ಬಂಗಾರಪೇಟೆ: ಯಾವುದೇ ದಾಖಲೆ ಇಲ್ಲದೆ ಬಿಹಾರದಿಂದ ಹದಿಹರೆಯದ ಮುಸ್ಲಿಂ ಬಾಲಕರನ್ನು ಮದರಸಾ ನೆಪದಲ್ಲಿ ಕರೆತಂದು ಬಂಗಾರಪೇಟೆ ಮೂಲಕ ವಿವಿಧ ಜಿಲ್ಲೆಗಳಿಗೆ ರವಾನೆ ಮಾಡುತ್ತಿರುವುದರ ಬಗ್ಗೆ ತನಿಖೆ ನಡೆಸಲು ಪೊಲೀಸರಿಗೆ ಮನವಿ ನೀಡಲಾಗಿತ್ತು. ಆದರೆ, ಪೊಲೀಸರು ಸಮರ್ಪಕ ತನಿಖೆ ನಡೆಸದೆ ಏಕ ಪಕ್ಷೀಯವಾಗಿ ಅವರನ್ನು ಕಳುಹಿಸಿರುವುದು ದೇಶದ್ರೋಹದ ಪರಾಕಷ್ಟೆಗೆ ಸಾಕ್ಷಿಯಾಗಿದೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ದೂರಿದರು.
ನಗರದ ಪೊಲೀಸ್ ಠಾಣೆಯ ಮುಂಭಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏ. 20ರಂದು ಬಿಹಾರದಿಂದ ಹದಿಹರೆಯದ 42 ಬಾಲಕರನ್ನು ಯಾವುದೇ ದಾಖಲೆಗಳಿಲ್ಲದೆ ಮದರಸಾಗಳಿಗೆ ಸಾಗಿಸಲು ಕರೆತರಲಾಗಿತ್ತು, ಇದರ ಸೂಕ್ತ ತನಿಖೆಗೆ ಆಗ್ರಹಿಸಿ ಶ್ರೀರಾಮ ಸೇನೆಯು ಮೇ 5 ರಂದು ಬಂಗಾರಪೇಟೆ ಪೊಲೀಸ್ ಠಾಣೆಗೆ ಮನವಿಯನ್ನು ಸಲ್ಲಿಸಲಾ
ಗಿತ್ತು, ಆದರೆ ಸದರಿ ಪೊಲೀಸರು ಮತ್ತು ಕೆಜಿಎಫ್ ಬಾಲಮಂದಿರದ ಅಧಿಕಾರಿಗಳು ಕಾಂಗ್ರೆಸ್ ಮತ್ತು ಮುಸ್ಲಿಂ ಮುಖಂಡರ ಒತ್ತಡಕ್ಕೆ ಮನೆದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಕ್ಕಳನ್ನು ರಾತ್ರೋರಾತ್ರಿ ಸಾಗಿಸಿರುವುದು ಅನುಮಾನಗಳನ್ನು ಹುಟ್ಟಿಸುವುದರೊಂದಿಗೆ ದೇಶದ್ರೋಹದ ಕೃತ್ಯಕ್ಕೆ ಸಾಕ್ಷಿಯಾಗಿದೆ ಎಂದು ಗಂಭೀರ ಆರೋಪ ಮಾಡಿದರು.ಮದರಸಾಗಳು ಅಕ್ರಮ ಮತಾಂತರದ ಕೇಂದ್ರಗಳಾಗಿವೆ:ಹದಿಹರಿಯದ ಹಿಂದೂ ಮಕ್ಕಳನ್ನು ಅಕ್ರಮವಾಗಿ ಸಾಗಿಸಿ ಸುನ್ನತ್ ಮಾಡಿಸುವುದರ ಮೂಲಕ ಖುರಾನ್ ಅನ್ನು ಓದಿಸಲಾಗುತ್ತಿದೆ, ಇತ್ತೀಚಿಗೆ ತುಮಕೂರಿನಲ್ಲಿ ಮದರಸಾದಿಂದ ಹೊರಬಂದ 20 ಜನ ಬಾಲಕರು ತಮ್ಮನ್ನು ಮದರಸಾದ ಮುಖ್ಯಸ್ಥರು ಹೆದರಿಸಿ ಬೆದರಿಸಿ ಕರೆತಂದು ಲೈಂಗಿಕ ಮತ್ತು ದೈಹಿಕ ಹಲ್ಲೆ ನಡೆಸಿರುವುದಾಗಿ ದೂರು ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ ಇದಕ್ಕೆ ಸಂಬಂಧಪಟ್ಟಂತೆ ಪ್ರಕರಣವೂ ಸಹ ದಾಖಲಾಗಿದೆ ಒಟ್ಟಾರೆಯಾಗಿ ಮದರಸ ಎಂಬುದು ಒಂದು ಫ್ರಾಡ್ ಸಂಸ್ಥೆಯಾಗಿದ್ದು ಅಕ್ರಮ ಮತಾಂತರದ ಕೇಂದ್ರಗಳಾಗಿವೆ ಎಂದು ಗಂಭೀರ ಆರೋಪ ಮಾಡಿದರು.ನ್ಯಾಯಾಲಯ ತನಿಖೆಗೆ ಆಗ್ರಹ:ಪೋಲಿಸ್ ಇಲಾಖೆ ಹಾಗೂ ಬಾಲಮಂದಿರ ಅಧಿಕಾರಿಗಳು ಸದರಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಮತ್ತು ಪ್ರತ್ಯಾರೋಪಗಳನ್ನು ಮಾಡುತ್ತಿರುವುದು ಹಲವು ಅನುಮಾನಗಳಿಗೆ ಸಾಕ್ಷಿಯಾಗಿದೆ ಈ ನಿಟ್ಟಿನಲ್ಲಿ ಪ್ರಸಕ್ತ ಘಟನೆಗೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದರೊಂದಿಗೆ ತನಿಖೆಗೆ ಆಗ್ರಹಿಸಲಾಗುವುದು ಎಂದರು.ಭಾರತ್ ಫೌಂಡೇಶನ್ ಮುಖ್ಯಸ್ಥನ ಮೇಲೆ ಪ್ರಕರಣ ದಾಖಲಿಸಲು ಸಿದ್ಧ;ಬಿಹಾರದಿಂದ ಐದು ಜನ ಮುಸ್ಲಿಂರು ಮುಖಂಡರು ಬಿಹಾರದಿಂದ ಅಕ್ರಮವಾಗಿ ದಾಖಲೆಗಳಿಲ್ಲದೆ ಒಟ್ಟು 42 ಬಾಲಕರನ್ನು ಕರೆತರಲಾಗಿತ್ತು. ಇವರ ವಿರುದ್ಧ ಪೊಲೀಸ ಇಲಾಖೆ ಯಾವುದೇ ಎಫ್ಐಆರ್ ದಾಖಲು ಮಾಡಿರುವುದಿಲ್ಲ ಹಾಗೂ ಸದರಿ ಮಕ್ಕಳನ್ನು ಸ್ಥಳಾಂತರ ಮಾಡಲು ಭಾರತ್ ಫೌಂಡೇಶನ್ ಮುಖ್ಯಸ್ಥ ನದೀಮ್ ಎಂಬುವರು ಸಹಕರಿಸಿ ತಾವೇ ಸ್ವತಹ ಬಸ್ಸುಗಳನ್ನು ಮಾಡಿ ಬಾಲ ಮಂದಿರದಿಂದ ಮಕ್ಕಳನ್ನು ಸ್ಥಳಾಂತರ ಮಾಡಿರುವುದಾಗಿ ತಿಳಿದು ಬಂದಿದೆ ಇವರ ವಿರುದ್ಧವೂ ಸಹ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಎಫ್ಐಆರ್ ದಾಖಲಿಸುವಂತೆ ಮನವಿ ಮಾಡಲಾಗುವುದು ಎಂದರು.ವಿಶ್ವ ಹಿಂದೂ ಪರಿಷತ್ ಧ್ಯಕ್ಷ ವಿ ಎಸ್ ವೇಣುಗೋಪಾಲ್, ಚೆನ್ನಯ್ಯ ವಸರಾಯಪ್ಪ, ಎಬಿವಿಪಿ ವಿದ್ಯಾರ್ಥಿಗಳು, ವೆಂಕಟ ಸುಬ್ಬಯ್ಯ, ಬ.ನ ಶಿವಕುಮಾರ್ , ಸೇರಿದಂತೆ ಹಲವಾರು ಹಿಂದೂ ಸಂಘಟನೆಗಳ ಮುಖಂಡರು ಹಾಜರಿದ್ದರು.
ಬಿಹಾರದಿಂದ ಹದಿಹರೆಯದ 42 ಬಾಲಕರನ್ನು ಯಾವುದೇ ದಾಖಲೆಗಳಿಲ್ಲದೆ ಮದರಸಾಗಳಿಗೆ ಸಾಗಾಣೆ: ಸೂಕ್ತ ತನಿಖೆಗೆ ಮುತಾಲಿಕ್ ಆಗ್ರಹ



