ಆಕರ್ಷಕ ಶೀರ್ಷಿಕೆಯಲ್ಲೆ ಗಮನ ಸೆಳೆದಿರುವ `ಕೊನೆಯಪತ್ರ’ ಚಿತ್ರದ ಎರಡು ರೀತಿಯ ಮೋಷನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಶ್ರೀ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಇದೇ ಸಂದರ್ಭದಲ್ಲಿ ಮಮತಾದೇವರಾಜು, ಡಾಗ್ ಸತೀಶ್ ಹಾಗೂ ಸಿನಿಪಂಡಿತರು ಹಾಜರಿದ್ದು ತಂಡಕ್ಕೆ ಶುಭ ಹಾರೈಸಿದರು. ಕೋಸಲ ಕ್ರಿಯೇಟೀವ್ ವರ್ಕ್್ಸ ಪ್ರೆöÊವೆಟ್ ಲಿಮಿಟಿಡ್ ಬ್ಯಾನರ್ ಅಡಿಯಲ್ಲಿ ಅನಂತಪುರ ಮೂಲದ ರಾಜಕೀಯ ಮುಖಂಡ ಬಿ.ನಾಗರಾಜು ನಿರ್ಮಾಣ ಮಾಡುತ್ತಿರುವುದು ನೂತನ ಅನುಭವ. ಚಂದನವನದಲ್ಲಿ ಹತ್ತು ವರ್ಷಗಳ ಕಾಲ ಏಳು ಚಿತ್ರಗಳಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದ ಸ್ಪುರದ್ರೂಪಿ ಭಾರ್ಗವ್.ಬಿ.ವಿ ಹೊಸ ಪ್ರಯೋಗ ಎನ್ನುವಂತೆ ಸಿನಿಮಾಕ್ಕೆ ಕಥೆ,ಚಿತ್ರಕಥೆ ಬರೆದು ನಿರ್ದೇಶನ ಮಾಡುವ ಜತೆಗೆ ನಾಯಕನಾಗಿ ನಟಿಸುತ್ತಿದ್ದಾರೆ.ಐರಾ ಮೆನನ್, ಶಬೀನ ನಾಯಕಿಯರು. ನಿರ್ಮಾಪಕರ ಪುತ್ರ ಸಾಯಿ ಕಿಶೋರ್ ನಾಯಕನ ಗೆಳಯನಾಗಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಇವರೊಂದಿಗೆ ವೇದಶ್ರೀ, ಬಲರಾಜವಾಡಿ, ಕಿಲ್ಲಿ ಕ್ರಾಂತಿ, ಚತ್ರಪತಿ ಶೇಖರ್, ಪ್ರೇಮ್ ಸಾಗರ್, ಜಬರ್ ದಸ್ತ್ ನವೀನ್, ಶೃತಿ, ತಗುಬಾತು ಶ್ರೀನು, ಟೆಸ್ಟಿ ತೇಜ ಮುಂತಾದವರು ಅಭಿನಯಿಸುತ್ತಿದ್ದಾರೆ.ನಾಲ್ಕು ಹಾಡುಗಳಿಗೆ ಪೆದ್ದಪಲ್ಲಿ ರೋಹಿತ್ (ಪಿಆರ್) ಸಂಗೀತ, ಛಾಯಾಗ್ರಹಣ ಆರ್ಯ ಸಾಯಿಕೃಷ್ಣ, ಸಾಹಸ ಶ್ರೀರಾಮ್, ಸಾಹಿತ್ಯ ವಿಷ್ಣುವರ್ಧನ್-ಡಾ.ವೆನಿಗಲ್ಲ ರಾಂಬಾಬು ಅವರದಾಗಿದೆ.ನಿರ್ದೇಶಕರು ಮಾತನಾಡಿ, `ಕೊನೆಯಪತ್ರ’ ಎಂದಾಕ್ಷಣ ಕ್ಲಾಸಿಕಲ್ ಟಚ್ ಅನ್ನಿಸಬಹುದು. ಆದರೆ ಇದೊಂದು ಔಟ್ ಅಂಡ್ ಔಟ್ ಮಾಸ್ ಕಂಟೆಂಟ್ ಹೊಂದಿದ್ದು, ಬಹಳಷ್ಟು ವಿಚಾರಗಳನ್ನು ಒಳಗೊಂಡಿದೆ. ಹಳ್ಳಿಯಲ್ಲಿರುವ ನರಸಾಪುರದ ನರಸಿಂಹ ಹೆಸರಿನಲ್ಲಿ ರಗಡ್ ಆಗಿರುವ ಆತನಿಗೆ ಒಂದು ಪತ್ರ ಬರುತ್ತದೆ. ಸದರಿ ಪತ್ರವು ಹೇಗೆ ಅವನನ್ನು ಬದಲಾಯಿಸುತ್ತದೆ. ಮುಂದೆ ಹೇಗೆಲ್ಲಾ ಬದಲಾವಣೆಗೊಳ್ಳುತ್ತಾನೆ ಎಂಬುದು ಸಿನಿಮಾದ ಸಾರಾಂಶ ಇರಲಿದೆ. ಚಿತ್ರವು ಎರಡು ಭಾಗದಲ್ಲಿ ಮೂಡಿ ಬರಲಿದೆ. ಹೈದರಬಾದ್, ಮಂಗಳೂರು, ಉಡುಪಿ, ಕನಕಪುರ ಕಡೆಗಳಲ್ಲಿ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಲಾಗಿದೆ ಎಂಬುದಾಗಿ ಮಾಹಿತಿ ತೆರೆದಿಟ್ಟರು. ನಿರ್ಮಾಪಕರು ಹೇಳುವಂತೆ ಸಿನಿಮಾವನ್ನು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಪ್ರತ್ಯೇಕವಾಗಿ ಶೂಟ್ ಮಾಡಲಾಗುವುದು. ಭಾರ್ಗವ್ ಹೇಳಿದ ಒನ್ ಲೈನ್ ಸ್ಟೋರಿ ಇಷ್ಟವಾಗಿ ಹಣ ಹೂಡುತ್ತಿದ್ದೇನೆ. ಮುಂದೆ ಕನ್ನಡದಲ್ಲಿ `ಕಾಟೇರಮ್ಮ’ ಸಿನಿಮಾ ಮಾಡುವುದಾಗಿ, ನಂತರ ಇವರೊಂದಿಗೆ ಮೂರು ಚಿತ್ರ ಮಾಡುವ ಗುರಿ ಹೊಂದಿದ್ದೇನೆ. ಡಿಸೆಂಬರ್ ಹೊತ್ತಿಗೆ ಜನರಿಗೆ ತೋರಿಸಲಾಗವುದು. ಮಾಧ್ಯಮದ ಸಹಕಾರಬೇಕೆಂದು ನಾಗರಾಜು.ಬಿ ಕೋರಿಕೊಂಡರು.