LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಟೊಯೋಟಾ ತಾಂತ್ರಿಕ ತರಬೇತಿ ಸಂಸ್ಥೆಯ 15ನೇ ಘಟಕೋತ್ಸವ

ಬೆಂಗಳೂರು: ಟೊಯೋಟಾ ತಾಂತ್ರಿಕ ತರಬೇತಿ ಸಂಸ್ಥೆ (ಟಿಟಿಟಿಐ) ಇಂದು ತನ್ನ 15ನೇ ಬ್ಯಾಚ್ ನ ವಿದ್ಯಾರ್ಥಿಗಳ ಘಟಕೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಪರಮಪೂಜ್ಯ ಜಗದ್ಗುರು ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮೀಜಿಯವರು ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಶುಭ ಹಾರೈಸಿದರು.

ಈ ಘಟಕೋತ್ಸವದಲ್ಲಿ ಕರ್ನಾಟಕದ ಗ್ರಾಮೀಣ ಹಿನ್ನೆಲೆಯ 58 ಟಿಟಿಟಿಐ ವಿದ್ಯಾರ್ಥಿಗಳು ಮತ್ತು 156 ಟೊಯೋಟಾ ಕೌಶಲ್ಯ ಕೋರ್ಸ್ ವಿದ್ಯಾರ್ಥಿಗಳು ಪ್ರಮಾಣ ಪತ್ರ ಪಡೆದುಕೊಂಡರು. ವಿದ್ಯಾರ್ಥಿಗಳು ಕೋರ್ಸು ಪೂರ್ಣಗೊಳಿಸಿಕೊಳ್ಳುವುದರ ಮೂಲಕ ಜ್ಞಾನ, ಕೌಶಲ್ಯ, ದೇಹ ಭಾಷೆ ಮತ್ತು ವ್ಯಕ್ತಿತ್ವ ಬೆಳೆಸಿಕೊಳ್ಳುವುದರ ಜೊತೆಗೆ ಉತ್ಪಾದನಾ ಕ್ಷೇತ್ರದ ಜಾಗತಿಕ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಸಮಗ್ರ ಕೌಶಲ್ಯ ತರಬೇತಿಯನ್ನು ಪಡೆದುಕೊಂಡಿದ್ದಾರೆ.

ಸಮಾರಂಭದಲ್ಲಿ ಟಿಕೆಎಂ ಆಡಳಿತ ಮಂಡಳಿ, ಟೊಯೋಟಾ ಸಮೂಹ ಕಂಪನಿಗಳ ಪ್ರತಿನಿಧಿಗಳು, ಪೂರೈಕೆದಾರರು, ಆಟೋಮೋಟಿವ್ ಸ್ಕಿಲ್ಸ್ ಡೆವಲಪ್‍ಮೆಂಟ್ ಕೌನ್ಸಿಲ್ (ಎಎಸ್‍ಡಿಸಿ) ಮತ್ತು ನ್ಯಾಷನಲ್ ಸ್ಕಿಲ್ ಡೆವಲಪ್‍ಮೆಂಟ್ ಕೌನ್ಸಿಲ್ (ಎನ್‍ಎಸ್‍ಡಿಸಿ) ಪ್ರತಿನಿಧಿಗಳು, ಟೊಯೋಟಾ ಟೆಕ್ನಿಕಲ್ ಸ್ಕಿಲ್ ಅಕಾಡೆಮಿ- ಜಪಾನ್, ಟೊಯೋಟಾ ಇಂಡೋನೇಷ್ಯಾ ಅಕಾಡೆಮಿ ಪ್ರತಿನಿಧಿಗಳು ಉಪಸ್ಥಿತರಿದ್ದರು.

2007ರಲ್ಲಿ ಟಿಟಿಟಿಐ ಪ್ರಾರಂಭವಾಗಿತ್ತು. ಅಂದಿನಿಂದಲೂ ಅತ್ಯಾಧುನಿಕ ತಂತ್ರಜ್ಞಾನಗಳ ಕುರಿತು ಜ್ಞಾನವನ್ನು ಒದಗಿಸಲು ಮತ್ತು ಉದ್ಯಮಗಳ ಅಗತ್ಯಕ್ಕೆ ತಕ್ಕಂತೆ ಉದ್ಯೋಗಿ ಗಳನ್ನು ತಯಾರುಗೊಳಿಸಲು ಗ್ರಾಮೀಣ ಭಾಗದ ಯುವಕರಿಗೆ ಕೌಶಲ್ಯ ಒದಗಿಸಿ ಅಭಿವೃದ್ಧಿಗೊಳಿಸುವ ಕಡೆಗೆ ಗಮನ ಹರಿಸಿದೆ. ಈ ಕಾರ್ಯಕ್ರಮದ ವಿಶೇಷತೆ ಎಂದರೆ ವಿದ್ಯಾರ್ಥಿಗಳಿಗೆ ಶೇ.100 ಉದ್ಯೋಗ ಖಾತ್ರಿ. ಇಲ್ಲಿ ಕಲಿತ ವಿದ್ಯಾರ್ಥಿಗಳು ಕರ್ನಾಟಕ, ಭಾರತ ವಿದೇಶ ಸೇರಿದಂತೆ ಎಲ್ಲಾ ಕಡೆ ಅತ್ಯುತ್ತಮ ಉದ್ಯೋಗಾವಕಾಶ ಪಡೆದಿದ್ದಾರೆ.

ಈ ಸಂದರ್ಭದಲ್ಲಿ ಆಶೀರ್ವಚನ ನುಡಿಗಳನ್ನಾಡಿದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಅವರು, ?ಟೊಯೋಟಾ ತಾಂತ್ರಿಕ ತರಬೇತಿ ಸಂಸ್ಥೆಯ ಘಟಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದು ಸಂತಸ ತಂದಿದೆ. ಪ್ರತಿಭಾವಂತ ಯುವ ಪ್ರತಿಭೆಗಳ ಸಾಧನೆಗೆ ಸಾಕ್ಷಿಯಾಗಿರುವುದು ಉಲ್ಲಾಸದಾಯಕವಾಗಿದೆ.

ಟಿಟಿಟಿಐ ಸಂಸ್ಥೆಯುವ ಕರ್ನಾಟಕದ ಗ್ರಾಮೀಣ ಭಾಗದ ಯುವ ಜನತೆಗೆ ಉತ್ತಮ ತರಬೇತಿ ಮತ್ತು ಶಿಕ್ಷಣ ನೀಡಿ ಅವರನ್ನು ಸಬಲರನ್ನಾಗಿ ಮಾಡುತ್ತಿರುವುದು ಖುಷಿಯ ವಿಚಾರ. ಇಂತಹ ಯೋಜನೆಗಳು ಸಮಾಜದ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಾಹಿಸುತ್ತವೆ ಮತ್ತು ಸಾಮೂಹಿಕ ಅಭಿವೃದ್ಧಿ ಉಂಟು ಮಾಡುವ ಮೂಲಕ ಧನಾತ್ಮಕ ಪರಿಣಾಮ ಉಂಟಾಗುತ್ತದೆ. ವಾಹನೋದ್ಯಮಕ್ಕೆ ಮತ್ತು ಅದಕ್ಕೆ ಸಂಬಂಧಿಸಿದ ವಿಭಾಗಗಳಲ್ಲಿ ಕೆಲಸ ಮಾಡಲು ಸೂಕ್ತವಾಗಿ ಸಿದ್ಧರಾಗಿರುವ ನುರಿತ ವೃತ್ತಿಪರರನ್ನು ಬೆಳೆಸುವ ಸಂಸ್ಥೆಯ ಬದ್ಧತೆಗೆ ಈ ಯುವ ಪದವೀಧರರು ಪುರಾವೆಯಾಗಿ ನಿಂತಿದ್ದಾರೆ.

ಅವರು ವೃತ್ತಿ ಆರಂಭಿಸುತ್ತಿದ್ದಂತೆ ತಮ್ಮಲ್ಲಿ ಮೈಗೂಡಿಸಿಕೊಂಡಿರುವ ಕೌಶಲ್ಯ ಮತ್ತು ಮೌಲ್ಯಗಳ ಮೂಲಕ ಸಮಾಜ ಮತ್ತು ದೇಶದ ಬೆಳವಣಿಗೆಗೆ ಕೊಡುಗೆ ನೀಡಲಿದ್ದಾರೆ ಎಂಬ ನಂಬಿಕೆ ನಮಗಿದೆ. ಎಲ್ಲಾ ಪದವೀಧರರಿಗೂ ಶುಭವನ್ನು ಹಾರೈಸುತ್ತಿದ್ದೇವೆ ಮತ್ತು ನುರಿತ ಸಮರ್ಥ ಉದ್ಯೋಗಿಗಳನ್ನು ಬೆಳೆಸುವ ಟಿಟಿಟಿಐನ ಬದ್ಧತೆಯನ್ನು ಶ್ಲಾಘಿಸುತ್ತಿದ್ದೇವೆ" ಎಂದರು.

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ನ ಹಣಕಾಸು ಮತ್ತು ಆಡಳಿತ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಶ್ರೀ ಜಿ.ಶಂಕರ ಅವರು ಮಾತನಾಡಿ, "ಟೊಯೋಟಾದಲ್ಲಿ ನಾವು ಗ್ರಾಮೀಣ ಭಾಗದ ಯುವಜನತೆಯನ್ನು ಸಮಗ್ರ 360-ಡಿಗ್ರಿ ತರಬೇತಿಯ ಮೂಲಕ ವಿಶ್ವದರ್ಜೆಯ ತಂತ್ರಜ್ಞರನ್ನಾಗಿ ಬದಲಾಯಿಸಲು ಬದ್ಧರಾಗಿದ್ದಾರೆ. ಟೊಯೋಟಾ ತಾಂತ್ರಿಕ ತರಬೇತಿ ಸಂಸ್ಥೆಯಿಂದ ತರಬೇತಿ ಪಡೆದ 1,000ಕ್ಕೂ ಹೆಚ್ಚು ಗ್ರಾಮೀಣ ಯುವಕರ ಸಾಲಿಗೆ ಇವತ್ತು 214 ಪದವೀಧರರು ಸೇರಿದ್ದಾರೆ ಎಂದು ಘೋಷಿಸಲು ನಾವು ಹೆಮ್ಮೆಪಡುತ್ತೇವೆ.

ಕರ್ನಾಟಕದ ವಿವಿಧ ಜಿಲ್ಲೆಗಳ ಈ ಪದವೀಧರರು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆಯಲ್ಲಿ ಮತ್ತು ಕತಾರ್, ಜೋರ್ಡಾನ್ ಮತ್ತು ಸ್ಲೋವಾಕಿಯಾದಂತಹ ಅಂತರಾಷ್ಟ್ರೀಯ ಮಟ್ಟದ ವಿಭಾಗಗಳಲ್ಲಿ ಉದ್ಯೋಗಾವಕಾಶ ಪಡೆದುಕೊಂಡಿದ್ದಾರೆ. ಇಂದು ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರ ಆಶೀರ್ವಾದ ಪಡೆದು ಮತ್ತು ಅವರ ಶುಭ ನುಡಿಗಳನ್ನು ಕೇಳಿ ನಾವು ಕೃತಾರ್ಥರಾಗಿದ್ದೇವೆ" ಎಂದು ಹೇಳಿದರು.

ಮಾತು ಮುಂದುವರಿಸಿದ ಅವರು, "ಜೊತೆಗೆ ನಾವು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ 65 ಕೈಗಾರಿಕಾ ತರಬೇತಿ ಸಂಸ್ಥೆಗಳು (ಐಟಿಐಗಳು) ಮತ್ತು ಗವರ್ನ್ ಮೆಂಟ್ ಟೂಲ್ ರೂಮ್ ಆಂಡ್ ಟ್ರೈನಿಂಗ್ ಸೆಂಟರ್ ಗಳನ್ನು (ಜಿಟಿಟಿಸಿಗಳು) ಸ್ಥಾಪಿಸುವ ಕೆಲಸ ಮಾಡುತ್ತಿದ್ದೇವೆ. ಅದಕ್ಕೆ ಪೂರಕವಾಗಿ ಪ್ರಾಂಶುಪಾಲರು ಮತ್ತು ಅಧ್ಯಾಪಕರಿಗೆ ತರಬೇತಿ, ಮೂಲಸೌಕರ್ಯ ನೆರವು ಮತ್ತು ಸಂಸ್ಕೃತಿ ನಿರ್ಮಾಣ ವಿಚಾರದಲ್ಲಿ ತರಬೇತಿ ಕಾರ್ಯಕ್ರಮಗಳ ಮೇಲೆ ಗಮನ ಹರಿಸುತ್ತಿದ್ದೇವೆ. ಇಲ್ಲಿಯವರೆಗೆ ಟೊಯೋಟಾ ಭಾರತದಲ್ಲಿ 110,000 ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿದ್ದು, ನಿರಂತರವಾಗಿ ಉದ್ಯೋಗಾವಕಾಶ ಒದಗಿಸಿ ಬೆಳೆಸುತ್ತಿದೆ. ಆ ಮೂಲಕ ಸಮಾಜಕ್ಕೆ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಮಹತ್ವದ ಕೊಡುಗೆ ನೀಡಿದೆ" ಎಂದು ಹೇಳಿದರು.

ಘಟಕೋತ್ಸವ ಕಾರ್ಯಕ್ರಮದಲ್ಲಿ ಪದವೀಧರರು ಎನ್‍ಎಸಿ (ನ್ಯಾಷನಲ್ ಅಪ್ರೆಂಟಿಸ್‍ಶಿಪ್ ಸರ್ಟಿಫಿಕೇಟ್), ಎಎಸ್‍ಡಿಸಿ ಸರ್ಟಿಫಿಕೇಟ್ ಮತ್ತು ಜೆಐಎಂ ಹಾಗೂ ಟೊಯೋಟಾ ಸರ್ಟಿಫಿಕೇಟ್ ಸೇರಿದಂತೆ ಹಲವು ಸರ್ಟಿಫಿಕೇಷನ್ ಗಳನ್ನು ಸ್ವೀಕರಿಸಿದರು. ಇಲ್ಲಿಯವರೆಗೂ ಈ ಕಾರ್ಯಕ್ರಮದಲ್ಲಿ 1,020 ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ ಮತ್ತು 452 ಮಂದಿ ಟಿಕೆಎಂ ಸಂಸ್ಥೆಯನ್ನು ಸೇರಿಕೊಂಡಿದ್ದಾರೆ. ಉಳಿದ 568 ಮಂದಿ ಸಮೂಹ ಕಂಪನಿಗಳು, ಪೂರೈಕೆದಾರ ಕಂಪನಿಗಳು ಮತ್ತು ಸಾಗರೋತ್ತರ ಸಂಸ್ಥೆಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ. ಈ ಪದವೀಧರರು ಉದ್ಯಮದಲ್ಲಿನ ವಿವಿಧ ಕಂಪನಿಗಳಿಗೆ ಸೇರುವ ಅವಕಾಶ ಮತ್ತು ಅರ್ಹತೆ ಗಳಿಸಿದ್ದಾರೆ.

ಟಿಟಿಟಿಐಯ ವಿದ್ಯಾರ್ಥಿಗಳು ಈಗಾಗಲೇ ವಿಶ್ವ ಕೌಶಲ್ಯ ಸ್ಪರ್ಧೆಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. 2015ರಲ್ಲಿ ಬ್ರೆಜಿಲ್‍ನಲ್ಲಿ ನಡೆದ ಸ್ಪರ್ಧೆಯಲ್ಲಿ 1 ಮೆಡಲ್, 2017ರಲ್ಲಿ ಅಬುಧಾಬಿಯಲ್ಲಿ 1 ಕಂಚು ಮತ್ತು 1 ಮೆಡಲ್, 2019ರಲ್ಲಿ ರಷ್ಯಾದಲ್ಲಿ 1 ಮೆಡಲ್ ಮತ್ತು 2022 ರಲ್ಲಿ ಜರ್ಮನಿಯಲ್ಲಿ 2 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಈ ವರ್ಷದ ಸೆಪ್ಟಂಬರ್‍ನಲ್ಲಿ ಫ್ರಾನ್ಸ್ ನಲ್ಲಿ ನಡೆಯಲಿರುವ ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಅಡಿಟಿವ್ ಮ್ಯಾನುಫ್ಯಾಕ್ಚರಿಂಗ್, ಮೆಕಾಟ್ರಾನಿಕ್ಸ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಟೀಮ್ ಚಾಲೆಂಜ್ (ಎಂಟಿಸಿ) ವಿಭಾಗದಲ್ಲಿ ಕೌಶಲ್ಯ ಪ್ರದರ್ಶನ ನೀಡಲಿದ್ದಾರೆ.

ಘಟಕೋತ್ಸವ ಕಾರ್ಯಕ್ರಮ ಆಯೋಜಿಸುವ ಮೂಲಕ ಟಿಟಿಟಿಐ ಸಂಸ್ಥೆಯು ಭಾರತದ ನುರಿತ ಕೌಶಲ್ಯಪೂರ್ಣ ಯುವಜನೆಯನ್ನು ಪ್ರತಿನಿಧಿಸಲಿರುವ ತಮ್ಮ ಪದವೀಧರರ ಗೆಲುವನ್ನು ಸಂಭ್ರಮಿಸಿದೆ. ಅವರು ಸಾಧನೆಯು ಪ್ರತಿಭಾವಂತ ಮತ್ತು ನುರಿತ ಉದ್ಯೋಗಿಗಳನ್ನು ಬೆಳೆಸುವ, ಆ ಮೂಲಕ ರಾಷ್ಟ್ರದ ಪ್ರಗತಿ ಹಾಗೂ ಅಭಿವೃದ್ಧಿಗೆ ಕೊಡುಗೆ ನೀಡುವ ಕಂಪನಿಯ ಬದ್ಧತೆಗೆ ಪುರಾವೆಯಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು