LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

`ಜಾಂಟಿ ಸನ್ ಆಫ್ ಜಯರಾಜ್' ಟೀಸರ್ ಬಿಡುಗಡೆ

ಜಾಂಟಿ ಸನ್ ಆಫ್ ಜಯರಾಜ್ ಚಿತ್ರದ ಪಾತ್ರಗಳ ಪರಿಚಯದ ಟೀಸರ್ ಹಾಗೂ ಟ್ರೈಲರ್ ಬಿಡುಗಡೆ ಸಮಾರಂಭವು ನಡೆಯಿತು. ನಟಿ ವಿನೋಧ್ ಪ್ರಭಾಕರ್ ಮತ್ತು ಶ್ರೀನಗರ ಕಿಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು. ಚಿತ್ರರಂಗದಲ್ಲಿ ಎರಡು ದಶಕಗಳ ಕಾಲ ಪ್ರಚಾರ ಕಾರ್ಯದಲ್ಲಿ ಅನುಭವ ಹೊಂದಿರುವ ಸುಗೂರುಕುಮಾರ್ ಪ್ರಥಮ ಅನುಭವ ಎನ್ನುವಂತೆ ನಿರ್ಮಾಣ ಮಾಡಿದ್ದಾರೆ.

ಕತೆ ಬರೆದು ನಿರ್ದೇಶನ ಮಾಡಿರುವ ಆನಂದರಾಜ್ ಮಾತನಾಡಿ ಜಯರಾಜ್ ನಂತರದ ದಿನಗಳ ಸಂದರ್ಭದಲ್ಲಿ ಹಣಕಾಸು ವ್ಯವಹಾರ, ಮಾರ್ಕೆಟ್ ದಂಧೆ ಎಲ್ಲವು ರಾರಾಜಿಸುತ್ತಿತ್ತು. ಇಂತಹ ವಿಷಯಗಳನ್ನು ಕೇಳಿದ್ದು, ನೋಡಿದ್ದು, ಓದಿದ್ದು ಎಲ್ಲವನ್ನು ಬಳಸಿಕೊಂಡು ಚಿತ್ರಕಥೆ ಬರೆಯಲಾಗಿದೆ. ಜಯರಾಜ್ ಮಗನೇ ಪಾತ್ರವಾಗಿ ಬರುತ್ತಾರೆ. ಆತನ ಸಾವಿಗೆ ಕಾರಣರಾದಂತ ಪಾತ್ರಗಳು ಬಂದು ಹೋಗುತ್ತವೆ.

ಆಗಿನ ಕಾಲಘಟ್ಟದಲ್ಲಿ ಇದ್ದಂತ ರೋಲ್‍ಗಳನ್ನು ಕಾಲ್ಪನಿಕವಾಗಿ ತೋರಿಸಲಾಗಿದೆ. ಜತೆಗೆ ತಾಯಿ ಸೆಂಟಿಮೆಂಟ್, ನವಿರಾದ ಪ್ರೀತಿ ಸನ್ನಿವೇಶಗಳು ಅಲ್ಲದೆ ಗೆಳತನದ ಸಾರವನ್ನು ಹೇಳಲಾಗಿದೆ. ಹಳೇ ಬೆಂಗಳೂರು ಹೇಗಿತ್ತು ಅಂತ ನೋಡಬೇಕಾದರೆ, ನಮ್ಮ ಸಿನಿಮಾ ನೋಡಿ. 1989 ಅವಧಿ ಕಟ್ ಮಾಡಿದರೆ ಈಗಿನ ಜಮಾನದಲ್ಲಿ ಏನೇನು ನಡೆಯುತ್ತಿದೆ ಎಂಬುದು ಇರಲಿದೆ. ಕಲಾವಿದರುಗಳಾದ ರಾಜವರ್ಧನ್, ಶರತ್‍ಲೋಹಿತಾಶ್ವ, ಪಟ್ರೋಲ್‍ಪ್ರಸನ್ನ, ಕಿಶನ್, ಸೋನುಪಾಟೀಲ್, ಸಚ್ಚಿನ್‍ಪುರೋಹಿತ್, ಮೈಕೋ ನಾಗರಾಜ್ ಇವರೆಲ್ಲರೂ ಪಾತ್ರಕ್ಕೆ ಜೀವ ತುಂಬಿದ್ದಾರೆ ಎಂದರು.

ಅಪ್ಪನ ಪಾತ್ರ ಮಾಡುವಾಗ ನರ್ವಸ್ ಆಗಿದ್ದೆ. ನಿರ್ದೇಶಕರು ಹೇಳಿದಾಗ ಓಕೆ ಅಂತ ಹೇಳಿದ್ದೆ. ಕ್ಯಾಮಾರ ಮುಂದೆ ನಿಂತಾಗ ನಡುಕ ಬಂತು. ಅಂತ ಪವರ್‍ಫುಲ್ ರೋಲ್‍ನ್ನು ಹೇಗೆ ಮಾಡುವುದು. ಕೊನೆ ಒಂದು ದೃಶ್ಯದಲ್ಲಿ ನಟಿಸಿದಾಗ ಧೈರ್ಯ ಬಂತು. ಅಪ್ಪನ ಕಾಲ, ಮಗನಾಗಿ ಹೀಗೆ ಎರಡು ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದೇನೆಂದು ನಾಯಕ ಅಜಿತ್‍ಜಯರಾಜ್ ಹೇಳಿದರು.ನಾಯಕಿ ನಿವಿಷ್ಕ ಪಾಟೀಲ್ ಚಿತ್ರೀಕರಣ ಅನುಭವಗಳನ್ನು ಮೆಲುಕು ಹಾಕಿದರು. ಛಾಯಾಗ್ರಹಣ ಅರ್ಜುನ್ ಆಕೋಟ್, ಸಂಗೀತ ವಿಜೇತಮಂಜೇಹ, ಹಿನ್ನಲೆ ಶಬ್ದ ಅಲೆಕ್ಸ್ ಅವರದಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು