LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಡೆಂಗ್ಯೂ ಪರೀಕ್ಷೆಗೆ ದುಬಾರಿ ಶುಲ್ಕ ವಸೂಲಿ?

ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪರೀಕ್ಷೆ ನಡೆಸಲು ಇಂತಿಷ್ಟು ಎಂದು ದರ ನಿಗಧಿಪಡಿಸಲಾಗಿತ್ತಾದರೂ ಕೆಲ ಲಾಬೋರೇಟ್‍ಗಳಲ್ಲಿ ನಿಗದಿತ ದರಕ್ಕಿಂತ ದುಪ್ಪಟ್ಟು ಅದಕ್ಕು ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಗಳು ಕೇಳಿ ಬಂದಿದೆ.

ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳ ಹೆಚ್ಚಳದೊಂದಿಗೆ ಕರ್ನಾಟಕ ಆರೋಗ್ಯ ಇಲಾಖೆಯು ಎನ್‍ಎಸ್1 ಆ್ಯಂಟಿಬಾಡಿ ಇಎಲ್‍ಐಎಸ್‍ಎ ಮತ್ತು ಐಜಿಎಂ ಆ್ಯಂಟಿಬಾಡಿ ಪರೀಕ್ಷೆಗೆ 300 ರೂ. ದರ ನಿಗದಿಪಡಿಸಿತ್ತು. ಎನ್‍ಎಸ್1 ಆ್ಯಂಟಿಬಾಡಿ, ಐಜಿಎಂ ಮತ್ತು ಐಜಿಜಿ ಆ್ಯಂಟಿಬಾಡಿಗಳ ಕ್ಷಿಪ್ರ ಪರೀಕ್ಷೆಗಳಿಗೆ 250 ರೂ. ನಿಗದಿಪಡಿಸಲಾಗಿದೆ.

ಡೆಂಗ್ಯೂಗೆ ಸಂಬಂಧಿಸಿದ ಕ್ಷಿಪ್ರ ಪರೀಕ್ಷೆಯು ಎನ್‍ಎಸ್1 ಪ್ರತಿಜನಕ, ಐಜಿಜಿ ಮತ್ತು ಐಜಿಎಂ ಆ್ಯಂಟಿಬಾಡಿಗಳನ್ನು ಪತ್ತೆ ಮಾಡುತ್ತದೆ ಮತ್ತು 1 ರಿಂದ 2 ಗಂಟೆಗಳಲ್ಲಿ ಫಲಿತಾಂಶವನ್ನು ಪಡೆಯಬಹುದಾಗಿದೆ. ಇಎಲ್‍ಐಎಸ್‍ಎ ಪರೀಕ್ಷೆಯು ಜಿಜಿಎಂ ಆ್ಯಂಟಿಬಾಡಿಗಳ ಪತ್ತೆಹಚ್ಚುವಿಕೆಯಾಗಿದ್ದು, ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ ವರದಿ ಬರಲು ಸುಮಾರು 6 ರಿಂದ 8 ಗಂಟೆಗಳು ಅಥವಾ ಹೆಚ್ಚು ಸಮಯ ಬೇಕಾಗುತ್ತದೆ.

ಬಹುತೇಕ ಕೇಂದ್ರಗಳಲ್ಲಿ ಡೆಂಗ್ಯೂ ಪರೀಕ್ಷೆಗೆ ಸಾಮಾನ್ಯವಾಗಿ 500 ರಿಂದ 1000 ರೂ. ತಗಲುತ್ತದೆ. ಇದಕ್ಕೆ ಸರ್ಕಾರ ದರಗಳನ್ನು ಮಿತಿಗೊಳಿಸಿದ ಸುಮಾರು ಒಂದು ವಾರದ ನಂತರ, ಬೆಂಗಳೂರು ನಗರದಾದ್ಯಂತ ಡಯಾಗ್ನೋಸ್ಟಿಕ್ ಕೇಂದ್ರಗಳಲ್ಲಿ ಹೆಚ್ಚಿನ ದರ ವಿಧಿಸುತ್ತಿರುವುದು ತಿಳಿದುಬಂದಿದೆ.ಶಿವಾಜಿನಗರ, ಎಲೆಕ್ಟ್ರಾನಿಕ್ ಸಿಟಿ, ಹೊರಮಾವು, ರಾಜಾಜಿನಗರ, ಜಯನಗರ, ಜೆಪಿ ನಗರ, ಕಮ್ಮನಹಳ್ಳಿ, ವೈಟ್‍ಫೀಲ್ಡ್, ಕಸ್ತೂರಿ ನಗರ, ಮತ್ತು ಆರ್‍ಆರ್‍ನಗರದಂತಹ ಪ್ರದೇಶಗಳ ಪ್ರಮುಖ ಲ್ಯಾಬ್‍ಗಳಿಗೆ ಕರೆ ಮಾಡಿದಾಗ ಹೆಚ್ಚು ದರ ವಿಧಿಸುತ್ತಿರುವುದು ತಿಳಿದುಬಂದಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಕ್ಷಿಪ್ರ ಪರೀಕ್ಷೆಗಳಿಗೆ ದರಗಳು 250 ರಿಂದ 1,500 ರೂ. ವರೆಗೆ ಮತ್ತು ಇಎಲ್‍ಐಎಸ್‍ಎ ಪರೀಕ್ಷೆ ದರವು 1,200 ರೂ. ನಿಂದ ಆರಂಭವಾಗಿ 3,000 ರೂ.ವರೆಗೆ ಶುಲ್ಕ ವಿಧಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು