LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಕನ್ನಡದ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಹುಟ್ಟುಹಬ್ಬ ಆಚರಣೆ

ಈಗ ಫಿನಿಕ್ಸ್ ಚಿತ್ರದ ನಿರ್ದೇಶನದಲ್ಲಿ ತೊಡಗಿರುವ ಓಂ ಪ್ರಕಾಶ್ ರಾವ್ ಕುರಿತಂತೆ ಆ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ಹಿರಿತೆರೆ ಮತ್ತು ಕಿರಿತರೆಯ ಕಲಾವಿದೆ ಕುಮುದಾ ನಿರ್ದೇಶಕರಾವ್ ಅವರನ್ನು ಅವರ ಚಿತ್ರಗಳ ಹೆಸರಿನ ಮಾಲಿಕೆಯನ್ನು ಜೋಡಿಸುವ ಮೂಲಕ ಅಭಿನಂದಿಸಿದ್ದಾರೆ..... ಕನ್ನಡ ಚಿತ್ರರಂಗದ ಮಾಸ್ ಮತ್ತು ಕ್ಲಾಸ್ ನಿರ್ದೇಶಕ ''ಓಂ ಪ್ರಕಾಶ್ ರಾವ್" ಅವರಿಗೆ ಹುಟ್ಟು ಹಬ್ಬ ಶುಭಾಶಯಗಳು..

ಓಂ ಎಂದರೇನೇ ಪ್ರಕಾಶ.. ಇವರ ಹೆಸರೇ ಓಂ ಪ್ರಕಾಶ. 35 ವರ್ಷಗಳಿಂದ ಮಿನುಗುತ್ತಿರುವ ನಟ ಹಾಗೂ ನಿರ್ದೇಶಕ ಇವರ ಭಾವಚಿತ್ರ ನೋಡಿದ ಕೂಡಲೇ ನಮ್ಮೆಲ್ಲರಿಗೂ ನೆನಪಾಗುವುದು "ಡಕೋಟ ಎಕ್ಸ್ ಪ್ರೆಸ್" ನ ಸುಂದರನ ಪಾತ್ರ ಹಾಗೂ "ಪರಮೇಶಿ ಪಾನವಾಲ" ದ ಮನೆ, ಮಡದಿ, ಮಕ್ಕಳನ್ನು ಕಳೆದುಕೊಂಡು ಹುಡುಕುತ್ತಿರುವ ಸಾಧುವಿನ ಜೊತೆ ಹಾಸ್ಯ ಸನ್ನಿವೇಶ ''ಅಭಯ್" ನ "ಟೋಪಿವಾಲ" "ಕನಕಾಂಬರಿ" ಯ ಪೊಲೀಸ್ ಹಾಗೂ "ಪಾಂಡುರಂಗ ವಿಠಲ" ನ ಡಾಕ್ಟರ್, ನಟಿಸಿರುವುದು ಬೆರಳೆಣಿಕೆಯಷ್ಟೇ ಸಿನಿಮಾಗಳಾದರು ಅಭಿಮಾನಿಗಳ ಹೃದಯದಲ್ಲಿ ಬೇರೂರಿದ್ದಾರೆ.

ಆದರೆ ಇವರು ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಕೊಟ್ಟಿರುವ ಕೊಡುಗೆ ಅಪಾರ ನಮಗೆಲ್ಲ ಗೊತ್ತಿರೋ ಹಾಗೆ ತಂದೆ ಹೆಸರಾಂತ ಕಲಾವಿದ ಎನ್. ಎಸ್.ರಾವ್ ಅವರ ಹಿರಿಯ ಪುತ್ರ, ತನ್ನ ಹನ್ನೆರಡನೇ ವಯಸ್ಸಿಗೆ ಶಾಲಾ ಪುಸ್ತಕಗಳನ್ನು ಬದುಕಿಟ್ಟು ಸಿನಿಮಾ ಸ್ಕ್ರಿಪ್ಟ್ ಅನ್ನು ಕೈಗೆತ್ತಿಕೊಂಡವರು. ವಿಜಯ್ ರೆಡ್ಡಿ, ವಿ ಸೋಮಶೇಖರ್, ಕೆ ಎಸ್ ಆರ್ ದಾಸ್, ಅಂತ ಮಹಾನ್ ನಿರ್ದೇಶಕರುಗಳ ಜೊತೆ ಕೆಲಸ ಕಲಿತ ಕಾರ್ಮಿಕ. ಸ್ವಯಂ ನಿರ್ದೇಶಕನಾಗಿ ಬಂದಿದ್ದೇ "ಅಧಿಪತಿ" ಯಾಗಿ ಇವರು "ಲಾಕಪ್ ಡೆತ್" ಮಾಡಿದ್ದಕ್ಕೆ ರಾಮು ಎಂಬ ಕೋಟಿ ನಿರ್ಮಾಪಕರು ಹುಟ್ಟಿದ್ದು.

ಈ ಸಿನಿಮಾ ಇಡೀ ದಕ್ಷಿಣ ಭಾರತವೇ ತಿರುಗಿ ನೋಡುವಂತೆ ಮಾಡಿದ ಚಿತ್ರ ಸೆನ್ಸೆಷನಲ್ ಹಿಟ್. ಅಷ್ಟೊತ್ತಿಗಾಗಲೇ ಸಿನಿಮಾ ರಂಗ ಇವರ ಕೊರಳಿಗೆ "ಗೋಲ್ಡ್ ಮೆಡಲ್" ಹಾಕಿತ್ತು. ನಂತರ ಇವರು ಸುಮ್ಮನೆ ಕೂರಲಿಲ್ಲ "ಎಮರ್ಜೆನ್ಸಿ" ಯಲ್ಲೇ "ಅಣ್ಣಾವ್ರ" ಮಗನನ್ನು ಇವರೇ "ಸಿಂಹದಮರಿ" ಎಂದು ಕೂಗಿ ಹೇಳಿದರು.
ಜನ ಅದನ್ನು ಒಪ್ಪಿಕೊಂಡರು.

ಪ್ರದರ್ಶನಗೊಂಡ ಎಲ್ಲಾ ಚಿತ್ರಮಂದಿರಗಳಲ್ಲೂ ಶತದಿನೋತ್ಸವ ಘರ್ಜನೆ ಕೇಳಿತು. ಲೇಡಿ ಬಚ್ಚನ್ ವಿಜಯ್ ಶಾಂತಿ ಈಗಿನ ತೆಲುಗು ಸೂಪರ್ ಸ್ಟಾರ್. ರವಿತೇಜ, ಕುಮಾರ್ ಗೋವಿಂದ್, ವಿನೋದ್ ರಾಜ್, ಎಲ್ಲರನ್ನು ಸೇರಿಸಿ "ವಂದೇ ಮಾತರಂ' ಎಂದು ಹೇಳಿದವರು ಇದೆ ಓಂ ಪ್ರಕಾಶ್. ಸಿನಿ ಪ್ರಿಯರಿಗೆ ಮೊದಲು ಡಿ. ಟಿ. ಎಸ್.ತಂದು ಕೇಳಿಸಿದ ಸದ್ದು ಇವರದೇ ಸಿನಿಮಾ "AK 47"ಆ ಕಾಲಕ್ಕೆ ದಕ್ಷಿಣ ಭಾರತವಲ್ಲದೆ ಬಾಲಿವುಡ್ ಸಹ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ ನಮ್ಮ ಕನ್ನಡದ ಹೆಮ್ಮೆಯ ನಿರ್ದೇಶಕ.

ಆಶೀಶ್ ವಿದ್ಯಾರ್ಥಿ, ಓಂ ಪುರಿ, ಟೀನೂ ಆನಂದ್ ಇನ್ನು ಹಲವಾರು ಖ್ಯಾತ ಬಾಲಿವುಡ್ ಕಲಾವಿದರನ್ನು ಕನ್ನಡಕ್ಕೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಪಂಚ ಭಾಷೆಗಳಲ್ಲಿ ಮಿಂಚಿದ ನಟಿ ಸಿಮ್ರಾನ್ ರನ್ನು ಸಹ ಕನ್ನಡಕ್ಕೆ ಇವರೇ ಪರಿಚಯಿಸಿದ್ದು "ರಣಧೀರನ" ಜೋಡಿ ಖುಷ್ಟು ಅವರನ್ನು ಕರೆತಂದು ರೆಬಲ್ ಸ್ಟಾರ್ ಜೊತೆ ನಿಲ್ಲಿಸಿ ಆಕ್ಷನ್ ಕಟ್ ಹೇಳಿದ "ಪಾಳೆಗಾರ". ವಿಷ್ಣು ದಾದಾ ಹಾಗೂ ರವಿಮಾಮನ ಜೊತೆ ಕೆಲಸ ಮಾಡಿದ "ಸಾಹುಕಾರ". ಮೊದಲ ರಿಮೇಕ್ ಸಿನಿಮಾದಲ್ಲಿ ಅಭಿಮಾನಿಗಳಿಗೆ ಹುಚ್ಚು ಹಿಡಿಸಿದ "ಹುಚ್ಚ" ಉತ್ತರ ಕನ್ನಡ ಭಾಷೆಯಲ್ಲೂ ಸೈನಿಸಿಕೊಂಡ "ಹುಬ್ಬಳ್ಳಿ" ಯ "ಅಯ್ಯ" ಇವರೇ. "ಕಲಾಸಿಪಾಳ್ಯ" "ಮಂಡ್ಯ" ಅಂತ ಮಾಸ್ ಚಿತ್ರಕ್ಕೂ, "ನಿನ್ನೆ ಪ್ರೀತಿಸುವೆ" "ಪಾರ್ಥ" ಸೇರಿದಂತೆ ಇತರೆ ಇಂತಹ ಕ್ಲಾಸ್ ಚಿತ್ರಕ್ಕೂ ಇವರೇ ಪ್ರಿನ್ಸ್.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು