LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಉಪೇಂದ್ರ ಹುಟ್ಟುಹಬ್ಬ `ನೆಕ್ಸ್ಟ್ ಲೆವೆಲ್' ಫಸ್ಟ್ ಲುಕ್ ರಿಲೀಸ್!


ಉಪೇಂದ್ರಗೆ (ಸೆ.18) ಹುಟ್ಟುಹಬ್ಬದ ಸಂಭ್ರಮ.   ಅವರ ಹೊಸ ಚಿತ್ರ `ನೆಕ್ಸ್ಡ್ ಲೆವೆಲ್’ ಸಿನಿಮಾದ  ಫಸ್ಟ್ ಲುಕ್ ಪೋಸ್ಟರ್ ಅಧಿಕೃತವಾಗಿ ಬಿಡುಗಡೆಯಾಗಿದೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ  ಮೂಡಿಬರುತ್ತಿರುವ ಈ ಚಿತ್ರಕ್ಕೆ ನಿರ್ದೇಶಕ ಅರವಿಂದ್ ಕೌಶಿಕ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಪೋಸ್ಟರ್ ಶೈಲಿಯನ್ನು ಗಮನಿಸಿದರೆ ಇದೊಂದು ವಿಭಿನ್ನ ಚಿತ್ರ ಅನಿಸಿದೆ.ಇತ್ತೀಚೆಗಷ್ಟೇ  ಚಿತ್ರದ ಮುಹೂರ್ತ ಸಮಾರಂಭ ನೆರವೇರಿದ್ದು,  ನಟಿ ಆರಾಧನಾ,  ಉಪೇಂದ್ರಗೆ ನಾಯಕಿಯಾಗಿದ್ದಾರೆ.  ಈ ಸಿನಿಮಾದಲ್ಲಿ ಅವರು ಅತ್ಯಂತ ಗ್ಲಾಮರಸ್ ಹಾಗೂ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮುಖ್ಯಮಂತ್ರಿಯ ಮಗಳ ಪ್ರಭಾವಿ ಪಾತ್ರಕ್ಕೆ ಜೀವ ತುಂಬುತ್ತಿರುವುದು ನಟ ನಿರಂಜನ್ ಸುಧೀಂದ್ರ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಚಿಕ್ಕಪ್ಪನ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ತರುಣ್ ಶಿವಪ್ಪ ಹಾಗೂ ಮಾನಸಾ ತರುಣ್,  ಈ ಚಿತ್ರವನ್ನು ದೊಡ್ಡ ಬಜೆಟ್‌ನಲ್ಲಿ ತಯಾರಿಸಲಾಗುತ್ತಿದೆ ನಾಯಕನ ಜನ್ಮದಿನದಂದೇ ಹೊರಬಿದ್ದಿರುವ ಈ `ನೆಕ್ಸ್÷್ಟ ಲೆವೆಲ್’ ಅಪ್‌ಡೇಟ್ ಉಪ್ಪಿ ಅಭಿಮಾನಿಗಳಿಗೆ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST