LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Politics News

ಕ್ರಿಕೆಟ್ ಆಟವನ್ನು ರಾಜಕಾರಣಿಗಳಿಂದ ದೂರವಿಡಿ, ಆಟಗಾರರೇ ಮುನ್ನಡೆಸಿ: ಡಿಕೆಶಿ

ಬೆಂಗಳೂರು: "ಕ್ರಿಕೆಟ್ ಆಟವನ್ನು ರಾಜಕಾರಣಿ ಗಳಿಂದ ದೂರವಿಡಬೇಕು. ಈ ಕ್ರೀಡೆಯನ್ನು ಆಟಗಾರರೇ ಮುನ್ನಡೆಸಿಕೊಂಡು ಹೋಗಬೇಕು" ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ತಂಡದ ಮಾಜಿ ಆಟಗಾರ ಸಯ್ಯದ್ ಕಿರ್ಮಾನಿ ಅವರ 75ನೇ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಆತ್ಮ ಚರಿತ್ರೆ "ಸ್ಟಂಪಡ್ - ಲೈಫ್ ಬಿಯಾಂಡ್ ಅಂಡ್ ಬಿಯಾಂಡ್ ದಿ ಟ್ವೆಂಟಿ ಟು ಯಾಡ್ರ್ಸ್" ಬಿಡುಗಡೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಭಾನುವಾರ ಮಾತನಾಡಿದರು.

ಒಟ್ಟಾರೆ ಅವರು ಹೇಳಿದ್ದಿಷ್ಟು; ಕ್ರೀಡೆಗೆ ರಾಜಕಾರಣಿಗಳು ಅಪಾಯಕಾರಿ, ಹೀಗಾಗಿ ಕ್ರೀಡಾ ಚಟುವಟಿಕೆಗಳಿಂದ ಅವರನ್ನು ದೂರ ಇಡಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ನಾನೊಬ್ಬ ರಾಜಕಾರಣಿ, ಆದರೂ ಕಿರ್ಮಾನಿ ಅವರು ಈ ಕಾರ್ಯಕ್ರಮಕ್ಕೆ ನನಗೆ ಏಕೆ ಆಹ್ವಾನ ನೀಡಿದರೋ ಗೊತ್ತಿಲ್ಲ.ಪ್ರತಿಭೆ ನಿಮ್ಮನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಆ ಉನ್ನತ ಸ್ಥಾನವನ್ನು ಉಳಿಸಿಕೊಳ್ಳಲು ಒಳ್ಳೆಯ ಗುಣ ನಿಮಗೆ ಸಹಾಯ ಮಾಡುತ್ತದೆ. ಕಿರ್ಮಾನಿ ಅವರು ಈ ಎರಡೂ ಗುಣಗಳನ್ನು ಹೊಂದಿದ್ದಾರೆ.

ಕಿರ್ಮಾನಿ ಅವರು ಕೇವಲ ಕ್ರಿಕೆಟ್ ಪ್ರತಿಭೆಯಷ್ಟೇ ಅಲ್ಲ, ಅತ್ಯುತ್ತಮ ವ್ಯಕ್ತಿತ್ವ ಇರುವವರು. ಕರ್ನಾಟಕ ಪ್ರತಿನಿಧಿಸುವ ಆಟಗಾರನಾಗಿ ಭಾರತೀಯ ಕ್ರಿಕೆಟ್ ಗೆ ದೊಡ್ಡ ಕೊಡುಗೆ ನೀಡಿದವರು ಕಿರ್ಮಾನಿ. ಶುದ್ಧ ಹೃದಯ ವಿಶ್ವದ ಶ್ರೇಷ್ಠ ದೇವಾಲಯ ಎಂದು ಹೇಳುತ್ತಾರೆ. ಕಿರ್ಮಾನಿ ಅವರು ಇಂತಹ ಶುದ್ಧ ಹೃದಯ ಹಾಗೂ ಮುಗುಳ್ನಗೆ ಹೊಂದಿರುವ ಹೃದಯವಂತ. ಇಂತವರು ಜಗತ್ತಿನಲ್ಲಿ ಬಹಳ ಅಪರೂಪ.

ನಾನಿಲ್ಲಿ ಡಿಸಿಎಂ ಆಗಿ ಬಂದಿಲ್ಲ. ಕಿರ್ಮಾನಿ ಅವರ ಅಭಿಮಾನಿಯಾಗಿ ಬಂದಿದ್ದೇನೆ. ನಾನು ಶಾಲೆಯಲ್ಲಿದ್ದಾಗ, ಚಂದ್ರಶೇಖರ್, ಜಿ.ಆರ್. ವಿಶ್ವನಾಥ್ ಹಾಗೂ ಕಿರ್ಮಾನಿ ಅವರ
ಅಭಿಮಾನಿಯಾಗಿದ್ದೆ. ನೀವೆಲ್ಲರೂ ಸೇರಿ ನಮ್ಮ ರಾಜ್ಯ ಹಾಗೂ ದೇಶ ಹೆಮ್ಮೆಪಡುವಂತೆ ಸಾಧನೆ ಮಾಡಿದ್ದೀರಿ. ಇವರ ಜತೆಗೆಚಂದ್ರಶೇಖರ್, ಬ್ರಿಜೇಶ್ ಪಟೇಲ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಸೇರಿದಂತೆ ಅನೇಕರು ಅತ್ಯುತ್ತಮ ಸಾಧನೆ ಮಾಡಿದ್ದಾರೆ.Éಎಸ್ ಸಿಎ ಕಾರ್ಯದರ್ಶಿಯಾಗಿದ್ದ ನಾಗರಾಜ್ ಅವರ ಪುತ್ರ ಹಾಗೂ ನಾನು ಒಂದೇ ಶಾಲೆಯಲ್ಲಿ ಓದುತ್ತಿದ್ದೆ. ಭಾರತ ಪಾಕಿಸ್ತಾನ ಪಂದ್ಯಗಳ ಟಿಕೆಟ್ ಪಡೆಯುತ್ತಿದ್ದೆ. ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ಕೆಎಸ್ ಸಿಎಗೆ ಪತ್ರ ಬರೆದು ನೂರಾರು ಟಿಕೆಟ್ ಪಡೆದು ನಮ್ಮ ಹುಡುಗರಿಗೆ ಹಂಚಿ ವಿದ್ಯಾರ್ಥಿ ನಾಯಕನಾಗಿದ್ದೆ. ಅಲ್ಲಿಂದ ನಾನು ಸುಮಾರು 10 ವಿಧಾನಸಭಾ ಚುನಾವಣೆಗಳನ್ನು ಎದುರಿಸಿದ್ದೇನೆ.

ನೀವೆಲ್ಲರೂ ದೇಶಕ್ಕೆ ಕೊಡುಗೆ ನೀಡಿದ್ದೀರಿ. ಎಸ್.ಎಂ ಕೃಷ್ಣ ಅವರ ಸರ್ಕಾರದಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಧ್ಯಕ್ಷರಾಗುವಂತೆ ನಾರಾಯಣಸ್ವಾಮಿ ಅವರಿಗೆ ಹೇಳಿದ್ದೆವು. ಅವರು ನಮ್ಮ ಮನವಿ ಒಪ್ಪಿ ಆ ಜವಾಬ್ದಾರಿ ವಹಿಸಿಕೊಂಡರು. ಆಗ ರತನ್ ಟಾಟಾ ಅವರನ್ನು ಭೇಟಿ ಮಾಡಬೇಕಾಯಿತು. ಆಗ ಅವರು ಒಂದು ಮಾತು ಹೇಳಿದರು. ನೀವು ವೇಗವಾಗಿ ಸಾಗಬೇಕಾದರೆ ಒಬ್ಬರೇ ಸಾಗಿ, ನೀವು ದೂರ ಸಾಗಬೇಕಾದರೆ ಎಲ್ಲರೊಟ್ಟಿಗೆ ಸೇರಿ ಸಾಗಿ ಎಂದು ಹೇಳಿದರು. ಇದು ಕ್ರಿಕೆಟ್ ಗೂ ಅನ್ವಯವಾಗುತ್ತದೆ. ಎಲ್ಲಾ ಆಟಗಾರರು ಒಗ್ಗಟ್ಟಾಗಿ ಸಾಗಿದರೆ ಮಾತ್ರ ತಂಡ ತನ್ನ ಗುರಿ ಮುಟ್ಟುತ್ತದೆ.

ಆಗಿನ ಕಾಲದ ಆಟಗಾರರು ಈಗಿನ ಕಾಲದಂತೆ ಅತ್ಯುತ್ತಮ ತರಬೇತಿ ಕೇಂದ್ರಗಳನ್ನು ಹೊಂದಿರಲಿಲ್ಲ. ಆದರೂ ದೊಡ್ಡ ಮಟ್ಟಕ್ಕೆ ಬೆಳೆದು ದೇಶಕ್ಕೆ ಕೊಡುಗೆ ನೀಡಿದ್ದಾರೆ. ಪ್ರತಿಭೆ ಇದ್ದರೆ ಉನ್ನತ ಸ್ಥಾನಕ್ಕೆ ಏರುತ್ತೇವೆ, ಆದರೆ ಆ ಸ್ಥಾನವನ್ನು ಕಾಯ್ದುಕೊಳ್ಳಬೇಕಾದರೆ ವ್ಯಕ್ತಿತ್ವ ಬಹಳ ಮುಖ್ಯ. ಇದಕ್ಕೆ ಕಿರ್ಮಾನಿ ಉತ್ತಮ ಉದಾಹರಣೆ. ಇಲ್ಲಿರುವ ಆಟಗಾರರೆಲ್ಲರೂ ಉತ್ತಮ ಬಾಂಧವ್ಯ ಹೊಂದಿದ್ದೀರಿ.ಕಪಿಲ್ ದೇವ್ ಅವರು ಹೇಳಿದಂತೆ, ಅನುಭವದ ಮುಂದೆ ಬೇರೇನೂ ಇಲ್ಲ. ಅನುಭವ ವ್ಯಕ್ತಿಯನ್ನು ಪಕ್ವವಾಗಿಸುತ್ತದೆ. ನಿಮ್ಮ ನಡುವಣ ಬಾಂಧವ್ಯ ನೀರಿನಂತೆ. ಅದಕ್ಕೆ ಬಣ್ಣ, ರುಚಿ ಇಲ್ಲ. ಆದರೂ ಅದು ಬಹಳ ಮುಖ್ಯ. ನೀವು ಯಾವುದೇ ತಲೆಮಾರಿನವರಾಗಿರಿ, ಯಾವುದೇ ವಯೋಮಾನದವರಾಗಿರಿ, ಈ ಕ್ಷೇತ್ರದಲ್ಲಿ ನಿಮ್ಮ ಕೊಡುಗೆ ಹಾಗೂ ನೆನಪು ನಮಗೆ ಮಾದರಿಯಾಗಿದೆ.

ಅನೇಕ ಬಾರಿ ನಾನು ಒಂದು ಮಾತು ಹೇಳುತ್ತಿರುತ್ತೇನೆ. ನೀವು ನಿಮ್ಮ ಮೂಲ ಮರೆತರೆ ಜೀವನದಲ್ಲಿ ಫಲ ಪಡೆಯುವುದಿಲ್ಲ. ಕಪಿಲ್ ದೇವ್ ಅವರು ಹೇಳಿದಂತೆ ಅವರು ರೈತಾಪಿ ಕುಟುಂಬದಿಂದ ಬಂದವರು. ಈ ದೇಶದಲ್ಲಿ 67% ಜನ ರೈತಾಪಿ ವರ್ಗದವರು. ಅವರಿಲ್ಲದೆ ನಾವಿಲ್ಲ. ನೀವೆಲ್ಲರೂ ನಿಮ್ಮ ಮೂಲವನ್ನು ಮರೆಯದೆ ಬೆಳೆದಿದ್ದೀರಿ.ಕಿರ್ಮಾನಿ ಅವರು ನನಗೆ ಅತ್ಯುತ್ತಮ ಸ್ನೇಹಿತರು. ಇತ್ತೀಚೆಗೆ ನಾನು, ಕಿರ್ಮಾನಿ ಹಾಗೂ ಫಾರೂಕ್ ಅಬ್ದುಲ್ಲಾ ಅವರು ಒಟ್ಟಿಗೆಸೇರಿದ್ದೆವು.

ಅವರು ಹೃದಯ ಬಹಳ ಶುದ್ಧವಾಗಿದ್ದು, ಸದಾ ಹಸನ್ಮುಖಿ. ಅವರು ಹೀಗೆ ಸದಾ ನಗುತ್ತಿರಲಿ. ಅವರು ತಮ್ಮ ನೂರನೇ ವರ್ಷದ ಜನ್ಮದಿನ ಆಚರಿಸುವಂತಾಗಲಿ. ಕಿರ್ಮಾನಿ ಅವರೇ ನಿಮ್ಮ ಜತೆ ಹುಟ್ಟಿದವರು, ಬಂಧುಗಳು ಮಾತ್ರ ನಿಮ್ಮ ಕುಟುಂಬವಲ್ಲ. ಇಲ್ಲಿರುವ ನಾವೆಲ್ಲರೂ ನಿಮ್ಮ ಕುಟುಂಬದವರು. ನೀವು 88 ಟೆಸ್ಟ್ ಪಂದ್ಯಗಳನ್ನಾಡಿದ್ದೀರಿ. 100 ಪಂದ್ಯಗಳನ್ನು ಆಡಬೇಕಿತ್ತು. ಕ್ರೀಡೆಯಲ್ಲಿ ನೀವು ಬೇರೆ ಬೇರೆ ರೀತಿಯಲ್ಲಿ ಇನ್ನಷ್ಟು ಸೇವೆ ಸಲ್ಲಿಸಿ. ನಿಮ್ಮ ಮುಂದಿನ ಬದುಕು ಮತ್ತಷ್ಟು ಯಶಸ್ವಿಯಾಗಲಿ.

ನಾನು ಕಿರ್ಮಾನಿ ಅಭಿಮಾನಿ ಹಾಗೂ ಕೆಎಸ್ ಸಿಎ ಸದಸ್ಯನಾಗಿ ಇಲ್ಲಿಗೆ ಬಂದಿದ್ದೇನೆ. ನಾನು ?2 ಸಾವಿರ ನೀಡಿ ಕೆಎಸ್ ಸಿಎ ಸದಸ್ಯತ್ವ ಪಡೆದಿದ್ದೆ. ಆದರೂ ಆಡಳಿತ ಮಂಡಳಿಯಲ್ಲಿ ರಾಜಕಾರಣಿಗಳು ಇಲ್ಲದಿರುವುದು ನನಗೆ ಸಂತೋಷವಿದೆ. 75 ವಸಂತಗಳನ್ನು ಪೂರೈಸಿರುವ ನಿಮಗೆ ದೇವರು ಹೆಚ್ಚಿನ ಆಯಸ್ಸು ನೀಡುತ್ತಾನೋ ಇಲ್ಲವೋ ಗೊತ್ತಿಲ್ಲ. ಕಿರ್ಮಾನಿ ಅವರ ನೆಪದಲ್ಲಿ ಕ್ರಿಕೆಟ್ ಲೋಕದ ದಿಗ್ಗಜರು ಒಂದೇ ಕಡೆ ಸೇರಿರುವುದನ್ನು ನೋಡುವುದಕ್ಕೆ ಸಂತಸವಾಗುತ್ತಿದೆ".

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು