LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ತಳಕಿನಂತೆ ಕಂಗೊಳಿಸಿದವರು ಶ್ಯಾಮ್ ಬೆನಗಲ್...

ಅಂದಿನ ದಿನಗಳಲ್ಲಿ ಚಿತ್ರ ಜಗತ್ತನೆಡೆ ಬೆರಗು ಗಣ್ಣುಗಳಿಂದ ನೋಡುತ್ತಿದ್ದ ನಮ್ಮಂಥವರ ಎದೆಗಳಲ್ಲಿ ಒಂದು ತಳಕಿನಂತೆ ಕಂಗೊಳಿಸಿದವರು ಶ್ಯಾಮ್ ಬೆನಗಲ್...ಅಂಕುರ್, ಮಂಥನ್, ನಿಶಾಂತ್, ಭೂಮಿಕಾ...ಮುಂತಾದ ಹೊಚ್ಚ ಹೊಸ ಬಗೆಯ ಚಿತ್ರಗಳನ್ನು ಮಾಡಿ ಅಂದಿನ ಭಾರತೀಯ ಚಿತ್ರರಂಗದ ದೊಡ್ಡ ಸ್ಟಾರ್ ನಿರ್ದೇಶಕರಾದರು. ಯಾವುದೇ ಸ್ಟಾರ್ ನಟ ನಟಿಯರನ್ನು ಅವಲಂಬಿಸದೇ ತಮ್ಮ ಚಿತ್ರಗಳಲ್ಲಿ ಅಭಿನಯಿಸಿದವರೆಲ್ಲರನ್ನೂ ಸ್ಟಾರ್‍ಗಳನ್ನಾಗಿ ಮಾಡಿದರು.

ಅನಂತನಾಗ್, ಸ್ಮಿತಾ ಪಾಟೀಲ್, ಶಬಾನಾ ಆಜ್ಮಿ ಇವರೆಲ್ಲರೂ ಬೆನಗಲ್ ಅವರ ಚಿತ್ರಗಳಲ್ಲಿ ಸತತವಾಗಿ ಮುಖ್ಯ ಪಾತ್ರಗಳಲ್ಲಿ ಮಿಂಚಿದವರು.ಅನಂತನಾಗ್ ಮೊತ್ತ ಮೊದಲು ನಾಯಕ ರಾಗಿದ್ದು ಇವರ ಚಿತ್ರದಲ್ಲಿಯೇ.. ಪಲ್ಲವಿ ಚಿತ್ರಕ್ಕೆ ಪ್ರಶಸ್ತಿ ಬಂದು ನಾವು ದೆಹಲಿಗೆ ಹೋಗಿದ್ದಾಗ ಆ ಸಮಾರಂಭದಲ್ಲಿ ಅವರ ಭೇಟಿಯಾಗಿ ಅವರೇ ನನ್ನನ್ನು ಮಾತನಾಡಿಸಿದಾಗ ನನಗೆ ಆದ ಸಂತೋಷದ ನೆನಪುಗಳು ಈಗಲೂ ನನಗೆ ಉಲ್ಲಾಸ ತರುತ್ತದೆ. ಯಾರನ್ನೂ ಎಂದೂ ನನಗೆ ಪಾತ್ರ ಕೊಡಿ ಎಂದು ಕೇಳದ ನಾನು ಅವರನ್ನು ಪಾತ್ರ ಕೊಡಿ ಎಂದು ಪತ್ರ ಬರೆದು ಕೇಳಿದ್ದೆ. ಆಗ ಸುಮಾರು ಒಂದೂವರೆ ದಶಕದ ಕಾಲ ಚಿತ್ರರಂಗದಲ್ಲಿ ಅವರದೇ ಪ್ರಭೆ. ಅವರ ದಾರಿಯಲ್ಲಿ ಅನೇಕ ಹೊಸ ಹೊಸ ನಿರ್ದೇಶಕರು ಬಂದರು.

ನಂತರ ನಿಧಾನಕ್ಕೆ ಎಲ್ಲರಂತೆ ಅವರೂ ಸೈಡ್ ವಿಂಗ್‍ಗೆ ಹೋದರು ಎನಿಸುತ್ತದೆ. ಈಗ ಒಂದೆರಡು ವರ್ಷದ ಹಿಂದೆ ಅವರು ಮುಂಬಯಿಯಲ್ಲಿ ಅವರ ಆಫೀಸ್ ಕೋಣೆಯಲ್ಲಿ ಕೂತು ನಿರ್ಮಾಪಕರನ್ನು ನಿರೀಕ್ಷಿಸುತ್ತಿದ್ದ ಕುರಿತು ಯಾವುದೋ ಲೇಖನ ನೋಡಿದೆ. ಒಂದು ಬಗೆಯಲ್ಲಿ ಸಂಕಟವಾಯಿತು. ಇಂತಹ ಶ್ಯಾಮ್ ನಿಧನರಾಗಿದ್ದಾರೆ. ಅವರಿಗೆ ಗೌರವ ಪೂರ್ವಕ ಅಂತಿಮ ನಮನಗಳು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು