LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಡಾ.ಶಿವರಾಜ ಗೌಡರವರಿಗೆ ಗಾಂಧಿ ನ್ಯಾಷನಲ್ ಪೀಸ್ ಅವಾರ್ಡ್ 2024ರ ಪ್ರಶಸ್ತಿ ಪ್ರದಾನ

ಬೆಂಗಳೂರು: ಬೆಂಗಳೂರು ಮಾಗಡಿರಸ್ತೆ ಮುದ್ದಿನಪಾಳ್ಯ, ಬಿಇಎಲ್ ಲೇಔಟ್‍ನಲ್ಲಿ ಶಾಂತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಭಾಂಗಣದಲ್ಲಿ ಗುಜರಾತ್ ಗಾಂಧಿನಗರ ಸಾಹಿತ್ಯ ಸೇವಾ ಸಂಸ್ಥಾನ ಚಾರಿಟಬಲ್ ಟ್ರಸ್ಟ್ ವತಿಯಿಂದ, ಕರ್ನಾಟಕ ಪ್ರಾಂತ್ಯದ ಅಧ್ಯಕ್ಷರಾದ ಡಾ.ಮಲಕ್ಕಪ್ಪ ಅಲಿಯಾಸ್ ಮಹೇಶ್‍ರವರ ನೇತೃತ್ವದಲ್ಲಿ, ಶಾಂತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಂಸ್ಥಾಪಕರಾದ ಡಾ.ಶಿವರಾಜಗೌಡರವರು ವೈದ್ಯಕೀಯ ಸೇವೆಯಲ್ಲಿ ಬಡವರಿಗಾಗಿ 500ಕ್ಕೂ ಹೆಚ್ಚು ಉಚಿತ ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ ಸಮಾಜಕ್ಕೆ ಅತ್ಯುತ್ತಮ ವೈದ್ಯಕೀಯ ಸೇವೆ ಸಲ್ಲಿಸಿರುವುದರ ಪ್ರಯುಕ್ತ ಡಾ.ಶಿವರಾಜಗೌಡರವರಿಗೆ ಗಾಂಧಿಜಯಂತಿ ಪ್ರಯುಕ್ತ, ಗಾಂಧಿ ನ್ಯಾಷನಲ್ ಪೀಸ್ ಅವಾರ್ಡ್ 2024ರ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ಚಲನಚಿತ್ರ ನಟಿ-ಕಿರುತೆರೆ ರಂಗಭೂಮಿ ಕಲಾವಿದೆ ಮೈಸೂರು ಮಾಲತಿರವರಿಗೆ ಗಾಂಧಿ ನ್ಯಾಷನಲ್ ಪೀಸ್ ಅವಾರ್ಡ್ 2024ರ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಖ್ಯಾತ ಜಾನಪದ ಗಾಯಕರು ಚಲನಚಿತ್ರ ನಟರಾದ ಗುರುರಾಜಹೊಸಕೋಟೆ ರವರಿಗೂ ಸಹ ಗಾಂಧಿ ನ್ಯಾಷನಲ್ ಪೀಸ್ ಅವಾರ್ಡ್ 2024ರ ಪ್ರಶಸ್ತಿ ಪ್ರದಾನ ಮಾಡಿದರು. ಸಮಾರಂಭದಲ್ಲಿ ಡಾ ಎಂ.ಶೃತಿ,ಚಲನಚಿತ್ರ ನಿರ್ದೇಶಕ ಪರಮಗುಬ್ಬಿ,ಸಮಾಜಸೇವಕ ಕೆ.ವಿ.ವಿಠಲ್, ರಮೇಶ್,ಮನೋಜ್‍ಗೌಡ, ಫ್ರಾಂಕ್ಲಿನ್, ಮಹಾಲಕ್ಷ್ಮಿ,ನಮ್ರತಾ,ಅಭಿಲಾಷ್,ದರ್ಶನ್,ಮನು ಸೇರಿದಂತೆ ಅನೇಕರಿದ್ದರು.
ಚಿತ್ರ:ಜಿ.ಎಲ್.ಸಂಪಂಗಿರಾಮುಲು

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು