹದ ಮಾತಾಗಿದೆ. ಪಕ್ಷದ ವರಿಷ್ಠರ ಕರೆ ಮೇರೆಗೆ ನಿನ್ನೆ ಸಂಜೆ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಹಾಗೂ ಕೆಲ ಶಾಸಕರುಸಚಿವರು ದೆಹಲಿಗೆ ಆಗಮಿಸಿದ್ದಾರೆ. ಆದರೆ ಸಭೆಗೆ ಆಹ್ವಾನ ವಿರುವುದು ಮಾತ್ರ ಮುಖ್ಯಮಂತ್ರಿ ಉಪಮುಖ್ಯಮಂತ್ರಿಯವರಿಗೆ. ಇಂದಿನ ಸಭೆಯಲ್ಲಿ ಯಾವ ವಿಷಯದ ಬಗ್ಗೆ ಚರ್ಚೆ ನಡೆಯುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ದೆಹಲಿಯ ತಮ್ಮ ನಿವಾಸದಲ್ಲಿ ತಂಗಿದ್ದ ಡಿ.ಕೆ.ಶಿವಕುಮಾರ್ ಇಂದು ಬೆಳಿಗ್ಗೆ ಕರ್ನಾಟಕ ಭವನಕ್ಕೆ ಆಗಮಿಸಿದ್ದಾಗ ಮಾಧ್ಯಮದವರು ತಾವು ಮುಖ್ಯಮಂತ್ರಿಯಾಗುತ್ತೀರಾ ಎಂಬ ಪ್ರಶ್ನೆಗೆ ನಗುತ್ತಲೇ ಏನನ್ನು ಉತ್ತರಿಸದೆ ತಮಿಳುನಾಡಿನ ನೀರಿನ ಬಗ್ಗೆ ಪ್ರಸ್ತಾಪಿಸಿ ಮೇಕೆದಾಟು ಬಗ್ಗೆ ತಮಿಳುನಾಡು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ನಾವು ಶೀಘ್ರದಲ್ಲೇ ಈ ಬಗ್ಗೆ ಡಿಪಿಆರ್ ಸಲ್ಲಿಸುತ್ತೇವೆ ಎಂದು ತಿಳಿಸಿ ಕರ್ನಾಟಕದ ಜನತೆಗೆ ಧನ್ಯವಾದಗಳು ಎಂದು ಹೇಳಿ ಅಲ್ಲಿಂದ ತೆರಳಿದರು. ಅಲ್ಲಿಂದ ಅವರು ನೇರವಾಗಿ ಪಕ್ಷದ ಕಚೇರಿ ಇಂದಿರಾಭವನಕ್ಕೆ ತೆರಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಇಂದು ಬೆಳಿಗ್ಗೆ ಸಚಿವರೊಂದಿಗೆ ಉಪಹಾರ ಸಭೆ ನಡೆಸಿ ಸಭೆಯಲ್ಲಿ ಇಂದಿನ ಸಭೆಯ ಬಗ್ಗೆ ಸಮಾಲೋಚನೆ ನಡೆಸಿದರು. ಅವರು ಸಹ ಕರ್ನಾಟಕ ಭವನದಿಂದ
ತೆರಳುವಾಗ ತಮ್ಮ ಜತೆ ಬಂದಿದ್ದ ಸಚಿವರಿಗೆ ಆಲ್ ದ ಬೆಸ್ಟ್ ಎಂದು ಹೇಳುವ ಮೂಲಕ ಅವರ ಕೈ ಕುಲುಕಿ ಅಲ್ಲಿಂದ ತೆರಳಿದರು. ಇಂದಿರಾಭವನದಲ್ಲಿ ಪಕ್ಷದ ರಾಷ್ಟ್ರೀಯ ಪ್ರಮುಖರಾದ ರಣದೀಪ್ ಸಿಂಗ್ ಸುರ್ಜೇವಾಲಾ, ಕೆ.ಸಿವೇಣುಗೋಪಾಲ್ ಅವರೊಂದಿಗೆ ಸ್ವಲ್ಪ ಕಾಲ ಮಾತುಕತೆ ನಡೆಸಿದರು. ಇತ್ತ ದೆಹಲಿಗೆ ಆಗಮಿಸಿರುವ ಸಚಿವರ ಪೈಕಿ ಎಂ.ಬಿ.ಪಾಟೀಲ್, ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಮುಖ್ಯಮಂತ್ರಿ ಉಪಮುಖ್ಯಮಂತ್ರಿಯವರನ್ನು ಮಾತ್ರ ವರಿಷ್ಠರು ದೆಹಲಿಗೆ ಆಹ್ವಾನಿಸಿದ್ದಾರೆ ಎಂದಷ್ಟೇ ತಿಳಿಸಿದರು. ಸತೀಶ್ ಜಾರಕಿಹೊಳಿ ಮಾತನಾಡಿ ಪಕ್ಷದಲ್ಲಿ ಗೊಂದಲವಿದೆ. ಇದನ್ನು ಹೈಕಮಾಂಡ್ ಆದಷ್ಟೂ ಶೀಘ್ರ ಬಗೆಹರಿಸುತ್ತದೆ. ನಮ್ಮನ್ನು ದೆಹಲಿಗೆ ವರಿಷ್ಠರು ಆಹ್ವಾನಿಸಿಲ್ಲ. ನಾವು ಮುಖ್ಯಮಂತ್ರಿಯವರ ಜತೆ ಬಂದಿದ್ದೇವೆ ಎಂದಷ್ಟೇ ಹೇಳಿದರು. 11.30ರ ಸುಮಾರಿಗೆ ರಾಹುಲ್ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖಗೇ ಇಂದಿರಾಭವನಕ್ಕೆ ಆಗಮಿಸಿದ ನಂತರ ವರಿಷ್ಠರ ಸಮಾಲೋಚನಾ ಸಭೆ ಆರಂಭಗೊಂಡಿತು. ಸಭೆಯಲ್ಲಿ ಯಾವ ವಿಷಯದ ಬಗ್ಗೆ ಚರ್ಚೆ ನಡೆದಿದೆ ಎಂಬುದು ಇದೀಗ ಎಲ್ಲರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುತೂಹಲ ಕಾಂಗ್ರೆಸ್ `ಹೈ’ನತ್ತ ಚಿತ್ತ ಪಕ್ಷದ ರಾಜ್ಯ ವಿದ್ಯಮಾನಗಳ ಬಗ್ಗೆ ವರಿಷ್ಠರಿಂದ ಮಹತ್ವದ ಸಭೆ



