LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ಆವತಿ ಗ್ರಾಮ ಪಂಚಾಯ್ತಿ ಮೊದಲ ಹಂತದ ಗ್ರಾಮಸಭೆ ಜಲಜೀವನ್ ಮಿಷನ್‍ನಿಂದ ಸಾರ್ವಜನಿಕರಿಗೆ ಕಿರಿ-ಕಿರಿ

ದೇವನಹಳ್ಳಿ : ಗ್ರಾಮ ಪಂಚಾಯ್ತಿಗಳಲ್ಲಿ ನಡೆಯುವ ಗ್ರಾಮ ಸಭೆಗಳಲ್ಲಿ ನಾಗರೀಕರ ಕುಂದುಕೊರತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿರುತ್ತದೆ, ಅದೇ ರೀತಿ ಪಂಚಾಯ್ತಿ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಗ್ರಾಮಗಳ ಯಾವುದೇ ಸಮಸ್ಯೆಗಳಿದ್ದಲ್ಲಿ ಪಂಚಾಯ್ತಿಗೆ ಲಿಖಿತ ದೂರುಗಳನ್ನು ನೀಡಿ ನಾವು ಕ್ರಿಯಾಯೋಜನೆ ಮೂಲಕ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಗ್ರಾ.ಪಂ. ಸದಸ್ಯ ಅತ್ತಿಬೆಲೆ ನರಸಪ್ಪ ತಿಳಿಸಿದರು.

ಅವರು ತಾಲ್ಲೂಕಿನ ಆವತಿ ಗ್ರಾಮ ಪಂಚಾಯ್ತಿಯ 2023-24ನೇ ಸಾಲಿನ ಮೊದಲಹಂತದ ಗ್ರಾಮಸಭೆಯಲ್ಲಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಅನೇಕ ತೊಂದರೆಗಳಿದ್ದು ಅವುಗಳನ್ನು ಪಿ.ಡಿ.ಓ ಹಾಗೂ ಅಧ್ಯಕ್ಷರು ಹಾಗೂ ಸದಸ್ಯರ ಜೊತೆಗೂಡಿ ಇಲ್ಲಿನ ಸಮಸ್ಯೆ ಗಳನ್ನು ಪರಿಹರಿಸಲಾಗುವುದು ಎಂದರು.
ಕೇಂದ್ರ ಸರ್ಕಾರದ ಜಲಜೀವನ್ ಮಿಷನ್‍ನ ಗುತ್ತಿಗೆದಾರರು ನೀರಿನ ಸಂಪರ್ಕ ಕಲ್ಪಿಸಲು ಗ್ರಾಮಗಳಲ್ಲಿ ರಸ್ತೆಗಳನ್ನು ಹಾಳು ಮಾಡುತ್ತಿದ್ದು,

ಸರಿಯಾಗಿ ಮುಚ್ಚದೆ ಬಿಟ್ಟು ಹೋಗುತ್ತಿದ್ದಾರೆ, ಇದು ಒಂದು ಗ್ರಾಮದ ಸಮಸ್ಯೆಯಲ್ಲ ಎಲ್ಲಾ ಗ್ರಾಮಗಳಲ್ಲೂ ಈ ಅವ್ಯವಸ್ಥೆ ಮಾಡಿದ್ದಾರೆ ಎಂದು ಉಪಾಧ್ಯಕ್ಷೆ ಸೌಭಾಗ್ಯ ತಿಳಿಸಿದರು, ಇದಕ್ಕೆ ಜಲಜೀವನ್ ಮಿಷನ್‍ನ ಈ ಭಾಗದ ಇಂಜಿನಿಯರ್ ಜಗದೀಶ್ ಉತ್ತರ ನೀಡಿ ಈ ಎಲ್ಲಾ ಸಮಸ್ಯೆಗಳನ್ನು ಆದಷ್ಟು ಬೇಗ ನಿವಾರಿಸಲಾಗುವುದು ಎಂದರು,

ಬೆಸ್ಕಾಂನ ಸಮಸ್ಯೆ, ಶಿಕ್ಷಣ ಇಲಾಖೆಯ ಬಗ್ಗೆ ಕೆಲವರು ಮಾತನಾಡಿ ಸರಿಯಾಗಿ ಪಾಠ ಮಾಡಿ ನಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಎಂದರೆ ಮುಖ್ಯ ಶಿಕ್ಷಕ ನಿಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಿ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ ಎಂದರು.ಗ್ರಾಮದ ಮುಖಂಡ ತಿಮ್ಮರಾಯಪ್ಪ ಗ್ರಾಮಗಳ ಹಲವಾರು ಸಮಸ್ಯೆಗಳನ್ನು ವಿವರ ವಾಗಿ ತಿಳಿಸಿ ಬಗೆಹರಿಸುವಂತೆ ಪಂಚಾಯ್ತಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಗ್ರಾಮದ ಯುವಕ ಚಂದ್ರು ಮಾತನಾಡಿ ಗ್ರಾಮದ ಯುವಕರು ಹಾಗೂ ವಿದ್ಯಾರ್ಥಿಗಳು ಆಟದ ಮೈದಾನವಿಲ್ಲ, ಹತ್ತು ಆಸ್ಪತ್ರೆ ನಿರ್ಮಿಸುವ ಬದಲು ಒಂದು ಆಟದ ಮೈದಾನವಿದ್ದರೆ ಕೆಲವು ರೋಗಗಳಿಂದ ದೂರವಿರಬಹುದು ಆದ್ದರಿಂದ ತ್ವರಿತವಾಗಿ ಆಟದ ಮೈದಾನ ಮಾಡಿಸಬೇಕು ಎಂದು ಮನವಿ ಮಾಡಿದರು..
ಕಂದಾಯ ಇಲಾಖೆಯ ಉಪೇಂದ್ರ, ಶಿಕ್ಷಣ ಇಲಾಖೆಯ ಜಯಂತಿ, ಗ್ರಾ.ಪಂ. ಪಿಡಿ.ಓ ಎಸ್.ಎಂ.ಡಿ. ಇಸಾಕ್, ಅಧ್ಯಕ್ಷೆ ಮುನಿರತ್ನಮ್ಮ ಮುನಿರಾಜು, ಉಪಾಧ್ಯಕ್ಷೆ ಸೌಭಾಗ್ಯ ಮುನಿತಿಮ್ಮರಾಯಪ್ಪ, ಎಂ. ಪ್ರೇಮ ಎಂ.ನಾಗರಾಜ್, ಭವ್ಯ ಸತೀಶ್‍ಬಾಬು, ಎನ್.ಉಮೇಶ್, ನಾಗವೇಣಿ ನರಸಿಂಹಮೂರ್ತಿ, ಕೆ. ನಾರಾಯಣಸ್ವಾಮಿ, ಎಂ. ವಿಶ್ವನಾಥ್, ಟಿ.ಮಾಲಾ ಆಂಜಿನಪ್ಪ, ಪ್ರಮೀಳಾ ಜಿ.ರಾಮಚಂದ್ರ, ನರಸಿಂಹಮೂರ್ತಿ ಗೋಪಾಲಕೃಷ್ಣ, ಎಂ. ಪ್ರೇಮ ಎಂ. ನಾಗರಾಜ್, ಟಿ.ಕೆ. ಭವ್ಯ ಹಾಜರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು