ಬೇಲೂರು: ಪುಷ್ಪಗಿರಿ ಗ್ರಾಮೀಣಾಭಿವೃದ್ದಿ ಮಹಿಳಾ ಸ್ವಸಹಾಯ ಸಂಘದವರಿಗೆ ಅಣಬೆ ಕೃಷಿ ಬಗ್ಗೆ ಬೇಲೂರು ತಾಲ್ಲೂಕಿನ ಹಗರೆಯಲ್ಲಿ ಪ್ರಾತ್ಯಕ್ಷಿಕೆ ಮತ್ತು ಮಾಹಿತಿಯನ್ನು ತಜ್ಞರಿಂದ ನೀಡಲಾಯಿತು.-ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಮಹಿಳಾ ಸ್ವಸಹಾಯ ಸಂಘದ ಮಹಿಳೆಯರಿಗೆ ಅಣಬೆ ಕೃಷಿ ಪ್ರಾತ್ಯಕ್ಷಿಕೆ ಮತ್ತು ಮಾಹಿತಿಯನ್ನು ಬೇಲೂರು ತಾಲ್ಲೂಕಿನ ಹಗರೆ ವಾಸಿ ಕೊಮ್ಮರನಹಳ್ಳಿ ರವಿರವರ ಸ್ವಗೃಹದಲ್ಲಿ ಪ್ರಾತ್ಯಕ್ಷಿಕೆ ಮತ್ತು ಮಾಹಿತಿಯನ್ನು ತಜ್ಞರಿಂದ ನೀಡಲಾಯಿತು. ಈ ಸಂದರ್ಭದಲ್ಲಿ ಪುಷ್ಪಗಿರಿ ಮಹಾಸಂಸ್ಥಾನ ಶ್ರೀಮಠದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ
ಗಳ ಮತ್ತು ಹಿರಿಯ ತೋಟಗಾರಿಕೆ ವಿಜ್ಞಾನಿ ಡಾ.ಧನಂಜಯ್ ಹಾಗೂ ಅಣಬೆ ಕೃಷಿ ಮಾಹಿತಿ ತಜ್ಞರಾದ ಪ್ರಸಾದಬಾಬು ಇದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಪುಷ್ಪಗಿರಿ ಜಗದ್ಗುರುಗಳು, ಕಳೆದ 2020 ರಲ್ಲಿ ಆರಂಭವಾದ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಇತ್ತೀಚಿನ ದಿನದಲ್ಲಿ ರಾಜ್ಯದ ವಿವಿದೆಡೆ ಸಾವಿರಾರು ಮಹಿಳಾ ಸ್ವಸಹಾಯ ಸಂಘ ರಚಿತವಾಗಿದೆ. ಕೇವಲ ಹಣಕಾಸಿಗೆ ಸೀಮಿತವಾಗದೆ ಉಪಕಸಬು, ಗುಡಿಕೈಗಾರಿಕೆ ಸೇರಿದಂತೆ ವಿವಿಧ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚಿನ ಅಧ್ಯತೆ ನೀಡಲಾಗುತ್ತಿದೆ. ಇತ್ತೀಚಿನ ದಿನದಲ್ಲಿ ಅಣಬೆ ಕೃಷಿ ಲಾಭದಾಯಕವಾದ ಹಿನ್ನಲೆಯಲ್ಲಿ ಈಗಾಗಲೇ ಭಂಡಾರಿಕಟ್ಟೆಯ ರೈತರು ಮತ್ತು ಹಗರೆ ವಾಸಿ ರವಿ ಅವರು ತಮ್ಮ ಸ್ವಗೃಹದಲ್ಲಿ ಅಣಬೆ ಕೃಷಿಯನ್ನು ಆರಂಭಿಸಿದ್ದಾರೆ. ಅಣಬೆ ಕೃಷಿ ಅತ್ಯಂತ ಸೂಕ್ಷ್ಮಮಯಿಂದ ಕೂಡಿದ ನಿಟ್ಟಿನಲ್ಲಿ ಸೂಕ್ತ ತರಬೇತಿ ಪಡೆದು ಕೃಷಿ ಲಾಭಗಳಿಸಬೇಕಿದೆ ಇಲ್ಲವಾದರೆ ನಷ್ಟ ಹೊಂದುತ್ತಾರೆ. ಈಗಾಗಲೇ ತೋಟಗಾರಿಕೆ ಅಧಿಕಾರಿಗಳು ಮತ್ತು ವಿಜ್ಞಾನಿಗಳು ಸ್ಥಳಕ್ಕೆ ಬಂದು ಅಣಬೆ ಸುಧಾರಿತ ಕೃಷಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಮಹಿಳೆಯರು ಸ್ವಸಹಾಯ ಸಂಘದಲ್ಲಿ ಇಂತಹ ಪ್ರಯೋಗಕ್ಕೆ ಮುಂದಾಗಿ, ಸರ್ಕಾರ ಕೂಡ ಅಣಬೆ ಕೃಷಿಗೆ ಸಹಾಯಧನ ನೀಡಲಿದೆ ಎಂದರು.ತೋಟಗಾರಿಕೆ ಹಿರಿಯ ವಿಜ್ಞಾನಿ ಡಾ.ಧನಂಜಯ್ ಮಾತನಾಡಿ, ಅಣಬೆ ಕೃಷಿ ಸುಸ್ಥಿರ ಕೃಷಿಯಾದ ಹಿನ್ನಲೆಯಲ್ಲಿ ಸರ್ಕಾರ ಇಲಾಖೆ ಮೂಲಕ ಹೆಚ್ಚಿನ ಸಹಾಯಧನ ನೀಡಲಿದೆ. ಈ ಬಗ್ಗೆ ಅಸಕ್ತರು ತರಬೇತಿ ಪಡೆದು ಲಾಭದಾಯಕ ಕೃಷಿಯನ್ನು ಕಟ್ಟಿಕೊಳ್ಳಬೇಕಿದೆ. ಪುಷ್ಪಗಿರಿ ಸ್ವಾಮೀಜಿಗಳು ಕರ್ನಾಟಕ ರಾಜ್ಯದ ಮಠ ಪರಂಪರೆಯಲ್ಲಿ ಮಹಿಳಾ ಸಬಲೀಕರಣಕ್ಕೆ ಎಂದೇ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಮಹಿಳಾ ಸ್ವಸಹಾಯ ಸಂಘ ಸ್ಥಾಪಿಸಿ, ಲಕ್ಷಾಂತರ ವೆಚ್ಚದಲ್ಲಿ ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಮತ್ತು ಬ್ಯಾಂಕ್ ನಿಂದ ಸಾಲಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪುಷ್ಪಗಿರಿ ಸಂಘ ಸಾಗಿರುವುದು ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.ಈ ಸಂದರ್ಭದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ಪುಷ್ಪಗಿರಿ ಗ್ರಾಮೀಣಾಭಿವೃದ್ದಿ ಸಂಸ್ಥೆ ಕಾರ್ಯನಿರ್ವಾಹಕ ಅಧಿಕಾರಿ ನಾಗಯ್ಯ, ಹಾಸನ ಜಿಲ್ಲಾ ಯೋಜನಾಧಿಕಾರಿ ವಿನುತಧನಂಜಯ್, ಸ್ವಸಹಾಯ ಸಂಘದ ಪ್ರತಿನಿಧಿ ಗೀತಾಶಿವರಾಜ್, ನಿವೃತ್ತ ಶಿಕ್ಷಕ ಹೆಬ್ಬಾಳು ರಮೇಶಪ್ಪ, ಅಣಬೆ ಕೃಷಿಕರಾದ ರವಿ, ಮಂಜಪ್ಪ, ಚನ್ನಾಪುರ ಶಂಕರಪ್ಪ ಸೇರಿದಂತೆ ಪುಷ್ಪಗಿರಿ ಸಂಘದ ಪದಾಧಿಕಾರಿಗಳು ಹಾಜರಿದ್ದರು.
“ಪುಷ್ಪಗಿರಿ ಸಂಘದ ಮಹಿಳೆಯರಿಗೆ ಅಣಬೆ ಕೃಷಿ ಪ್ರಾತ್ಯಕ್ಷಿಕೆ’’



