LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ತಲ್ವಾರ್ ಟ್ರೈಲರ್; ತಾಯಿ ಸಾಂಗ್ ಬಿಡುಗಡೆ

ಮುಮ್ತಾಜ್ ಖ್ಯಾತಿಯ ಮುರಳಿ ಅವರ ನಿರ್ದೇಶನದ ತಲ್ವಾರ್ ಚಿತ್ರದಲ್ಲಿ ಧರ್ಮ ಕೀರ್ತಿರಾಜ್ ಆಕ್ಷನ್ ಹೀರೋ ಆಗಿದ್ದಾರೆ. ಧರ್ಮ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರ ಫೆ.7ರಂದು ತೆರೆಗೆ ಬರುತ್ತಿದೆ. ಇತ್ತೀಚೆಗೆ ಈ ಚಿತ್ರದ ಟ್ರೈಲರ್ ಹಾಗೂ ಮದರ್ ಸೆಂಟಿಮೆಂಟ್ ಸಾಂಗ್ ಬಿಡುಗಡೆ ಸಮಾರಂಭ ನಡೆಯಿತು. ವಿಶೇಷವಾಗಿ ಈ ವರ್ಷದ ಬಿಗ್ ಬಾಸ್ ಮನೆಯಲ್ಲಿ ಧರ್ಮ ಜತೆ ಭಾಗವಹಿಸಿದ್ದ ಐಶ್ವರ್ಯ ಸಿಂದೋಗಿ, ಶಿಶಿರ್, ಅವಿನಾಶ್ ಅದಿತಿ ಆಗಮಿಸಿ ಚಿತ್ರದ ಟ್ರೈಲರ್ ಮೆಚ್ಚಿಕೊಂಡು ಧರ್ಮಗೆ ಶುಭ ಕೋರಿದರು.

ಅಲ್ಲದೆ ಈ ಚಿತ್ರದಲ್ಲಿರುವ ಮದರ್ ಸೆಂಟಿಮೆಂಟ್ ಸಾಂಗನ್ನು ಎಲ್ಲಾ ತಂತ್ರಜ್ಞರ ತಾಯಂದಿರ ಕೈಲೇ ಬಿಡುಗಡೆ ಮಾಡಿಸಿದರು. ಈಗಾಗಲೆ ರಿಲೀಸಾಗಿರುವ `ಪಲ್ ಮರುಕಳಿಸಿತೋಕೋ ಅನ್ನೋ ಸಾಂಗ್ ಸಖತ್ ವೈರಲ್ ಆಗಿದೆ.ವೇದಿಕೆಯಲ್ಲಿ ಬಿಗ್ ಬಾಸ್ ಸ್ಪರ್ಧಿ ಐಶ್ವರ್ಯ ಮಾತನಾಡಿ ಟ್ರೈಲರ್ ಬ್ಯೂಟಿಫುಲ್ ಆಗಿದೆ. ಲವ್ ಸ್ಟೋರಿ, ಮದರ್ ಸೆಂಟಿಮೆಂಟ್ ಹೀಗೆ ಎಲ್ಲ ಎಮೋಷನ್ಸ್ ಇದೆ ಅನ್ಸುತ್ತೆ. ಫೆ.7ರಂದು ಈ ಚಿತ್ರ ನೋಡಲು ನಾನೂ ಸಹ ಕಾಯ್ತಿದ್ದೇನೆ ಎಂದರು. ಶಿಶಿರ್ ಮಾತನಾಡಿ ಧರ್ಮ ತುಂಬಾ ಹಾರ್ಡ್ ವರ್ಕರ್, ಮಾಸ್ ಗೆಟಪ್ ನಲ್ಲಿ ಸಖತ್ತಾಗಿ ಕಾಣಿಸ್ತಾರೆ ಎಂದರು.

ಟಚ್ ಸ್ಟೋನ್ ಪಿಕ್ಚರ್ ಬ್ಯಾನರ್ ಮೂಲಕ ಸುರೇಶ್ ಭೈರಸಂದ್ರ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿರುವ ಸುರೇಶ್ ಬೈರಸಂದ್ರ ಮೊದಲಬಾರಿಗೆ ನಿರ್ಮಾಪಕರಾಗಿದ್ದಾರೆ. ಚಿತ್ರದ ಬಗ್ಗೆ ಮಾತನಾಡುತ್ತ ಮುರಳಿ ನನ್ನಬಳಿ ಬಂದು ಈ ಕಥರ ಹೇಳಿದಾಗ ಕಥೆ ತುಂಬಾ ಇಂಪ್ರೆಸ್ ಆಯ್ತು. ಏನೋ ಇದೆ ಅನ್ನುಸ್ತು. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ತಾಯಿ ಸಾಂಗನ್ನು ಯಾರಾದರೂ ಸ್ಟಾರ್ ಕೈಲಿ ಮಾಡಿಸಬೇಕೆಂದಿತ್ತು.ಆದರೆ ಮುರಳಿ ಅವರೇ ತಾಯಂದಿರ ಕೈಲೇ ರಿಲೀಸ್ ಮಾಡಿಸಬೇಕೆಂದು ಹೇಳಿದರು. ಸಿನಿಮಾ ಫೆ.7ರಂದು ರಿಲೀಸಾಗುತ್ತಿದೆ. ನಿಮ್ಮ ಬೆಂಬಲ ಬೇಕು ಎಂದು ಹೇಳಿದರು.

ಚಿತ್ರದ ಕಥೆ, ಚಿತ್ರಕಥೆ ಬರೆದು ಆಯಕ್ಷನ್-ಕಟ್ ಹೇಳಿರುವ ಮುರಳಿ ಮಾತನಾಡುತ್ತ ಇಲ್ಲಿವರೆಗೆ ನಮ್ಮ ಚಿತ್ರದ ಔಟ್ ಪುಟ್ ಚೆನ್ನಾಗಿ ಬಂದಿದೆ. ನಿರ್ದೇಶಕನಾಗಿ ನನ್ನ ಮೂರನೇ ಪ್ರಯತ್ನ.ವಧರ್ಮ ಅವರ ಜೊತೆ ಎರಡನೇ ಸಿನಿಮಾ. ಮುಮ್ತಾಜ್ ಟೈಮಲ್ಲಿ ಧರ್ಮಗೆ ಕಣ್ಣೀರು ಹಾಕಿಸಿದ್ದೆ, ಅದಕ್ಕೇ ಈಸಲ ಆತನ ಕೈಲಿ ಲಾಂಗ್ ಕೊಟ್ಟಿದ್ದೇನೆ. ಇದು ಬರೀ ರೌಡಿಸಂ ಸಿನಿಮಾ ಅಲ್ಲ, ಸಂಬಂಧಗಳ ಸುತ್ತ ನಡೆವ ಕಥೆ, ನಾನು ಹಾಸ್ಟೆಲ್‍ನಲ್ಲಿದ್ದಾಗ ನಡೆದಂತ ನೈಜಘಟನೆ ಇಟ್ಟುಕೊಂಡು ಈ ಕಥೆ ಮಾಡಿದ್ದೇನೆ.

ಒಂದು ಲಾಂಗ್ ನಿಂದ ಎಷ್ಟೆಲ್ಲ ಸಂಸಾ ರಗಳು ಹಾಳಾಗ್ತವೆ ಅಂತ ತೋರಿಸಿದ್ದೇನೆ. ಮದರ್ ಸೆಂಟಿಮೆಂಟ್ ಸಾಂಗನ್ನು ತಾಯಂದಿರ ಕೈಲೇ ರಿಲೀಸ್ ಮಾಡಿಸಬೇಕೆನ್ನುವುದು ನನ್ನಾಸೆಯಾಗಿತ್ತು. ಅದಕ್ಕೆ ನಿರ್ಮಾಪಕರೂ ಸಾತ್ ಕೊಟ್ಟರು. ನಾಲ್ಕು ಆಯಕ್ಷನ್‍ಗಳು ಈ ಚಿತ್ರದ ಹೈಲೈಟ್. ಸಿನಿಮಾಗೆ ನಿಮ್ಮೆಲ್ಲರ  ಪ್ರೋತ್ಸಾಹ ಬೇಕು ಎಂದು ಹೇಳಿದರು.
ನಂತರ ಮಾತನಾಡಿದ ನಾಯಕನಟ ಧರ್ಮ ಕೀರ್ತಿರಾಜ್ `ಇದೊಂದು ಆಯಕ್ಷನ್ ಹಾಗೂ ಮದರ್ ಸೆಂಟಿಮೆಂಟ್ ಸಿನಿಮಾ. ದುಡ್ಡಿಗಾಗಿ ಏನನ್ನಾದರೂ ಮಾಡಲು ಸಿದ್ದವಾಗಿರೋ ಹುಡುಗನ ಪಾತ್ರ ನನ್ನದು. ಈ ಚಿತ್ರದಲ್ಲಿ ಮುರಳಿ ನನ್ನ ಗೆಟಪನ್ನು ಚೇಂಜ್ ಮಾಡಿದ್ದಾರೆ. ಮೊದಲಬಾರಿಗೆ ಲಾಂಗ್ ಹೇರ್ ಬಿಟ್ಟಿದ್ದೇನೆ. ಎಲ್ಲಾ ತಾಯಂದಿರುವಸಾಂಗ್ ರಿಲೀಸ್ ಮಾಡಿದ್ದು ಖುಷಿಯಾಯ್ತು. ಸ್ಟೇಜ್ ಮೇಲೆ ದೇವತೆಗಳನ್ನೇ ನೋಡಿದಂತಾಯ್ತು. ಚಿತ್ರ ಫೆ.7ರಂದು ಬಿಡುಗಡೆಯಾಗ್ತಿದೆ. ನೋಡಿ ಹರಸಿ ಎಂದು ಹೇಳಿದರು.

ಉಳಿದಂತೆ `ಮಜಾ ಭಾರತ' ಅವಿನಾಶ್, ಸಂಗೀತ ನಿರ್ದೇಶಕ ಪ್ರವೀಣ್ ಕೆ.ಬಿ ತಮ್ಮ ಅನುಭವ ಹಂಚಿಕೊಂಡರು. ಅಂದಹಾಗೆ ಈ ಚಿತ್ರದಲ್ಲಿ ನಾಯಕಿಯಾಗಿ ಅದಿತಿ ಅವರು ಅಭಿನಯಿಸಿದ್ದು, ಅವರಿಲ್ಲಿ ಎರಡು ಶೇಡ್ ಇರೋ ಪಾತ್ರ ಮಾಡಿದ್ದಾರೆ. ಉಳಿದ ತಾರಾಗಣದಲ್ಲಿ ಜೆಕೆ, ಅವಿನಾಶ್, ಶರತ್ ಲೋಹಿತಾಶ್ವ ಮುಂತಾದವರಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು