LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಗುರುಪೂರ್ಣಿಮೆ ನಿಮಿತ್ತ ಡಾ.ಶಿವಕುಮಾರ ಶ್ರೀಗಳಿಗೆ ಭಕ್ತಿ ಸಮರ್ಪಣೆ

ಬೆಂಗಳೂರು: ರಾಜಾಜಿನಗರ ಪ್ರವೇಶ ದ್ವಾರದ ಬಳಿ ಡಾ||ಶಿವಕುಮಾರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗುರುಪೂರ್ಣಿಮೆ ಪ್ರಯುಕ್ತ ಕರ್ನಾಟಕ ರತ್ನ, ಪದ್ಮಭೂಷಣ, ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಕಂಚಿನ ಪುತ್ಥಳಿಗೆ ಮಾಲಾರ್ಪಣೆ ಮತ್ತು ಭಕ್ತಿ ಸಮರ್ಪಣಾ ಸಮಾರಂಭ.

ಶಿವಕುಮಾರ ಸ್ವಾಮೀಜಿ ಪುತ್ಥಳಿಗೆ ಗುರುವಣ್ಣ ದೇವರ ಮಠದ ಶ್ರೀನಂಜುಂಡಸ್ವಾಮಿಗಳು ಮತ್ತು ರಾಜ್ಯ ಬಿಜೆಪಿ ಮುಖಂಡರಾದ ಡಾ||ಅರುಣ್ ಸೋಮಣ್ಣ, ಕನ್ನಡ ಪರ ಹೋರಾಟಗಾರರಾದ ಪಾಲನೇತ್ರ, ಅಧ್ಯಕ್ಷರಾದ ಟಿ.ವೆಂಕಟೇಶ್ ಗೌಡ, ಉಪಾಧ್ಯಕ್ಷರಾದ ಕ್ರಾಂತಿರಾಜು, ಸಂಚಾಲಕರಾದ ಬಿ.ದೇವರಾಜ್, ಬಿಜೆಪಿ ಮುಖಂಡರುಗಳಾದ ರಮೇಶ್, ಸಿದ್ದಾರ್ಥ, ಶ್ರೀಮತಿ ರತ್ನಮ್ಮರವರು ರವರು ಮಾಲಾರ್ಪಣೆ ಮಾಡಿ ಭಕ್ತಿ ಸಮರ್ಪಣೆ ಮಾಡಿದರು.

ಶ್ರೀನಂಜುಂಡ ಸ್ವಾಮೀಜಿ ಮಾತನಾಡಿ, ಗುರುವನ್ನ ಸ್ಮರಣೆ ಮಾಡುವ ದಿನವಾಗಿದೆ. ಶಿವಕುಮಾರ ಸ್ವಾಮೀಜಿಗಳ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನಾಡಿನ ಜನರ ಪುಣ್ಯ. ಗುರುಗಳಾದ ಶಿವಕುಮಾರ ಸ್ವಾಮೀಜಿರವರು ಅನ್ನದಾಸೋಹ, ಶಿಕ್ಷಣ, ಕಾಯಕ ಮಹತ್ವವನ್ನು ವಿಶ್ವಕ್ಕೆ ಸಾರಿದರು.
ಭಕ್ತರು ಮತ್ತು ವಿಧ್ಯಾರ್ಥಿಗಳ ಬಗ್ಗೆ ಅಪಾರ ಒಲವನ್ನು ಹೊಂದಿದ್ದರು. ಪ್ರತಿಯೊಬ್ಬರ ಬಾಳಿನಲ್ಲಿ ಗುರುಗಳು ಇಲ್ಲದೇ ಹರನನ್ನು ಕಾಣಲು ಸಾಧ್ಯವಿಲ್ಲ ಎಂದು ಹೇಳಿದರು.

ಡಾ||ಅರುಣ್ ಸೋಮಣ್ಣರವರು ಮಾತನಾಡಿ, ಮಗುವಿಗೆ ತಂದೆ, ತಾಯಿ ಮೊದಲ ಗುರು ನಂತರ ಶಿಕ್ಷಣದಲ್ಲಿ ಪಾಠ ಕಲಿಸಿದ ಶಿಕ್ಷಕ ಗುರು, ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪಗೊಳ್ಳಲು ಸ್ವಾಮೀಜಿಗಳ ಸಾನಿಧ್ಯ ಬೇಕು. ನಮ್ಮ ಜೀವನಕ್ಕೆ ಉತ್ತಮ ಮಾರ್ಗದರ್ಶನದಲ್ಲಿ ಸಾಗಲು ಶ್ರಮಿಸಿದ ತಂದೆ, ತಾಯಿ ಮತ್ತು ಶಿಕ್ಷಕ ವೃಂದ ಮತ್ತು ಗುರುಗಳು, ಸ್ವಾಮೀಜಿಗಳಿಗೆ ಗುರುವಂದನೆ ಸಲ್ಲಿಸುವ ದಿನವಾಗಿದೆ.

ಜೀವನದಲ್ಲಿ ಸಾಧನೆ ಮತ್ತು ಯಶ್ವಸಿ ಯಾಗಲು ಗುರುಗಳ ಸಹಕಾರ,  ಪ್ರೋತ್ಸಹ ಪಾಲನೇತ್ರರವರು ಮಾತನಾಡಿ ಗುರುವಿನ ಗುಲಾಮನಾಗುವ ತನಕ ದೊರಯದಣ್ಣ ಮುಕುತಿ ಎಂದರೆ ನಾವು ಮಾಡಿದ ಪಾಪ, ಪುಣ್ಯಗಳ ಕುರಿತು ಗುರುಗಳ ಬಳಿ ದೇವರು ಕೇಳುತ್ತಾರೆ ಗುರುಗಳು ನಮ್ಮ ಬಗ್ಗೆ ಏನು ಅಭಿಪ್ರಾಯ ನೀಡುತ್ತಾರೆ ಅದರ ಆನ್ವಯ ನಮಗೆ ಪುಣ್ಯಫಲ ಪ್ರಾಪ್ತಿಯಾಗುತ್ತಿದೆ ಪುರಾ ಣಗಳಲ್ಲಿ ಉಲ್ಲೇಖವಿದೆ. ತಂದೆ, ತಾಯಿ ನಂತರ ಗುರುಗಳ ನಮಗೆ ದೇವರಾಗಿ ನಿಲ್ಲುತ್ತಾರೆ. ಪ್ರತಿಯೊಬ್ಬರು ಗುರುಗಳ ಮಾರ್ಗ ದರ್ಶನದಲ್ಲಿ ಸಾಗಿದಾಗ ಮಾತ್ರ ಜೀವನದಲ್ಲಿ ಯಶ್ವಸಿಯಾಗಲು ಸಾಧ್ಯ ಎಂದರು.

ಟಿ.ವೆಂಕಟೇಶ್ ಗೌಡರವರು ಮಾತನಾಡಿ ಅನ್ನ,ಅಕ್ಷರ, ಆಶ್ರಯ ಮೂರನ್ನು ಮಕ್ಕಳಿಗೆ ದಯಪಾಲಿಸಿದ ಶ್ರೀ ಶಿವಕುಮಾರ ಸ್ವಾಮೀಜಿ ಕೃಪಾಶೀರ್ವಾದದಿಂದ ಲಕ್ಷಾಂತರ ಮಕ್ಕಳು ವಿದ್ಯಾವಂತರಾದರು ಅಂದು ಅವರಿಗೆ ಶಿಕ್ಷಣ ಸಿಗದೇ ಹೋಗಿದ್ದರೆ ರಾಜ್ಯದಲ್ಲಿ ಅವಿದ್ಯಾವಂತರ ಸಂಖ್ಯೆ ಹೆಚ್ಚು ಇರುತ್ತಿತ್ತು, ನಾಡು ಅಭಿವೃದ್ದಿಯಾಗುತ್ತಿರಲ್ಲಿಲ. ಶಿವ ಕುಮಾರ ಸ್ವಾಮೀಜಿ ಮಕ್ಕಳಿಗೆ ಗುರುವಾಗಿ ನಿಂತು ಅಕ್ಷರ ಕಲಿಸಿದರು, ಹಸಿದ ಮಕ್ಕಳಿಗೆ ಅನ್ನ ನೀಡಿದರು, ಸೂರು ಇಲ್ಲದ ಮಕ್ಕಳಿಗೆ ಆಶ್ರಯ ನೀಡಿದರು.

ಕ್ರಾಂತಿ ರಾಜುರವರು ಮಾತನಾಡಿ ಕ್ರಾಂತಿಯೋಗಿ ಬಸವಣ್ಣ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ನಾರಾಯಣಗುರು, ಜ್ಯೋತಿ ಬಾಪುಲೆ, ಕನಕದಾಸರು, ಶಿವಕುಮಾರಸ್ವಾಮೀಜಿ, ಬಾಲಗಂಗಾಧರನಾಥ ಸ್ವಾಮೀಜಿ ಇಂತಹ ಮಹನೀಯರುಗಳನ್ನು ನಮ್ಮ ಮನಸ್ಸಿನಲ್ಲಿ ಗುರುಗಳಾಗಿ ಸ್ವೀಕಾರ ಮಾಡಿ, ಅವರ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಾಗಬೇಕು. ಉತ್ತಮ ಸಮಾಜ, ವಿದ್ಯಾವಂತ ಸಮಾಜ ನಿರ್ಮಾಣವಾಗಲು ಗುರುಗಳ ಮಾರ್ಗದರ್ಶನ ಮುಖ್ಯ ಎಂದು ಹೇಳಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು