LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಎಂಎಸ್‍ಎನ್ ಬರವಣಿಗೆ ಐತಿಹಾಸಿಕ ಸಾಧನೆ

55 ವರ್ಷಗಳಲ್ಲಿ ಹಂತ ಹಂತವಾಗಿ ಎಂಎಸ್‍ಎಂ ಸಾಹಿತ್ಯ ಕ್ಷೇತ್ರ ದಲ್ಲಿ ಬೆಳೆದ ಬಗ್ಗೆ ವರ್ಣನೆ ಮಾಡಿದ ಡಾ.ಬಾಬು ಕೃಷ್ಣಮೂರ್ತಿಯವರು ಇದೊಂದು ಐತಿಹಾಸಿಕ ಸಾಧನೆ, ಹನ್ನರಡು ಸಾವಿರ ಸಂಚಿಕೆ ಗಳಿಗೆ ಟಿವಿ ಸಂಭಾಷಣೆ ಬರೆಯುವುದು ಸಾಮಾನ್ಯ ಮಾತಲ್ಲ ಎಂಬುದಾಗಿ ಮೆಚ್ಚುಗೆ ಸೂಚಿಸಿದರು.

ಎಂಎಸ್‍ಎನ್ - 75 ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಾ ಹಾಸ್ಯ ಸಾಹಿತ್ಯ ಸಾಮಾಜಿಕ ಸಾಂಸಾರಿಕ ನೆಮ್ಮದಿಯನ್ನು ಉಂಟುಮಾಡುತ್ತದೆ, ಹಾಸ್ಯದ ಮುಖಾಂತರವಾಗಿ ಸಮಾಜವನ್ನು ತಿದ್ದಲು ಸಾಧ್ಯವಿದೆ, ಇಂಥ ಕೆಲಸ ಎಂಎಸ್‍ಎಂ ಮಾಡುತ್ತಿದ್ದಾರೆ ಎಂಬುದಾಗಿ ಹೇಳಿದರು. ಎಂಎಸ್‍ಎನ್ ಬರೆದ ಪುತ್ರಕಾಮ್ಯ ಕಾದಂಬರಿಯನ್ನು ಬಿಡುಗಡೆ ಮಾಡಿದ ಡಾಕ್ಟರ್ ಸೋಮೇಶ್ವರ ಅವರು ಇದು JAJ ತಂತ್ರಜ್ಞಾನದ ಅನುಕೂಲತೆಗಳನ್ನು ಕುರಿತ ಮೊದಲ ಹಾಸ್ಯ ಕಾದಂಬರಿ ಎಂದು ತಿಳಿಸಿ ಮಹಾಭಾರತದ ಕಾಲದಲ್ಲಿ ಇದ್ದ ನಿಯೋ ಗ ಪದ್ಧತಿಯ ವಿವರಗಳನ್ನು ನೀಡಿದರು.

ಮಹಾ ಭಾರತದ ನಿಯೋಗ ಪದ್ಧತಿಯೇ ಇಂದಿನ ಐವಿಎಫ್‍ಆಗಿ ಪರಿವರ್ತನೆ ಹೊಂದಿದೆ. ಈ ಕಾದಂಬರಿ ಪ್ರತಿಪುಟದಲ್ಲೂ ನಗಿಸುತ್ತಾ ಓದಿಸಿ ಕೊಳ್ಳುತ್ತಾ ಹೋಗುತ್ತದೆ ಎಂದು ಪ್ರಶಂಸೆ ಮಾಡಿದರು.ಸಿಹಿಕಹಿ ಚಂದ್ರು ಅವರು ಮಾತನಾಡುತ್ತಾ ತಮ್ಮ ಮತ್ತು ಎಂ ಎಸ್ ಎನ್ ಅವರ ಟಿವಿ ಕ್ಷೇತ್ರದ ಸಂಬಂಧ 30 ವರ್ಷದ್ದು ಎಂದು ವರ್ಣಿಸಿ ಪಾಪ ಪಾಂಡು ಸಿಲ್ಲಿ ಲಲ್ಲಿ ಸೇರಿದಂತೆ ಅವರು ಬರೆದಿರುವ ಹನ್ನೆರಡು ಸಾವಿರ ಎಪಿಸೋಡ್ಗಳಲ್ಲಿ ತಮಗೆ 8,000 ಎಪಿಸೋಡ್ ಗಳನ್ನು ಬರೆದಿದ್ದಾರೆ.

ಎಲ್ಲೂ ಯಾವತ್ತೂ ಯಾವುದೇ ಜೋಕನ್ನು ಅವರು ರಿಪೀಟ್ ಮಾಡಿಲ್ಲ, ಜೋಕುಗಳ ಪುನರಾವರ್ತನೆ ಆಗಿಲ್ಲ, ಶಿಸ್ತಿನ ಬರವಣಿಗೆ ಇವರದು ಎಂದರು. ಜಾಗೃತಿ ಟ್ರಸ್ಟ್ ನವರು ಏರ್ಪಡಿಸಿದ್ದ ಈ ಸುಂದರ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಿಕ್ಕಿರಿದ ಪ್ರೇಕ್ಷಕರಿಂದ ಸತತ ಕರತಾಡನಗಳು ಆಗುತ್ತಿತ್ತು. ಅಧ್ಯಕ್ಷ ನಾಗೇಶ್ ಅವರು ಇದೇ ಸಂದರ್ಭದಲ್ಲಿ ಹತ್ತು ಮಹಿಳಾ ಸಾಧಕಿಯರಿಗೆ ಕೆಂಪಮ್ಮ ಪ್ರಶಸ್ತಿ ವಿತರಣೆ ಮಾಡಿದರು. ಸರ್ಕಾರದ ಸಾರಿಗೆ ಇಲಾಖೆಯ ಉಪ ಕಾರ್ಯದರ್ಶಿಗಳಾಯದ ಬಿ ಎಸ್ ಮಂಜುನಾಥ್ ಅವರು ಕೆಂಪೇಗೌಡರ ತಾಯಿ ಕೆಂಪಮ್ಮ ಸಾಧನೆಗಳನ್ನ ವರ್ಣನೆ ಮಾಡಿದರು. ಮಗನನ್ನು ಉಳಿಸಿಕೊಳ್ಳಲು ತಾಯಿ ಕೆಂಪಮ್ಮ ಅದೆಷ್ಟು ಕಷ್ಟ ಪಟ್ಟಳು ಎಂಬುದನ್ನು ವರ್ಣಿಸಿದರು.

ಆ ಮಗನೇ ಅನಂತರದ ದಿನಗಳಲ್ಲಿ ಕೆಂಪೇಗೌಡನಾಗಿ ಬೆಂಗಳೂರು ಕಟ್ಟಿದ ಚಾರಿತ್ರಿಕ ಪುರುಷ ಎಂಬ ವಿಷಯವನ್ನು ಸ್ವಾರಸ್ಯಪೂರ್ಣವಾಗಿ ತಿಳಿಸಿದರು. ಪತ್ರಿಕಾ ಸಂಪಾದಕಿ ಡಾ. ಜಿ.ವೈ.ಪದ್ಮ ನಾಗರಾಜು, ಚಿತ್ರ ನಟಿ ರೇಖಾದಾಸ್ ಜಾನಪದ ಗಾಯಕಿ ಅಂಬುಜ ಬೀರಪ್ಪ ಮೊದಲಾದವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು