LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Belagavi

ಇಂದಿನ ಅಧಿವೇಶನದಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ ನಿಧನರಾದ ಮಾಜಿ ಸಿಎಂ ಎಸ್​ಎಂ ಕೃಷ್ಣಗೆ ನುಡಿ ನಮನ ಸಲ್ಲಿಸಿದರು

ಬೆಳಗಾವಿ: ಬೆಳಗಾವಿ ಅಧಿವೇಶನದ ನಾಲ್ಕನೇ ದಿನವಾದ ಗುರುವಾರ ಕಲಾಪದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಮಂಗಳವಾರ ನಿಧನರಾದ ಮಾಜಿ ಸಿಎಂ ಎಸ್​ಎಂ ಕೃಷ್ಣಗೆ ನುಡಿ ನಮನ ಸಲ್ಲಿಸಿದರು. ಇದೇ ವೇಳೆ ಅವರು ಜ್ಯೋತಿಷಿಯೊಬ್ಬರು ಅಂದು ಎಸ್​ಎಂ ಕೃಷ್ಣ ಹಾಗೂ ತಮ್ಮ ಬಗ್ಗೆ ನುಡಿದಿದ್ದ ಭವಿಷ್ಯವಾಣಿಯನ್ನು ನೆನಪಿಸಿಕೊಂಡರು. ಇದು ಡಿಕೆ ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಆರ್ ಅಶೋಕ್ ಮಧ್ಯೆ ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು.

ಎಸ್​​ಎಂ ಕೃಷ್ಣ ಅವರು ರಾಜ್ಯಸಭೆ ಸದಸ್ಯರಾಗುವ ಬಗ್ಗೆ ಜ್ಯೋತಿಷಿ ಹೇಳಿದ್ದರು. ನನಗೂ ಅದೇ ಜ್ಯೋತಿಷಿ, ನೀನು ಇಷ್ಟು ವರ್ಷ ಶಾಸಕ ಆಗುತ್ತೀಯಾ, ಮಂತ್ರಿ ಆಗುತ್ತಿಯಾ, ನಿನಗೆ ಟಿಕೆಟ್ ಸಿಗಲ್ಲ ಎಂಬ ಭವಿಷ್ಯಗಳನ್ನು ನುಡಿದಿದ್ದರು. ಏನೇನು ಸ್ಥಾನ ಸಿಕ್ಕಿದೆ ಎಂದೂ ಹೇಳಿದ್ದರು ಎಂದು ಡಿಕೆ ಶಿವಕುಮಾರ್ ಹೇಳಿದರು.

ಮುಂದುವರಿದು, ಅಶೋಕ್ ಅವರೇ ಜ್ಯೋತಿಷಿ ಏನೇನು ಹೇಳಿದ್ದಾರೆ ಅಂತ ಇಲ್ಲಿ ಹೇಳಿದರೆ ನಿಮ್ಮ (ಬಿಜೆಪಿ) 25 ಶಾಸಕರು, ದಳದವರು ನಮ್ಮ ಕಡೆ ಬರಲಿದ್ದಾರೆ. ಹಾಗಾಗಿ ಅ ಬಗ್ಗೆ ಇಲ್ಲಿ ಚರ್ಚೆ ಬೇಡ, ಕೊಠಡಿಯಲ್ಲಿ ಮಾತನಾಡೋಣ ಎಂದರು. ಇದರಿಂದ, ಜ್ಯೋತಿಷಿ ಡಿಕೆ ಶಿವಕುಮಾರ್​ಗೆ ಸಿಎಂ ಆಗುವ ಭವಿಷ್ಯ ನುಡಿದಿದ್ದರೇ ಎಂಬ ಅನುಮಾನ ವ್ಯಕ್ತವಾಗಿದೆ.

ಡಿಕೆ ಶಿವಕುಮಾರ್ ಮಾತಿಗೆ ಪ್ರತಿಕ್ರಿಯಿಸಿದ ಅಶೋಕ್, ನಿಮ್ಮ ಮಾತಿಗೆ ಸಹಮತ ಇದೆ. ಬಹುಶಃ ನೀವೇ ನಮ್ಮ ಕಡೆಗೆ ಬರಬಹುದು. ಆಗ ನಾವೆಲ್ಲಾ ನಿಮ್ಮ ಜೊತೆ ಬರುತ್ತೇವೆ ಎಂದರು.

ಎಸ್ಎಂ ಕೃಷ್ಣ ಅವರ ನಿಧನ ನನಗೆ ದುಃಖ ತಂದಿಲ್ಲ, ಬದಲಿಗೆ ಸಂತೋಷ ತಂದಿದೆ. ಹುಟ್ಟಿದ ಮೇಲೆ ಒಬ್ಬ ಮನುಷ್ಯ ಸಾಯಲೇಬೇಕು. ಕೃಷ್ಣ ಅವರು 92 ವರ್ಷಗಳ ತುಂಬು ಜೀವನ ನಡೆಸಿದ್ದಾರೆ. ಕೊನೆಯ ನಾಲ್ಕು ತಿಂಗಳು ಮಾತ್ರ ಅನಾರೋಗ್ಯಕ್ಕೆ ತುತ್ತಾಗಿ ಇದ್ದರು. ನಮ್ಮದು ರಾಜಕೀಯ ನಂಟು, ವೈಯಕ್ತಿಕ ಸಂಬಂಧ. ಅವರ ಬದುಕು ಬಹಳ ಹತ್ತಿರದಿಂದ ನೋಡಿದ್ದೇನೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ನಾನು ಕೃಷ್ಣ ಅವರಿಂದ ರಾಜಕೀಯ ಶುರು ಮಾಡಲಿಲ್ಲ. ನಾನು ಬಂಗಾರಪ್ಪ ಅವರಿಂದ ವಿದ್ಯಾರ್ಥಿ ರಾಜಕೀಯ ಆರಂಭ ಮಾಡಿದ್ದು. ಬಂಗಾರಪ್ಪ ಹೊಸ ಪಕ್ಷ ಕಟ್ಟಿದಾಗ ನಾನು ಕೃಷ್ಣ ಅವರ ಜೊತೆ ಹೋದೆ. ಆಗ ನಾನು ರಾಜಕೀಯದಲ್ಲಿದ್ದೆ, ಶಾಸಕ ಆಗಿದ್ದೆ. ನಮ್ಮಿಬ್ಬರದ್ದು ತಂದೆ ಮಗನ ಸಂಬಂಧ ತರಹ ಇತ್ತು. ಒಂದೆರಡು ಮೂರು ವಿಚಾರಗಳಲ್ಲಿ ನನಗೂ ಕೃಷ್ಣ ಅವರಿಗೂ ಭಿನ್ನಾಭಿಪ್ರಾಯ ಇತ್ತು, ಅದೇನು ಅಂತ ನಾನು ಇಲ್ಲಿ ಹೇಳುವುದಿಲ್ಲ. ಆದರ್ಶ ಇಲ್ಲದ ಬದುಕು ಬದುಕಲ್ಲ ಅಂತ ವಿವೇಕಾನಂದ ಹೇಳಿದ್ದಾರೆ. ಕೃಷ್ಣ ಅವರು ಆದರ್ಶದ ಬದುಕು ಬಿಟ್ಟು ಹೋಗಿದ್ದಾರೆ. ಅವರು 92 ವರ್ಷ ತುಂಬು ಜೀವನ ನಡೆಸಿದ್ದಾರೆ. ಅರ್ಥಪೂರ್ಣವಾದ ಸಂಪೂರ್ಣ ಬದುಕು ಅವರದ್ದು. ಈ ವಿಚಾರದಲ್ಲಿ ಸಂತಸವಿದೆ ಎಂದ ಅವರು ಹೇಳಿದ್ದಾರೆ.

ನಂತರ ಮಾತನಾಡಿದ ಅಶೋಕ್, ಎಸ್​ಎಂ ಕೃಷ್ಣಗೆ ನಮನ ಸಲ್ಲಿಸಿದರು. ಅಂತ್ಯಸಂಸ್ಕಾರಕ್ಕೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದಕ್ಕೆ ಡಿಕೆ ಶಿವಕುಮಾರ್ ಹಾಗೂ ಶಾಸಕ ಅಶ್ವತ್ಥನಾರಾಯಣಗೆ ಅಭಿನಂದನೆ ಸಲ್ಲಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು