LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರಾ ಗಾಯಕ ವಿಜಯ್ ಪ್ರಕಾಶ್ ಮಗಳು ಕಾವ್ಯ

ಕಲಾ ಸೇವೆಗೆಂದೇ ತಮ್ಮ ಬದುಕನ್ನು ಸಮರ್ಪಿಸಿ ಕೊಳ್ಳುವ ಅನೇಕರು ತಮ್ಮ ಮಕ್ಕಳು ಕೂಡ ತಮ್ಮಂತೆಯೇ ಕಲಾಸೇವೆಯನ್ನೇ ಮಾಡಲಿ ಎಂದು ಅಪೇಕ್ಷಿಸುತ್ತಾರೆ. ಚಿತ್ರರಂಗದಲ್ಲಿ ಸ್ಟಾರ್ ಆದವರು ಆಗಲು ಸಾಧ್ಯವಾಗದವರು ಚಿತ್ರರಂಗದ ನಾನಾ ವಿಭಾಗದಲ್ಲಿ ಕೆಲಸ ಮಾಡಿದವರೆಲ್ಲರು ಚಿತ್ರರಂಗದಲ್ಲಿಯೇ ತಮ್ಮ ಮಕ್ಕಳು ಕೂಡ ಬೆಳೆಯಬೇಕು ಎಂದು ಕನಸು ಕಾಣುತ್ತಾರೆ.

ತಮ್ಮಿಂದ ಸಾಧ್ಯವಾಗದ್ದನ್ನು ತಮ್ಮ ಮಕ್ಕಳು ಸಾಧಿಸಿ ತೋರಿಸಲಿ ಎಂದು ಆ ದಿಸೆಯಲ್ಲಿ ತಮ್ಮ ಮಕ್ಕಳಿಗೆ ಬೇಕಾದ ಸಕಲ ಸೌಕರ್ಯಗಳನ್ನು ಒದಗಿಸುತ್ತಾರೆ. ಅದಕ್ಕೆ ಬೇಕಾದ ತರಬೇತಿಗಳನ್ನು ಕೂಡ ಕೊಡಿಸುತ್ತಾರೆ.ಹಾಗಂಥ ಇಲ್ಲಿ ಎಲ್ಲರೂ ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬೀಳುವುದಿಲ್ಲ. ಅಲ್ಲೊಬ್ಬರು.. ಇಲ್ಲೊಬ್ಬರು.. ತಮ್ಮ ತಂದೆ-ತಾಯಿಯ ಹಾದಿಯನ್ನು ತುಳಿಯದೇ ಅವರದ್ದೇ ಆದ ಕನಸುಗಳನ್ನು ಹಿಂಬಾಲಿಸಿಕೊಂಡು ಹೋಗುತ್ತಾರೆ. ಅಂದುಕೊಂಡ ಗುರಿ ತಲುಪಬೇಕೆಂದು ಹಗಲಿರುಳು ಶ್ರಮವಹಿಸುತ್ತಾರೆ.

ಈ ಎರಡು ಸಾಲಿನಲ್ಲಿ ಚಿನ್ನದ ಕಂಠದ ಗಾಯಕ ವಿಜಯ್ ಪ್ರಕಾಶ್ ಅವರ ಮಗಳು ಯಾವ ಸಾಲಿನಲ್ಲಿ ನಿಲ್ಲುತ್ತಾರೆ ಎನ್ನುವುದು ಸದ್ಯ ಗೊತ್ತಿಲ್ಲವಾದರೂ ತಮ್ಮ ಮಗಳ ಮುಂದಿನ ಯೋಜನೆ-ಯೋಚನೆಗಳ ಬಗ್ಗೆ ಚಿಕ್ಕದಾದ ಸುಳಿವು ವಿಜಯ್ ಪ್ರಕಾಶ್ ಸದ್ಯಕ್ಕೆ ನೀಡಿದ್ದಾರೆ. ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಹೌದು, ಸಂದರ್ಶನದ ಒಂದರಲ್ಲಿ ತಮ್ಮ ಕಂಚಿನ ಕಂಠದಿಂದಲೇ ದೇಶ ವಿದೇಶಗಳ ಸಂಗೀತ ಪ್ರಿಯರನ್ನು ಸೆಳೆದಿರುವ ವಿಜಯ್ ಪ್ರಕಾಶ್ ತಮ್ಮ ಮಗಳ ಬಗ್ಗೆ ಮಾತನಾಡಿದ್ದಾರೆ. ನಿಮ್ಮಂತೆಯೇ ನಿಮ್ಮ ಮಗಳು ಕೂಡ ಗಾಯಕಿಯಾಗ್ತಾರಾ ಅಥವಾ ಬೆಳ್ಳಿ ಪರದೆಯ ಮೇಲೆ ನಾಯಕಿಯಾಗಿ ಮಿಂಚುತ್ತಾರಾ ಎನ್ನುವ ಪ್ರಶ್ನೆಗೆ ಉತ್ತರವನ್ನು ನೀಡಿದ್ದಾರೆ. ಈ ಕುರಿತು ಮಾತನಾಡಿರುವ ವಿಜಯ್ ಪ್ರಕಾಶ್ ನಾನು ನನ್ನ ಹತ್ತೊಂಬತ್ತನೇ ವಯಸ್ಸಿನಲ್ಲಿ ಸಂಗೀತವನ್ನು ಆಯ್ಕೆ ಮಾಡಿಕೊಂಡೆ ಹೀಗಾಗಿ ನನಗೆ ಇದ್ದ ಸ್ವಾತಂತ್ರ್ಯವನ್ನು ನಾನು ನನ್ನ ಮಗಳಿಗೆ ಕೂಡ ಕೊಟ್ಟಿದ್ದೇನೆ ಎಂದಿದ್ದಾರೆ.

ಆಕೆ ನನ್ನ ಮಗಳು ಎಂದ ಮಾತ್ರಕ್ಕೆ ನನ್ನ ಆಸೆಯಂತೆ ನಡೆದುಕೊಳ್ಳಬೇಕೆಂಬ ಮನಸ್ಥಿತಿ ನನ್ನದಲ್ಲ ಎಂದಿರುವ ವಿಜಯ್ ಪ್ರಕಾಶ್ ಅವಳಿಗೂ ಒಂದು ಜೀವನ ಇದೆ, ನಾನು ಹೇಗೆ ನನ್ನ ಜೀವನವನ್ನು ಆಯ್ಕೆ ಮಾಡಿಕೊಂಡೆ ಅದೇ ರೀತಿ ಆಕೆಯ ಜೀವನವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಅವಳಿಗಿದೆ ಎಂದು ಹೇಳಿದ್ದಾರೆ. ಅವಳಿಗೇನು ಇಷ್ಟಾನೋ ಅದೇ ಕೆಲಸವನ್ನು ಮಾಡಲಿ ಎಂದು ಹರಸಿ ಹಾರೈಸಿರುವ ವಿಜಯ್ ಪ್ರಕಾಶ್ ಅವಳು ಕೂಡ ಒಳ್ಳೆಯ ಗಾಯಕಿ ನನ್ನ ಪ್ರಕಾರ ಆಕ್ಟಿಂಗ್‍ನಲ್ಲಿ ಕೂಡ ಆಸಕ್ತಿ ಇದೆ ಅನ್ಸುತ್ತೆ ಎಂದು ಹೇಳಿದ್ದಾರೆ.ಗೊತ್ತಿಲ್ಲ ಮುಂದೊಂದು ದಿನ ಆಫೀಸ್‍ನಲ್ಲಿ ಕೆಲಸ ಮಾಡುವುದಾಗಿ ಆಕೆ ಹೇಳಬಹುದು ಅಥವಾ ಯಾವುದಾದರೂ ಬ್ಯುಸಿನೆಸ್ ಕೂಡ ಮಾಡಬಹದು ಇರುವುದು ಒಂದು ಜೀವನ ಅವರ ಅವರ ಆಸೆಗಳಿಗೆ ತಕ್ಕಂತೆ ಬದುಕುವ ಸ್ವಾತಂತ್ರ್ಯವನ್ನು ನಾವು ಕೊಡ ಬೇಕು ಎಂದು ಹೇಳಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು