LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಚಂದನ ವನಕ್ಕೆ ನಟಿ ಪ್ರಿಯಾಂಕ ಉಪೇಂದ್ರ ಸಹೋದರ

ಆಕ್ಷನ್ ಕ್ವೀನ್ ಪ್ರಿಯಾಂಕ ಉಪೇಂದ್ರ ಸಹೋದರ ವಿನಾಯಕ್ `ಯುಐ' ಚಿತ್ರದಲ್ಲಿ ಖಳನಟನಾಗಿ ಕಾಣಿಸಿಕೊಳ್ಳುವುದರ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಹಾಗಂತ ಇವರಿಗೆ ಬಣ್ಣದ ಲೋಕ ಹೊಸದೇನಲ್ಲ. ಈಗಾಗಲೇ ಬೆಂಗಾಲಿ ಭಾಷೆಯ 21 ಚಿತ್ರಗಳಲ್ಲಿ ವಿವೇಕ್ ತ್ರಿವೇದಿ ಹೆಸರಿನಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ.

ತಾಯಿ ಸಮೀರಾ ಒಂದು ಕಾಲದಲ್ಲಿ ನಾಯಕಿ ಆಗಿದ್ದವರು. ಅಕ್ಕ ಪ್ರಿಯಾಂಕಉಪೇಂದ್ರ ಬೆಂಗಾಲಿ ಸೇರಿದಂತೆ ಬಾಲಿವುಡ್, ಕಾಲಿವುಡ್, ಟಾಲಿವುಡ್ ಚಿತ್ರಗಳಲ್ಲಿ ಗುರುತಿಸಿಕೊಂಡು, ಚಂದನವನದಲ್ಲಿ 50ನೇ ಸಿನಿಮಾ `ಡಿಟೆಕ್ಟೀವ್ ತೀಕ್ಷ್ಣ'ದಲ್ಲಿ ತನಿಖಾಧಿಕಾರಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ದೊಡ್ಡಮ್ಮನ ಮಗಳು ಜೂನ್‍ಮಲ್ಲಿಹ ಸಹ ನಟಿಯಾಗಿದ್ದು, ಸದ್ಯ ರಾಜಕೀಯಕ್ಕೆ ಪ್ರವೇಶಿಸಿ ವೆಸ್ಟ್‍ಬೆಂಗಾಲ್ ಲೋಕಸಭಾ ಸದಸ್ಯೆಯಾಗಿದ್ದಾರೆ. ಮೂವರ ಬಳುವಳಿಯಿಂದಲೇ ಇವರು ಸಿನಿಮಾ ರಂಗಕ್ಕೆ ಬರಲು ಸುಲಭವಾಗಿದೆ.

ಬಾವ ರಿಯಲ್ ಸ್ಟಾರ್ ಉಪೇಂದ್ರ `ಯುಐ'ದಲ್ಲಿ ಮುಸ್ಲಿಂ ಖಳನ ಪಾತ್ರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದರ ಕುರಿತಂತೆ ಮಾತನಾಡಿರುವ ಅವರು ನಾಲ್ಕು ದಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು ಮರೆಯಲಾಗದ ಅನುಭವ. ಮನೆಯಲ್ಲಿ ಸಂಬಂದಿಯಾದರೂ, ಸೆಟ್‍ನಲ್ಲಿ ನಿರ್ದೇಶಕರು.ಹೆಚ್ಚು ಮಾತನಾಡದೆ ಎಲ್ಲರಿಂದ ಕೆಲಸ ತೆಗೆಸಿಕೊಳ್ಳುತ್ತಿದ್ದರು. ಅವರ ಡೆಡಿಕೇಶನ್ ನೋಡಿ ಖುಷಿಯಾಗಿದೆ. ಬೆಂಗಾಲ್, ಬೆಂಗಳೂರು ಶೂಟಿಂಗ್ ಅಂತ ಏನು ವ್ಯತ್ಯಾಸ ಕಂಡಿಲ್ಲ.

ಶಾರುಕ್‍ಖಾನ್ ಅಭಿನಯದ `ಬಾಜಿಗರ್' ರಿಮೇಕ್‍ದಲ್ಲಿ ಹೀರೋ ಆಗಿ ಅಭಿನಯಿಸಿದ್ದು ಹಿಟ್ ಆಗಿತ್ತು. ಅಕ್ಕನೇ ನನಗೆ ರೋಲ್ ಮಾಡೆಲ್. ಪ್ರತಿಬಾರಿ ಇಲ್ಲಿಗೆ ಬಂದಾಗ ಆಕೆಯಿಂದ ಕನ್ನಡ ಕಲಿಯುತ್ತಿದ್ದೇನೆ. ಆಕ್ಷನ್ ಚಿತ್ರಗಳಲ್ಲಿ ನಟಿಸಲು ಒಲವು ಇದೆ. ಮೊನ್ನೆ ಸೆಲಬ್ರಿಟಿ ಷೋದಲ್ಲಿ ನನ್ನ ಪಾತ್ರವನ್ನು ಗುರುತಿಸಿ ಶುಭ ಹಾರೈಸಿದ್ದಾರೆ. ಮುಂದೆಯೂ ಒಳ್ಳೆ ಪಾತ್ರಗಳು ಸಿಗಬಹುದೆಂಬ ಭರವಸೆ ಇದೆ ಎನ್ನುತ್ತಾರೆ ವಿನಾಯಕ್.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು