LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಜ.3-5ರವರೆಗೆ ಅಪರಮಿತ ಅವಕಾಶ ಸೃಷ್ಟಿಸುವ ಉದ್ಯಮಿ ಒಕ್ಕಲಿಗ ಎಫ್‍ಸಿ ಎಕ್ಸ್‍ಪೋ

ಫಸ್ಟ್ ಸರ್ಕಲ್ (ಎಫ್‍ಸಿ) ಉದ್ಯಮಿ ಒಕ್ಕಲಿಗ-ಎಫ್‍ಸಿ ಎಕ್ಸ್‍ಪೋ 2025 ಅನ್ನು ಬೆಂಗಳೂರು ನಗರದಲ್ಲಿ ಆಯೋಜಿಸುತ್ತಿದ್ದು, ಮೂರು ದಿನಗಳ ಕಾಲ ನಡೆಯಲಿರುವ ಈ ಎಕ್ಸ್‍ಪೋ ಅನ್ನು ಒಕ್ಕಲಿಗ ಉದ್ಯಮಿಗಳ ಬೆಳವಣಿಗೆ ಮತ್ತು ಯಶಸ್ಸಿಗಾಗಿ ರೂಪಿಸಿದೆ. ಈ ಕಾರ್ಯಕ್ರಮವು ಜನವರಿ 3 ರಿಂದ 5ರ ವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ಗಾಯತ್ರಿ ಗ್ರಾಂಡ್ ಮತ್ತು ಗಾಯತ್ರಿ ವೃಕ್ಷದಲ್ಲಿ ನಡೆಯಲಿದೆ. ಈ ಬೃಹತ್ ಕಾರ್ಯಕ್ರಮವು ಒಕ್ಕಲಿಗ ಸಮುದಾಯದ ಉದ್ಯಮಶೀಲತೆಗೆ ವೇದಿಕೆ ಒದಗಿಸುವುದರ ಜೊತೆಗೆ ಇನ್ನೊವೇಶನ್, ನೆಟ್‍ವರ್ಕಿಂಗ್‍ಹಾಗೂ ಸಹಭಾಗಿತ್ವಕ್ಕೆ ನೆರವಾಗಲಿದೆ.

ಈ ಕುರಿತಂತೆ ಮಾಹಿತಿ ನೀಡಿದ ಫಸ್ಟ್ ಸರ್ಕಲ್ ನ ರಾಜ್ಯಾಧ್ಯಕ್ಷರಾದ ನಂದೀಶ್ ರಾಜೇಗೌಡ ಮಾತನಾಡಿ, ಮುಂದಿನ ಪೀಳಿಗೆಗಾಗಿ ರೂಪಿಸಿರುವ ಆಲ್ ಇನ್ ಒನ್ ಆ್ಯಪ್ ಆಗಿರುವ ಎಫ್ ಸಿ ನೆಕ್ಸ್ಟ್ ಆ್ಯಪ್ ಬಿಡುಗಡೆ ಮಾಡಲಾಗಿದೆ. ಇದು ಭವಿಷ್ಯದ ಪೀಳಿಗೆಗೆ ಉದ್ಯಮ ಸೇರಿದಂತೆ ಹಲವು ಕ್ಷೇತ್ರಗಳನ್ನೊಳಗೊಂಡತೆ ಸಿದ್ದಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಸಕ್ತಿಯುಳ್ಳವರು ಆಪ್ ಮೂಲಕ ನೊಂದಣಿ ಮಾಡಿಕೊಳ್ಳಬಹುದು.

ಈ ಆ್ಯಪ್ ಮೂಲಕ ಮುಂದಿನ ಮೂರು ವರ್ಷಗಳಲ್ಲಿ ಅಂದಾಜು 7 ರಿಂದ 8 ಲಕ್ಷ ಉದ್ಯಮಿಗಳನ್ನ ಸೇರಿಸುವ ನಿರೀಕ್ಷೆಯಿದೆ. ಒಟ್ಟು 14 ಜಿಲ್ಲೆಗಳಿಂದ 143 ತಾಲ್ಲೂಕುಗಳಲ್ಲಿ ಒಕ್ಕಲಿಗ ಸಮುದಾಯದ ಅಧ್ಯಯನ ಕೈಗೊಂಡಿದ್ದು, ಮೊದಲ ವರ್ಷ 10 ಲಕ್ಷ, ಎರಡನೇ ವರ್ಷ 20 ಲಕ್ಷ ಹಾಗೂ ಮೂರನೇ ವರ್ಷ 30 ಲಕ್ಷ ಗ್ರಾಹಕರು ಹಾಗೂ ಅಂದಾಜು 7 ರಿಂದ 8 ಲಕ್ಷ ಒಕ್ಕಲಿಗ ಉದ್ಯಮಿಗಳ ಮಾಹಿತಿಯನ್ನು ಸಂಗ್ರಹಿಸುವ ಗುರಿ ಹೊಂದಿದ್ದೇವೆ. ನಾವು ಇಲ್ಲಿಯವರೆಗೆ 14 ವಲಯಗಳನ್ನು ಪ್ರಾರಂಭಿಸಿದ್ದು, ಬಿಸಿನೆಸ್ ಕನೆಕ್ಟ್ ಫೀಚರ್, ಬಳಕೆದಾರರು ಡಿಜಿಟಲಿ ಮೀಟಿಂಗ್‍ಗಳನ್ನ ವೀಕ್ಷಿಸುವ ಅವಕಾಶ, ವಿಚಾರಣೆಗಳನ್ನು ಟ್ರ್ಯಾಕ್ ಮಾಡಲು ಮತ್ತು ವ್ಯವಹಾರವನ್ನು ಮೇಲ್ವಿಚಾರಣೆ ಮಾಡಲು ಹಾಗೂ ಇ-ಲೆಡ್ಜರ್ ವೈಶಿಷ್ಟ್ಯತೆಯನ್ನು ಸಹ ಹೊಂದಿದೆ.

ಇಲ್ಲಿಯವರೆಗೆ ರೂ. 2,500 ಕೋಟಿ ವ್ಯವಹಾರ ನಡೆಸಲಾಗಿದೆ. ಕೆಲವು ಅಸಂಘಟಿತ ವ್ಯವಹಾರಗಳು, ಕಿರು ಉದ್ಯಮಗಳು, ಸನ್ಣ ಉದ್ಯಮಗಳನ್ನು ಬೆಳೆಯಲು ಮಾರ್ಗದರ್ಶನ ನೀಡುವ ಕಾರ್ಯ ಮಾಡಲಾಗುತ್ತದೆ. 123 ತಾಲ್ಲೂಕುಗಳಲ್ಲಿ ಎಲ್ಲಾ 24 ವಲಯಗಳ ಸಂಯೋಜಕರು ಮತ್ತು 24 ಮಹಿಳಾ ಉದ್ಯಮಿಗಳಿದ್ದಾರೆ. ನಾವು ಈ ಮುಂಚೆ ಮಾಹಿತಿಯನ್ನು ಸಂಗ್ರಹಿಸಿರಲಿಲ್ಲ ಆದರೆ ಈಗ ಮಾಹಿತಿಯನ್ನು ಸಂಗ್ರಹಣೆಯನ್ನು ಆರಂಭಸಿದ್ದು, ಮೂರು ವರ್ಷಗಳಲ್ಲಿ ಪೂರ್ಣಗೊಳಿಸಲಿದ್ದೇವೆ ಎಂದರು.

ಪ್ರಮುಖವಾಗಿ ಮಾಹಿತಿ ನೀಡಿದ ನಂದೀಶ್‍ರಾಜೇಗೌಡ, ಬರುವ ದಿನಗಳಲ್ಲಿ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಸಿಗುವ ನಿಟ್ಟಿನಲ್ಲಿ ವಿಶೇಷ ಆದ್ಯತೆ ವಹಿಸುತ್ತಿದ್ದೇವೆ. ಪ್ರತಿ ಋತುವಿನಲ್ಲಿಯೂ ಯಾವ ಬೆಲೆಯನ್ನ ಎಷ್ಟು ಪ್ರಮಾಣದಲ್ಲಿ ಬೆಳೆದರೆ ರೈತರಿಗೆ ಲಾಭ ದೊರೆಯಲಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನೀಡುವ ಉದ್ದೇಶ ಹೊಂದಿದ್ದೇವೆ. ನಾವೇ ಬೆಂಬಲ ಬೆಲೆ ನೀಡಿ ಕೊಂಡುಕೊಳ್ಳುವ ವ್ಯವಸ್ಥೆ ಕೂಡಾ ಎಫ್‍ಸಿ ನೆಕ್ಸ್ಟ್‍ಅಪ್ಲಿಕೇಷನ್‍ಮುಖಾಂತರ ಸಾಧ್ಯವಾಗಲಿದೆ. ಅಷ್ಟೇ ಅಲ್ಲ ರೈತ ಬೆಳೆದ ಬೆಳೆಗಳನ್ನ ಸುಲಭವಾಗಿ ಮಾರುಕಟ್ಟೆಗೆ ತಲುಪಿಸಲು ಸಾರಿಗೆ ವ್ಯವಸ್ಥೆ ಕೂಡಾ ಮಾಡುವ ಯೋಜನೆ ಹೊಂದಿದ್ದೇವೆ. ಒಟ್ಟಾರೆಯಾಗಿ ರೈತರ ಆರ್ಥಿಕ ಸಬಲೀಕರಣಕ್ಕೆ ಸೂಕ್ತ ವ್ಯವಸ್ಥೆ ಹಾಗೂ ಯೋಜನೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮೂರನೇ ಆವೃತ್ತಿಯ ಕಾರ್ಯಕ್ರಮ ಇದಾಗಿದ್ದು, ಮೂರು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ. ಎರಡನೇ ಆವೃತ್ತಿಯಲ್ಲಿ 15,000 ಹಾಜರಿದ್ದರು, ಆದರೆ ಈ ಬಾರಿ ಗ್ರಾಹಕರನ್ನು ಒಳಗೊಂಡಂತೆ 1 ಲಕ್ಷ ಜನರನ್ನು ನಿರೀಕ್ಷಿಸುತ್ತಿದ್ದೇವೆ. ಅಪ್ಲಿಕೇಶನ್ ಡೌನ್‍ಲೋಡ್ ಮಾಡುವವರಿಗೆ ಉಚಿತ ಪ್ರವೇಶ ಸಿಗಲಿದೆ.
ಮಂಜುಳಾ ಪ್ರಕಾಶ್, ಚಂದ್ರಪ್ಪ, ಅಮರೇಶ ಎಂ, ಭುವನ ಸುರೇಶ್ ಮಾಹಿತಿ ನೀಡಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು