LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Mandya

ಚೆಲುವನಾರಾಯಣಸ್ವಾಮಿ ಕಾರ್ತಿಕ ಜಾತ್ರಾ ಮಹೋತ್ಸವ

ಮೇಲುಕೋಟೆ: ಚೆಲುವನಾರಾಯಣನ ಕಾರ್ತಿಕ ಜಾತ್ರೆ ರಾಜಮುಡಿ ಬ್ರಹ್ಮೋತ್ಸವ ನವೆಂಬರ್ ೪ರಿಂದ ಆರಂಭವಾಗಿ ೧೫ರವರೆಗೆ ನಡೆಯಲಿದೆ. ಹತ್ತು ದಿನಗಳ ಕಾಲ ನಡೆಯುವ ಬ್ರಹ್ಮೋತ್ಸವದಲ್ಲಿ ಮಹಾವಿಷ್ಣುವಿನ ದರ್ಶನಕ್ಕೆ ಪ್ರಶಸ್ತವಾದ ಶನಿವಾರ ೪ನೇ ದಿನವಾದ ನ.೯ರಂದು ರಾತ್ರಿ ೭ಗಂಟೆಗೆ ವಜ್ರಖಚಿತರಾಜಮುಡಿ ಉತ್ಸವ ನಡೆದರೆ ೬ನೇದಿನವಾದ ನ.೧೧ರ ಸೋಮವಾರ ಮಕ್ಕಳಭಾಗ್ಯ ಕರುಣಿಸುವ ಚೆಲುವನಾರಾಯಣಸ್ವಾಮಿಯ ಉತ್ಸವ ಎಂದೇ ಪ್ರಖ್ಯಾತವಾದ “ತೊಟ್ಟಿಲಮಡುಜಾತ್ರೆ” “ಅಷ್ಠತೀರ್ಥೋತ್ಸವ ನಡೆಯಲಿದೆ.
ವಿಶಿಷ್ಠ ಸಂಪ್ರದಾಯ, ಪರಂಪರೆಯ ಆಚರಣೆಯಲ್ಲಿ ಭಾಗಿಯಾದ ಭಕ್ತರಿಗೆ ಅಪೇಕ್ಷಿತ ಫಲ ದೊರೆಯುತ್ತಿರುವ ಕಾರಣ ಭಕ್ತರ ನಂಬಿಕೆಗೆ ಇಂಬು ದೊರೆಯುತಿದೆ. ವೈದ್ಯ ರೂ ಸಹ ಕೈಚೆಲ್ಲಿದ ಎಷ್ಠೋ ಪ್ರಕರಣಗಳ ದಂಪತಿಗಳಿಗೆ ತೊಟ್ಟಿಲಭಾಗ್ಯ ದೊರೆತಿರುವುದು ಉತ್ಸವದಲ್ಲಿ ಭಾಗಿಯಾದ ದಂಪತಿಗಳಿಗೆ ಅನುಭವಕ್ಕೆ ಬರುತ್ತಿರುವ ಕಾರಣ ಮಹೋತ್ಸವದಲ್ಲಿ ಹರಕೆಕಟ್ಟಿಕೊಂಡು ಭಾಗವಹಿಸುವ ದಂಪತಿಗಳ ಸಂಖ್ಯೆ ಹೆಚ್ಚುತ್ತಿದೆ. ಬಹುಕಾಲ ಮಕ್ಕಳಾಗದ ದಂಪತಿಗಳು ಮತ್ತು ಮುದ್ದಾದ ಆರೋಗ್ಯಕರ ಕಂದಮ್ಮ ಅಪೇಕ್ಷಿಸುವ ನವದಂತಿಗಳು ಅನುರೂಪ ಜೋಡಿ ಬಯಸುವವರು ವಿಶೇಷವಾಗಿ ಹರಕೆ ಕಟ್ಟಿಕೊಂಡು ಮಡಿಲು ತುಂಬಿ ಮಹೋತ್ಸವದಲ್ಲಿ ಭಾಗಿಯಾಗುವುದು ತೊಟ್ಟಿಲಮಡು ಜಾತ್ರೆಯ ವಿಶೇಷವಾಗಿದೆ.
ಹೀಗಿದೆ ಆಚರಣೆ: ಕಲ್ಯಾಣಿ ತೀರದಲ್ಲಿ ಪತ್ನಿ ಮಡಿಲುತುಂಬಿ ಚೆಲುವನಾರಾಯಣಸ್ವಾಮಿಯ ಪಾದುಕೆಯ ಪಲ್ಲಕ್ಕಿಯೋಡನೆ ಸಾಗಿ ಗಿರಿಶಿಖರಗಳ ಮಧ್ಯೆ ಇರುವ ಔಷದೀಯ ಗುಣವಿರುವ ಎಂಟು ತೀರ್ಥಗಳಲ್ಲಿ ಸ್ನಾನ ಮಾಡಬೇಕು ಈ ಎಲ್ಲಾ ಕೊಳಗಳಿಗೆ ಪಾದುಕೆಯೊಂದಿಗೆ ಹೋಗಿ ಬರಲು ಕನಿಷ್ಠ ೨೦ಕಿಮಿ ಕ್ರಮಸಬೇಕಾಗುತ್ತದೆ. ಉತ್ಸವದ ಮಧ್ಯೆ ಸಾಗುತ್ತಿದ್ದರೆ ಈ ಶ್ರಮ ಗಣನೆಗೆ ಬರುವುದಿಲ್ಲ ನಡೆಯಲು ಸಾಧ್ಯವಾಗದ ದಂಪತಿಗಳು ಪಂಚಕಲ್ಯಾಣಿ ಮತ್ತು ವೈಕುಂಠಗAಗೆಯಲ್ಲಿ ಸ್ನಾನಮಾಡಿ ಅಲ್ಲಿರುವ ತೊಟ್ಟಿಲಿಗೆ ಪೂಜೆ ಮಾಡಿ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿದರೆ ಇಷ್ಠಾರ್ಥ ಸಿದ್ಧಿಯಾಗುತ್ತದೆ ಎನ್ನುತ್ತಾರೆ ಧಾರ್ಮಿಕ ಚಿಂತಕರು. ಉತ್ಸವವೇಳೆ ದೇವರ ನೈವೇಧ್ಯದ ಹಾಲು ಹಣ್ಣು, ತೀರ್ಥಬಿಟ್ಟರೆ ಬೇರೇನೂ ಸೇವಿಸುವಂತಿಲ್ಲ.ಇನ್ನು ಅನುರೂಪ ಕಂಠಣಭಾಗ್ಯ ಅಪೇಕ್ಷಿಸುವವರು ಸಹ ಉತ್ಸವದಲ್ಲಿ ಪಾಲ್ಗೊಂಡರೆ ಶೀಘ್ರ ಕಂಕಣಬಲ ಕೂಡಿಬರಲಿದೆ ಎಂಬ ನಂಬಿಕೆಯಿದೆ. ಚಾರಣ ಪ್ರಿಯರಿಗೂ ಈ ಉತ್ಸವದ ಪರಿಸರ ನಡಿಗೆ ಪ್ರಿಯವಾಗಿದೆ
ಬೆಟ್ಟ ಗುಡ್ಡಗಳ ಮಧ್ಯೆ ಅಷ್ಠ ತೀರ್ಥಗಳು: ಚೆಲುವ ದೈವೀವನದ ಮಧ್ಯೆ ಇರುವ ವೇದಪುಷ್ಕರಣಿ, ಶ್ರೀರಾಮ ಸೀತೆಗಾಗಿ ಬಾಣಬಿಟ್ಟು ನೀರುಕ್ಕಿಸಿದ ಹೆಬ್ಬಂಡೆಗಳ ನಡುವಿನ ದನುಷ್ಕೋಟಿ, ಬೆಟ್ಟಗುಡ್ಡಳಿಂದ ಹರಿಯುವ ಯಾದವಾತೀರ್ಥ, ಬೆಟ್ಟಗಳ ಮಧ್ಯೆ ಇರುವ ದರ್ಭತೀರ್ಥ, ಪಲಾಶತೀರ್ಥ, ಪದ್ಮತೀರ್ಥ, ಬಾಲಕರ ಶಾಲೆ ಹಿಂಭಾಗವಿರುವ ನರಸಿಂಹತೀರ್ಥ, ಮೋಕ್ಷ ಕರುಣಿಸುವ ನಾರಾಯಣತೀರ್ಥ ಹೀಗೆ ಎಂಟು ಪವಿತ್ರ ತೀರ್ಥಕೊಳಗಳು ಮೇಲುಕೋಟೆಯ ಗಿರಿಶಿಖರಗಳ ಮಧ್ಯೆ ನಿರ್ಮಾಣವಾಗಿದೆ. ವೈಕುಂಠಗAಗೆಯAತೂ ಹೆಬ್ಬಂಡೆಗಳ ಮಧ್ಯೆ ಹರಿಯುತ್ತಿದ್ದು ನಯನಮನೋಹರ ಪರಿಸರದಲ್ಲಿದೆ.
ತೊಟ್ಟಿಲಮಡು ಜಾತ್ರಾ ದಿನದ ಕಾರ್ಯಕ್ರಮಗಳು: ಅಷ್ಠತೀರ್ಥೋತ್ಸವ ನವೆಂಬರ್ ೧೧ರಂದು ಬೆಳಿಗ್ಗೆ ಸುಮಾರು ೭ ಗಂಟೆಗೆ ಸ್ವಾಮಿಯ ಪಲ್ಲಕ್ಕಿ ದೇಶಿಕರ ಸನ್ನಿದಿಗೆ ಆಗಮನ ಬೆಳಿಗ್ಗೆ ೮-೩೦ಕ್ಕೆ ರಾಜಮುಡಿಯೊಂದಿಗೆ ಕಲ್ಯಾಣಿಗೆ ಉತ್ಸವ, ಬೆಳಿಗ್ಗೆ ೯ ಕಲ್ಯಾಣಿಯಲ್ಲಿ ಪವಿತ್ರಸ್ನಾನದೊಂದಿಗೆ ಆರಂಭವಾಗುವ ಅಷ್ಠತೀರ್ಥೋತ್ಸವ ಸಂಜೆ ೫ಗಂಟೆ ವೇಳೆಗೆ ಕಣಿವೆ ಬಳಿಯಿರುವ ವೈಕುಂಠಗAಗೆ ತೊಟ್ಟಿಲಮಡು ಬಳಿ ಮುಕ್ತಾಯವಾಗುತ್ತದೆ. ಋಷಿಮುನಿಗಳು ಭಗವಂತನನ್ನು ದ್ಯಾನಮಾಡಿ ಸಾಕ್ಷಾತ್ಕಾರ ಪಡೆದ ಎಂಟು ಪವಿತ್ರ ತೀರ್ಥಗಳಲ್ಲಿಸ್ವಾಮಿಯ ಪಾದುಕೆಗೆ ಅಭಿಷೇಕ ನೆರವೇರುವ ಆಚರಣೆಯೇ ಅಷ್ಠತೀರ್ಥೋತ್ಸವವಾಗಿದ್ದು, ಉತ್ಸವ ಆರಂಭದವೇಳೆ ಕಲ್ಯಾಣಿಯಲ್ಲಿ ಪ್ರಥಮ ಅಭಿಷೇಕ ನೆರವೇರಿದರೆ ಸಂಜೆ ವೈಕುಂಠಗAಗೆಯಲ್ಲಿ ಕೊನೆಯ ಅಭಿಷೇಕನಡೆಯುತ್ತದೆ. ನಂತರಶ್ರೀಯೋಗಾನರಸಿAಹಸ್ವಾಮಿಯ ಬೆಟ್ಟದ ಗಿರಿಪ್ರದಕ್ಷಿಣೆಯೊಂದಿಗೆ ಅಷ್ಠತೀರ್ಥೋತ್ಸವ ಮುಕ್ತಾಯವಾಗಲಿದೆ.
ಕದಂಬ ಮೊಸರನ್ನ ಪ್ರಸಾದ: ಇಲ್ಲಿ ಬರುವ ಸಾವಿರಾರು ಭಕ್ತರಿಗೆ ಮೇಲುಕೋಟೆಯ ಬ್ರಾಂಡ್ ಕದಂಬ ಮತ್ತು ದದಿಯೋದನ ಪ್ರಸಾದ ನೀಡಲಾಗುತ್ತದೆ ದೇವಾಲಯ, ಹಾಗೂ ವಿವಿಧ ಜನಾಂಗದವರು ಈ ಪ್ರಸಾದ ತಯಾರಿಸಿ ಭಕ್ತರಿಗೆ ನೀಡುತ್ತಾರೆ ಹೆಬ್ಬಂಡೆಗಳ ಮೇಲೆ ಕುಳಿತ ಪ್ರಸಾದ ಸವಿಯುವುದೇ ವಿಶೇಷ ಅನುಭವ ನೀಡುತ್ತದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು