LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಡಿ. 12 ರಿಂದ 15 ರವರೆಗೂ ಬಹು ನಿರೀಕ್ಷಿತ BPL ಕ್ರಿಕೆಟ್ ಟೂರ್ನಿ

ನಟನಾಗಿ, ಕ್ರಿಕೆಟ್ ಆಟಗಾರನಾಗಿ ಗುರುತಿಸಿಕೊಂಡಿರುವ ಮಹೇಶ್ ವಿ ಸಾರಥ್ಯದಲ್ಲಿ ಡಿಸೆಂಬರ್ 12 ರಿಂದ 15 ರವರೆಗೂ ನಾಲ್ಕು ದಿನಗಳ ಕಾಲ ನಡೆಯುವ ಈ ಕ್ರಿಕೆಟ್ ಟೂರ್ನಿಯಲ್ಲಿ ಸ್ಯಾಂಡಲ್ ವುಡ್ ನ ತಾರೆಯರು, ಸರ್ಕಾರಿ ಅಧಿಕಾರಿಗಳು, ವಕೀಲರು, ಉದ್ಯಮಿಗಳು ಹೀಗೆ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಪತ್ರಿಕಾಗೋಷ್ಠಿಯಲ್ಲಿ ನೀಡಿದರು.

ನಾನು ಹಲವು ವರ್ಷಗಳಿಂದ ರಾಜ್ ಕಪ್, ಕೆಸಿಸಿ ಕಪ್ ಸೇರಿದಂತೆ ಅನೇಕ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಆಡಿದ್ದೇನೆ. ಕ್ರಿಕೆಟ್ ನನ್ನ ನೆಚ್ಚಿನ ಕ್ರೀಡೆ. ಹಾಗಾಗಿ ಈ ಬಾರಿ ನಾನೇ ಹಲವು ಸ್ನೇಹಿತರ ಸಹಕಾರದಿಂದ BPL(ಬೆಂಗಳೂರು ಪ್ರೀಮಿಯರ್ ಲೀಗ್) ಕ್ರಿಕೆಟ್ ಪಂದ್ಯಾವಳಿಯನ್ನು ಆರಂಭಿಸುತ್ತಿದ್ದೇನೆ.
ಡಿಸೆಂಬರ್ 12 ರಿಂದ ನಾಲ್ಕು ದಿನ ರಾಜನಕುಂಟೆಯಲ್ಲಿರುವ ಸುಸ್ಸಜಿತ ಕ್ರಿಕೆಟ್ ಮೈದಾನದಲ್ಲಿ ಈ ಟೂರ್ನಿ ನಡೆಯಲಿದೆ.

ಸ್ಯಾಂಡಲ್ ವುಡ್ ತಾರೆಯರು, ಸರ್ಕಾರಿ ಅಧಿಕಾರಿಗಳು, ವಕೀಲರು, ಉದ್ಯಮಿಗಳು ಹೀಗೆ ವಿವಿಧ ಕ್ಷೇತ್ರಗಳ ಗಣ್ಯರು ಆಡಲಿದ್ದಾರೆ. ಈ ಟಿ12 ಕ್ರಿಕೆಟ್ ಪಂದ್ಯದಲ್ಲಿ ಐಸಿಸಿ ನಿಯಮಗಳು ಏನಿದೆಯೊ ಅದೇ ಇರುತ್ತದೆ. ಪವರ್ ಪ್ಲೇನಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಲಾಗಿದೆ. ಎಲ್ಲಾ ಪಂದ್ಯಗಳು ಆನಂದ್ ಆಡಿಯೋ ಸ್ಪೋರ್ಟ್ಸ್ ನಲ್ಲಿ ನೇರಪ್ರಸಾರವಾಗಲಿದೆ. ಆರು ತಂಡಗಳಿದ್ದು, ಆರು ಜನ ತಂಡದ ಮಾಲೀಕರು, ನಾಯಕರು ಹಾಗೂ ಉಪ ನಾಯಕರನ್ನು ಇಂದು ಪರಿಚಯಿಸುತ್ತಿದ್ದೇವೆ. ನಮ್ಮ ಈ ಪ್ರಯತ್ನ ನಿಮ್ಮ ಬೆಂಬಲವಿರಲಿ ಎಂದು ಮಹೇಶ್ ತಿಳಿಸಿದರು. ನಟ ರಾಹುಲ್ ಹಾಗೂ ತಂಡಗಳ ಮಾಲೀಕರು, ನಾಯಕರು ಹಾಗೂ ಉಪನಾಯಕರು BPL ಕ್ರಿಕೆಟ್ ಟೂರ್ನಿ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ತಂಡಗಳ ಪರಿಚಯ:ಜಿಎಲ್‍ಆರ್ ವಾರಿಯರ್ಸ್ ಮಾಲೀಕರು ರಾಜೇಶ್, ನಾಯಕ ಲೂಸ್ ಮಾದ ಯೋಗಿ, ಉಪ ನಾಯಕ ಶೋಭನ್ ಬಾಬು.
ಇಂಡಿಯನ್ ಅಡ್ವೊಕೆಟ್ಸ್ ಮಾಲೀಕರು ಅರವಿಂದ್ ವೆಂಕಟೇಶ್ ರೆಡ್ಡಿ. ನಕ್ಷತ್ರ ವಾರಿಯರ್ಸ್ ಮಾಲೀಕರು ನಕ್ಷತ್ರ ಮಂಜು, ನಾಯಕ ಡಾರ್ಲಿಂಗ್ ಕೃಷ್ಣ, ಉಪ ನಾಯಕ ಗಣೇಶ್.ಕೆಜಿಎಸ್ ಟಿ ಕಿಂಗ್ಸ್ ಮಾಲೀಕರು ಥೀರನ್ ಮುಖೇಶ್. ನಾಯಕರು ಸತೀಶ್. ಭಜರಂಗಿ ಬಾಯ್ಸ್ ತಂಡದ ಮಾಲೀಕರು ಸ್ವಸ್ತಿಕ್ ಆರ್ಯ, ನಾಯಕ ಸಂತೋಷ್ ಬಿಲ್ಲವ ಹಾಗೂ ಉಪ ನಾಯಕ ವ್ಯಾಸರಾಜ್. ಕೆಎಸ್‍ಪಿ SAMARYA  ತಂಡದ ಮಾಲೀಕರು ಅಭಿ ರಾಣವ್. ನಾಯಕ ಸೋಮಶೇಖರ್ ಹಾಗೂ ಉಪನಾಯಕ ಗಣೇಶ್.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು