LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಅಂಬಾಬಾಯಿ ಕನ್ನಡದ ಅನರ್ಘ್ಯ ಮುತ್ತು; ಸತ್ಯವತಿ

ಬೆಂಗಳೂರು: ಯಾಜಿ ಪ್ರಕಾಶನದಿಂದ ಹರಿದಾಸ ಮಹಿಳೆ ಅಂಬಾಬಾಯಿ ವಿರಚಿತ `ಏಕಾಂಗಿ ಕವಯತ್ರಿಯ ಪ್ರವಾಸದ ಡೈರಿ' (1938) ಪುಸ್ತಕ ಲೋಕಾರ್ಪಣಾ ಕಾರ್ಯಕ್ರಮವು 2024 ನ. 19 ಮಂಗಳವಾರದಂದು ನಗರದ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ದ್ ಕಲ್ಚರ್ ನಲ್ಲಿ ನಡೆಯಿತು.ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ವೈದ್ಯ, `ಥಟ್ ಅಂತ ಹೇಳಿ' ಖ್ಯಾತಿಯ ಲೇಖಕ ಡಾ.ನಾ. ಸೋಮೇಶ್ವರ, "ಪ್ರತಿಯೊಂದು ಜೀವಿ ಕೂಡ ತನ್ನ ಅಸ್ತಿತ್ವದ ಉಳಿವಿಗೆ ಪ್ರತಿನಿತ್ಯ ಹೋರಾಟಮಾಡುತ್ತದೆ. ಇದನ್ನು ಬಹಳ ಸ್ಪಷ್ಟವಾಗಿ ನಾವು ಮನುಷ್ಯರಲ್ಲಿ ಕಾಣಬಹುದು.

ಸತಿ ಪದ್ಧತಿಯನ್ನು ನಿರ್ಮೂಲನೆಗೊಳಿಸಲು ರಾಜಾರಾಂ ಮೋಹನರಾಯ್ ಅವರು ತಮ್ಮ ಕುಟುಂಬದ ಜತೆಗೆ ಹೋರಾಟ ನಡೆಸಿದ್ದರು. ಅಗ ಅವರಿಗೆ ಸತಿ ಪದ್ಧತಿಯ ಹಿಂದೆ ಯಾವುದೇ ರೀತಿಯ ದೈವಿಕ ಪರಿಕಲ್ಪನೆಯಿಲ್ಲ ಎಂಬ ಸೂಕ್ಷ ಅವರಿಗೆ ಅರಿವಾಗುತ್ತದೆ. ಯಾವ ಧರ್ಮ ಕೂಡ ನೀನು ಸತಿ ಪದ್ಧತಿಗೆ ಒಳಪಟ್ಟರೆ ನೇರವಾಗಿ ಸ್ವರ್ಗಕ್ಕೆ ಹೋಗಬಹುದು ಎಂದು ಹೇಳುವುದಿಲ್ಲ. ಇದೆಲ್ಲವೂ ಕೂಡ ಜನರ ಪರಿಕಲ್ಪನೆ ಎನ್ನುತ್ತಾ ಮಾನವ ಜನಾಂಗದ ಬೆಳವಣಿಗೆ, ವಿಕಾಸ, ಉದಯವನ್ನು ವಿವರಿಸಿದರು,".

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸಂಗೀತ ಮತ್ತು ಸಂಸ್ಕೃತ ವಿದ್ವಾಂಸೆ ವಿದುಷಿ ಡಾ.ಟಿ.ಎಸ್. ಸತ್ಯವತಿ, "ಅಂಬಾಬಾಯಿ ಎಂದರೆ ಅದೊಂದು ಭಾವ. ಅಂಬಾಬಾಯಿಯವರ ಅಪಾರ ಕೀರ್ತನಾ ಸಂಗ್ರಹಗಳು ಒಂದೊಂದು ಅನಿಮುತ್ತುಗಳು ಇದ್ದ ಹಾಗೆ. ಇಂತಹ ಭಂಡಾರವನ್ನು ನಮಗೆ ಕೊಟ್ಟು ಹೋಗುವುದರ ಹಿಂದೆ ಅವರು ತುಂಬಾ ಸವೆದಿದ್ದಾರೆ, ನೊಂದಿದ್ದರೆ, ಕಷ್ಟಪಟ್ಟಿದ್ದಾರೆ ಹಾಗೆ ಗಂಧದಂತೆ ಸವೆದಿದ್ದಾರೆ.

ಅಂಬಾಬಾಯಿ ಕನ್ನಡದ ಅನರ್ಘ್ಯ ಮುತ್ತು," ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಅನಂತ ಪದ್ಮನಾಭರಾವ್ ಅವರು ವಹಿಸಿದ್ದರು. ವೇದಿಕೆಯಲ್ಲಿ ಕೃತಿಯ ಸಂಪಾದಕಿ ಆಪ್ತ ಸಲಹಾಗಾರ್ತಿ ಡಾ. ಶಾಂತಾ ನಾಗರಾಜ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅನೇಕ ಸಾಹಿತ್ಯಾಸಕ್ತರು ಸೇರಿದ್ದರು. ಕಾರ್ಯಕ್ರಮವನ್ನು ಶೋಭಾ ಹೆಗಡೆ ಅವರು ನಿರೂಪಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು