LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಜಂಬೂ ಸರ್ಕಸ್ ಮನಸೋತೆ ಮನಸಾರೆ ಹಾಡು ಬಂತು

ಕನ್ನಡದ ಚಲನಚಿತ್ರದ ಸುಪ್ರಸಿದ್ದ ನಿರ್ದೇಶಕ ಎಂ ಡಿ ಶ್ರೀಧರ್ ಇದುವರೆವಿಗೂ ನಿರ್ದೇಶನ ಮಾಡಿದ ಸಿನಿಮಗಳೆಲ್ಲ ಸೂಪರ್ ಹಿಟ್. ಈಗ ಅವರ ಜಂಬೂ ಸರ್ಕಸ್ ಕೂಡ ಆ ನಿಟ್ಟಿನಲ್ಲಿ ಸಾಗುವಂತಿದೆ. ಅದಕ್ಕೆ ಸಾಕ್ಷಿಯಾಗಿ ಒಂದು ಇಂಪಾದ ಹಾಡು ಮನಸೂತೆ ಮನಸಾರೆ.. ಕವಿರಾಜ್ ಅವರ ಗೀತ ಸಾಹಿತ್ಯದಲ್ಲಿ ನಕುಲ ಅಭಯಂಕರ ಹಾಡಿರುವ ಈ ಹಾಡನ್ನು ವಾಸುಕಿ ವೈಭವ ಸಂಯೋಜನೆ ಮಾಡಿದ್ದಾರೆ. ಈ ಹಾಡನ್ನು ಬಿಡುಗಡೆ ಮಾಡುತ್ತಾ ಚಿತ್ರದ ಇನ್ನೆರಡು ಹಾಡು ಗ್ರಹಚಾರ..

ಹಾಗೂ ಗಾಂಚಲಿ ಗಂಗವ್ವ.. ಸಹ ಮಾಧ್ಯಮದರ ಮುಂದೆ ಕಳೆದ ಶನಿವಾರ ಎಂ ಎಂ ಬಿ ಲೆಗಸಿ ಸಭಾಂಗಣದಲ್ಲಿ ಅನಾವರಣ ಮಾಡಲಾಯಿತು.
ಜಂಬೂ ಸರ್ಕಸ್ ಚಿತ್ರಕ್ಕೆ ಕಥಾ ಹಂದರ ಮೊದಲು ಬಂದಿದ್ದು ಹಾಸ್ಯ ನಟ ಸುಂದರ್ ವೀಣಾ ಅವರಿಂದ. ಅಲ್ಲಿಂದ ನಾವೆಲ್ಲ ಕುಳಿತು ಅದನ್ನು ಪಸಂದಾಗಿ ಮನರಂಜನೆ ಮೂಲಕ ಪ್ರೇಕ್ಷಕರಿಗೆ ತಲುಪಿಸುವ ಹಾಗೆ ಚಿತ್ರಕಥೆ ಸಿದ್ದ ಮಾಡಿದೆವು ಎಂದು ಕಾರ್ಯಕಾರಿ ನಿರ್ಮಾಪಕಿ ಸುಪ್ರೀತ ಶೆಟ್ಟಿ ಹೇಳಿಕೊಂಡರು.

ಈ ಚಿತ್ರಕ್ಕೆ ಎಂ ಡಿ ಶ್ರೀಧರ್ ಅಂತಹ ನಿರ್ದೇಶಕರು ಇದ್ದ ಮೇಲೆ ಸಿನಿಮಾಕ್ಕೆ ಒಂದು ದೊಡ್ಡ ತೂಕ ಬಂದಿತು ಎಂದು ಅವರು ಮೆಚ್ಚುಗೆ ತಿಳಿಸಿದರು.
ನಿರ್ಮಾಪಕ ಎಚ್ ಸಿ ಸುರೇಶ್ ಈ ಜಂಬೂ ಸರ್ಕಸ್ ಅನ್ನು ನಿಮ್ಮ ಸಿನಿಮಾ ಎಂದು ಪ್ರೋತ್ಸಾಹಿಸಿ ಎಂದು ಮಾಧ್ಯಮದರನ್ನು ಹಾರೈಸುವಂತೆ ವಿನಂತಿಸಿಕೊಂಡರು.

ಖ್ಯಾತ ನಿರ್ದೇಶಕ ಎಂ ಡಿ ಶ್ರೀಧರ್ ಜಂಬೂ ಸರ್ಕಸ್ ಸಿನಿಮಾದಲ್ಲೂ ಸಹ ನಾಯಕಿಯ ಹೆಸರನ್ನು ಅಂಕಿತ ಎಂದು ಮುಂದುವರೆಸಿದ್ದಾರೆ. ಅವರ ಮೊದಲ ಸಿನಿಮದಿಂದ ಸಹ ನಾಯಕಿಗೆ ಅಂಕಿತ ಎಂದೇ ಇರಬೇಕು ಎಂದು ಅವರ ಸಂಕಲ್ಪ ಯಾಕೆ ಮಾಡಿದ್ದಾರೆ ಎಂಬ ಗುಟ್ಟನ್ನು ಅವರು ಬಿಟ್ಟುಕೊಡಲಿಲ್ಲ. ವಾಸುಕಿ ವೈಭವ ಅವರ ಸುಶ್ರಾವ್ಯದ ಸಂಗೀತವನ್ನು ಕೊಂಡಾಡಿದ ನಿರ್ದೇಶಕ ಶ್ರೀಧರ್ ಜಂಬೂ ಸರ್ಕಸ್ ಸಿನಿಮಾವನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡುವುದಾಗಿ ಅಂದುಕೊಂಡಿದ್ದಾರೆ.

ಅಂದಾಹಗೆ ನಿರ್ದೇಶಕ ಶ್ರೀಧರ್ ಅವರು ಕಾರ್ಯಕಾರಿ ನಿರ್ಮಾಪಕಿ ಸುಪ್ರೀತ ಶೆಟ್ಟಿ ಅವರ ವಸ್ತ್ರ ವಿನ್ಯಾಸದ ಪರಿಣಿತಿಯನ್ನು ಹೋಗಳಿ ಅವರನ್ನು ತಮ್ಮ ಮುಂದಿನ ಸಿನಿಮಗಳಲ್ಲಿ ಸಹ ಜೊತೆಯಾಗಿದ್ದರೆ ಅನುಕೂಲ ಆಗುವುದು ಎಂದು ತಿಳಿಸಿದರು. ನಾಯಕ ಪ್ರವೀಣ ತೇಜ್ ಹಾಗೂ ನಾಯಕಿ ಅಂಜಲಿ ಅವರಿಗೆ ಪ್ರತಿಭೆ ಹೇರಳವಾಗಿದೆ. ಅವರಿಬ್ಬರೂ ಮುಂದಿನ ದಿನಗಳಲ್ಲಿ ಒಳ್ಳೆಯ ಸ್ಥಾನಕ್ಕೆ ಎರಲಿದ್ದಾರೆ ಎಂಬ ಭರವಸೆ ವ್ಯಕ್ತ ಮಾಡಿದರು ನಿರ್ದೇಶಕ ಎಂ ಡಿ ಶ್ರೀಧರ್.
ಟಾಮ್ ಅಂಡ್ ಜೆರ್ರಿ ರೀತಿಯಲ್ಲಿ ಜಂಬೂ ಸರ್ಕಸ್ ಚಿತ್ರದ ನಾಯಕ ಪ್ರವೀಣ ತೇಜ್ ಹಾಗೂ ನಾಯಕಿ ಅಂಜಲಿ ಎಸ್ ಅನೀಶ್ ಪಾತ್ರ ನಿರ್ವಹಿಸಿದ್ದಾರೆ ಎಂದು ಚಿತ್ರದ ಸಂಭಾಷಣೆಕಾರ ರಘು ನೀಡುವಲ್ಲಿ ವಿವರಿಸಿದರು.

ಪೋಷಕ ನಟಿ ಲಕ್ಷ್ಮಿ ಸಿದ್ದಯ್ಯ ಜಗಳಗಂಟಿಯ ಪಾತ್ರ ಮಾಡಿದ್ದೆ ಅಲ್ಲದೆ ಈ ಚಿತ್ರದಲ್ಲಿ ಕೆಲಸ ಮಾಡಿದ್ದು ಸಮಾಧಾನ ಹಾಗೂ ಸಂತೋಷ ತಂದಿದೆ ಎಂದು ವಿವರಿಸಿದರು.ನಾಯಕ ಪ್ರವೀಣ ತೇಜ್ ಮಾತನಾಡುತ್ತಾ ನಾನು ಇಂದು ಚಿತ್ರ ರಂಗದಲ್ಲಿ ಇರೋದಕ್ಕೆ ನಿರ್ದೇಶಕ ಎಂ ಡಿ ಶ್ರೀಧರ್ ಕಾರಣ. ಅವರ ನಿರ್ದೇಶನದ ಸಿನಿಮಾ ಎಂದು ನಿರ್ಮಾಪಕ ಸುರೇಶ್ ಹೇಳಿದಾಗ ನಾನು ಕುಣಿದು ಕುಪ್ಪಳಿಸಿದೆ. ಅದಕ್ಕೆ ತಕ್ಕಂತೆ ಅವರು ನನಗೆ ವಿಭಿನ್ನವಾದ ಪಾತ್ರ ನಿರ್ವಹಣೆ ಸಹ ನೀಡಿ ಸಂತೋಷ ಇನ್ನೂ ಹೆಚ್ಚು ಮಾಡಿದ್ದಾರೆ. ಈ ಚಿತ್ರದಲ್ಲಿ ನಾಯಕಿ ಅಂಜಲಿ ನನಗಿಂತ ಚನ್ನಾಗಿ ನೃತ್ಯ ಮಾಡಿದ್ದಾರೆ ಎಂಬ ವಿಚಾರವನ್ನು ನಾಯಕ ಪ್ರವೀಣ ತೇಜ್ ಹೇಳಿಕೊಂಡರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು