LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಅನಿವಾಸಿ ಭಾರತೀಯರಿಗಾಗಿ ಎಐ ಆಧರಿತ ರಿಮೋಟ್ ಪೇರೆಂಟ್ ಹೆಲ್ತ್ ಮಾನಿಟರಿಂಗ್ ಸೇವೆ ಡೋಝೀ ಶ್ರವಣ್ ಆರಂಭ

ಬೆಂಗಳೂರು: ಭಾರತದ ಆರೋಗ್ಯ ಕ್ಷೇತ್ರದ ಎಐ ನಾಯಕರಾಗಿರುವ ಡೋಝೀ ಸಂಸ್ಥೆಯು ಅನಿವಾಯಿ ಭಾರತೀಯರನ್ನು ಗಮನದಲ್ಲಿ ಇಟ್ಟುಕೊಂಡು ಕ್ಲಿನಿಕಲ್ ಗ್ರೇಡ್‍ನ ಎಐ ಆಧರಿತ ರಿಮೋಟ್ ಪೇರೆಂಟ್ ಮಾನಿಟರಿಂಗ್ (ಆರ್‍ಪಿಎಂ) ಸೇವೆಯಾದ ಡೋಝೀ ಶ್ರವಣ್ ಅನ್ನು ಆರಂಭಿಸಿದೆ. ಇದು ವಿದೇಶದಲ್ಲಿ ವಾಸಿಸುತ್ತಿರುವ ಮಕ್ಕಳು ಭಾರತದಲ್ಲಿರುವ ತಮ್ಮ ಪೋಷಕರ ಆರೋಗ್ಯದ ಮೇಲೆ ನಿಗಾ ಇಡುವ ಆಧುನಿಕ ವ್ಯವಸ್ಥೆಯಾಗಿದೆ.

ಡೋಝೀ ಶ್ರವಣ್ ಈಗ ವಿದೇಶದಲ್ಲಿರುವ ಕುಟುಂಬಗಳಿಗೆ ಭಾರತದಲ್ಲಿರುವ ತಮ್ಮ ಪೋಷಕರ ಆರೋಗ್ಯವನ್ನು ರೆಗ್ಯುಲರ್ ಆಗಿ ಚೆಕ್ ಮಾಡಲು ಅನುವು ಮಾಡಿಕೊಡುತ್ತದೆ. ಡೋಝೀಯ ಎಐ ಚಾಲಿತ, ಸಂಪರ್ಕರಹಿತ ರಿಮೋಟ್ ಹೆಲ್ತ್ ಮಾನಿಟರಿಂಗ್ ತಂತ್ರಜ್ಞಾನವನ್ನು ವೃದ್ಧರು ಸುಲಭವಾಗಿ ಬಳಸುವಂತೆ ವಿನ್ಯಾಸಗೊಳಿಸಲಾಗಿದೆ. ಅವರ ಆರೋಗ್ಯ ಕುರಿತ ಮಾಹಿತಿಯು ಸುರಕ್ಷಿತವಾಗಿ ಕುಟುಂಬಗಳು ಮತ್ತು ಆರೋಗ್ಯ ಸೇವೆ ಪೂರೈಕೆದಾರರು ಇಬ್ಬರನ್ನೂ ತಲುಪುತ್ತದೆ. ಡೋಝೀಯ ನಿರಂತರ ನಿಗಾವಹಿಸುವಿಕೆ ಮತ್ತು ನೈಜ ಸಮಯದಲ್ಲಿ ನೀಡುವ ಎಚ್ಚರಿಕೆಗಳು ದೇಹದ ಪ್ರಮುಖ ಅಂಶಗಳಲ್ಲಿನ ಸೂಕ್ಷ್ಮ ವ್ಯತ್ಯಾಸಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.

ಜೊತೆಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವಂತೆ ಮಾಡುತ್ತದೆ. ಭಾರತದ ನಂ. 1 ರಿಮೋಟ್ ಪೇಷಂಟ್ ಮಾನಿಟರಿಂಗ್ ಕಂಪನಿಯಾಗಿರುವ ಡೋಝೀ ದೇಶಾದ್ಯಂತ 280ಕ್ಕೂ ಹೆಚ್ಚು ಪ್ರಮುಖ ಆಸ್ಪತ್ರೆಗಳ ವಿಶ್ವಾಸಾರ್ಹ ಪಾಲುದಾರನಾಗಿದೆ.ಲಕ್ಷಾಂತರ ಸಂಖ್ಯೆಯಲ್ಲಿರುವ ಅನಿವಾಸಿ ಭಾರತೀಯರಿಗೆ ಭಾರತದಲ್ಲಿರುವ ತಮ್ಮ ಪೋಷಕರ ಆರೋಗ್ಯ ನೋಡಿಕೊಳ್ಳುವುದು ಬಹಳ ದೊಡ್ಡ ಸವಾಲಾಗಿದೆ. ಆಗಾಗ ಬಂಧಗಳು ಮತ್ತು ನೆರೆಹೊರೆಯವರ ಸಹಾಯದಿಂದ ಚೆಕ್ ಅಪ್ ಗಳು ಮಾಡಿಸಬಹಾದರೂ ಮತ್ತು ಸೀಮಿತ ಟೆಲಿ ಮೆಡಿಸಿನ್ ಅವಕಾಶ ಇದ್ದರೂ ತುರ್ತು ಪರಿಸ್ಥಿತಿಗಳಲ್ಲಿ ಈ ವ್ಯವಸ್ಥೆಗಳು ಒದಗಿ ಬರುವುದು ಬಹಳ ಕಡಿಮೆ. ಆರಂಭಿಕ ಹಂತದಲ್ಲಿಯೇ ಸಂಕೀರ್ಣ ಆರೋಗ್ಯ ಸಮಸ್ಯೆ ಪತ್ತೆ ಹಚ್ಚದಿದ್ದರೆ ಅದರ ಪರಿಣಾಮ ತೀವ್ರವಾಗಿರುತ್ತದೆ.

ಆರಂಭದಲ್ಲಿ ಸುಲಭವಾಗಿ ನಿರ್ವಹಿಸಬಹುದಾದ ಸಮಸ್ಯೆಗಳು ತಡವಾ ದಾಗ ಕೈಮೀರಿ ಸಾಧ್ಯತೆಯೇ ಹೆಚ್ಚು. ಪ್ರಸ್ತುತ ಲಭ್ಯವಿರುವ ಪರಿಹಾರಗಳು ಅಷ್ಟೊಂದು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಬಹುತೇಕ ಹಿರಿಯ ವ್ಯಕ್ತಿಗಳು ಈಗ ಇರುವ ವ್ಯವಸ್ಥೆಗಳಲ್ಲಿ ಅಸಮಾಧಾನ ಹೊಂದಿಪರುತ್ತಾರೆ ಅಥವಾ ಅವುಗಳನ್ನು ಬಳಸಲು, ಚಾರ್ಜ್ ಮಾಡಲು ಅಥವಾ ನಿರ್ವಹಿಸಲು ಮರೆಯುತ್ತಾರೆ. ನಿರಂತರ ವಾಗಿ ನೈಜ ಸಮಯದ ಡೇಟಾ ಮಾನಿಟರಿಂಗ್ ಮಾಡುವಿಕೆ ಮತ್ತು ಸಮಸ್ಯೆ ಕುರಿತು ಎಚ್ಚರಿಕೆ ನೀಡುವ ವ್ಯವಸ್ಥೆಯು ಸದ್ಯದ ತುರ್ತಾಗಿತ್ತು. ಇವೆಲ್ಲವೂ ದೂರದಲ್ಲಿದ್ದುಕೊಂಡೇ ದತ್ತಾಂಶ ಸುರಕ್ಷತೆ ಮತ್ತು ಗೌಪ್ಯತೆಯ ಅಂತರರಾಷ್ಟ್ರೀಯ ಮಾನದಂಡಗಳಿಗೆ ಬದ್ಧವಾಗಿ ತಮ್ಮ ಪ್ರೀತಿಪಾತ್ರ ರನ್ನು ನೋಡಿಕೊಳ್ಳಲು ಕುಟುಂಬಸ್ಥರಿಗೆ ನೆರವಾಗುವ ಸಮಗ್ರವಾದ, ಪ್ರಾಯೋಗಿಕವಾಗಿ ಸಾಬೀತಾಗಿರುವ, ನೈಜ ಸಮಯದ, ನಿಖರ ವಾದ, ವಿಶ್ವಾಸಾರ್ಹ ಮತ್ತು ಬಳಕೆದಾರ ಸ್ನೇಹಿ ನಿಗಾವಹಿಸುವಿಕೆ ಸೌಲಭ್ಯವನ್ನು ಒದಗಿಸುವ ತುರ್ತು ಅಗತ್ಯವನ್ನು ಸಾರುತ್ತದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು