LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ದೊಡ್ಡಬೊಮ್ಮಸಂದ್ರದ ಶ್ರೀಚಾಮುಂಡೇಶ್ವರಿ ದೇವಿಯ ೩೩ನೇ ಜನ್ಮೋತ್ಸವ ಹಾಗೂ ಬೃಹತ್ ಉಚಿತ ಆರೋಗ್ಯ ಶಿಬಿರ

ಬೆಂಗಳೂರು ದೊಡ್ಡಬೊಮ್ಮಸಂದ್ರದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಶ್ರೀ ಚಾಮುಂಡೇಶ್ವರಿದೇವಿಯ ೩೩ನೇಜನ್ಮೋತ್ಸವ ಕಾರ್ಯಕ್ರಮ ಜುಲೈ ೨೬-೨೭ರಂದು ಲಯನ್ ಡಾ.ಬಿ.ಎಂ.ರವಿನಾಯ್ಡುರವರ ಕುಟುಂಬದ ನೇತೃತ್ವದಲ್ಲಿ ಜರುಗಲಿದೆ.

೨೬ ರಂದು ಶುಕ್ರವಾರ ಸಂಜೆ ೪ಕ್ಕೆ ವಾದ್ಯಗಳ ಸಮೇತ ಮಹಾಗಣಪತಿ ಹಾಗೂ ಮೂಲ ದೇವತೆಯ ಪೂಜೆ, ಪುಣ್ಯಾಹ, ರಕ್ಷಬಂದನ ಕಳಸ ಪ್ರತಿಷ್ಠಾಪನೆ, ಮಹಾ ಚಂಡಿಕ ಹೋಮ ಇತ್ಯಾದಿ ಪೂಜಾ ಕಾರ್ಯಕ್ರಮ ಜರುಗಲಿದೆ.೨೭ರಂದು ಶನಿವಾರ ವೇದಪಾರಾಯಣ, ಚಾಮುಂಡಿ ಹೋಮ,ಹಿರಿಯ ಮುತ್ತೈದೆಯರಿಗೆ ಬಾಗಿನ ಸೇವೆ, ಸಂಜೆ ರಾಜ ಬೀದಿಗಳಲ್ಲಿ ಶ್ರೀ ಚಾಮುಂಡೇಶ್ವರಿದೇವಿಯ ಮೆರವಣಿಗೆ ಏರ್ಪಡಿಸಿದೆ.

ಶನಿವಾರ ೨೭ರಂದು ಬೆಳಿಗ್ಗೆ ೯ ರಿಂದ ಸಂಜೆ ೪ ರವರೆಗೆ ಬೃಹತ್ ಉಚಿತ ಆರೋಗ್ಯ ಶಿಬಿರ ಏರ್ಪಡಿಸಿದ್ದು, ಸಾಮಾನ್ಯ ರೋಗ ಪರೀಕ್ಷೆ,ದಂತ-ನೇತ್ರ,ಸಕ್ಕರೆ ಕಾಯಿಲೆ,ರಕ್ತದೊತ್ತಡ ಪರೀಕ್ಷೆ ಮಾಡಿ ಉಚಿತವಾಗಿ ಔಷಧಿಗಳನ್ನು ನೀಡಲಾಗುವುದು. ಕಿಡ್ನಿ ಸಮಸ್ಯೆಗೆ ಪರಿಹಾರ ನೀಡಲಾಗುವುದು.ಈ ಬೃಹತ್ ಉಚಿತ ಆರೋಗ್ಯ ಶಿಬಿರಕ್ಕೆ ಸೇವಾಕರ್ತರಾದ ಬಿಇಎಲ್ ರಸ್ತೆಯಲ್ಲಿರುವ ಶಿರಡಿ ಸಾಯಿ ಆಸ್ಪತ್ರೆ, ನೆಲಮಂಗಲದ ಮಲ್ಲಿಗೆ ಮೆಡಿಕಲ್ಸ್ ಕೆ.ಎನ್.ಪ್ರಕಾಶ್,ಮಿಟೀಯರ್ ಮಲ್ಟಿ ಸ್ಪೆಷಾಲಿಟಿ ಡೆಂಟಲ್ ಅಂಡ್ ಪಾಲಿಟೆಕ್ನಿಕ್,ವಿದ್ಯಾರಣ್ಯಪುರ, ನಾಗರಾಜ್ ಡಯಾಗ್ನಸ್ಟಿಕ್ ಸೆಂಟರ್,ದೊಡ್ಡಬೊಮ್ಮಸಂದ್ರ, ಪ್ರಕಾಶ್ ಟಿ.ಎನ್. ಡಿಸಿ,ಔಷಧಿಗಳ ಸಹಾಯರ್ಥ, ವೈಟಲ್ಸ್ ಫಾರ್ಮಸಿಟಿಕಲ್, ಮಲ್ಲೇಶ್ವರಂ ಹಾಗೂ ತಜ್ಞ ವೈದ್ಯರುಗಳಿಂದ ಉಚಿತ ಆರೋಗ್ಯ ಶಿಬಿರ ಏರ್ಪಡಿಸಿದೆ.

ಈ ಕಾರ್ಯಕ್ರಮದಲ್ಲಿ ಡಿಸ್ಟ್ರಿಕ್ಟ್ ಜಿಎಲ್‌ಟಿ-ಕೋಆರ‍್ಡಿನೇಟರ್ ಆದ ಲಯನ್ ಆರ್.ಲೀಲಾಕೃಷ್ಣ, ಪಿಎಂಜೆಎಫ್,ಲಯನ್ ಮಂಜುಳಾ, ಲಯನ್ ಶಿಲ್ಪಾಭರತ್, ಲಯನ್ಸ್ ಅಧ್ಯಕ್ಷ ಸಂಜೀವಪ್ಪ, ಕಾರ್ಯದರ್ಶಿ ತಂಬಿರಾಜ್, ಸೇರಿದಂತೆ ಇನ್ನು ಅನೇಕ ಲಯನ್ಸ್ ಸಂಸ್ಥೆಯ ಅಧಿಕಾರಿಗಳು ಆಗಮಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಲಯನ್ ಡಾ.ಬಿ.ಎಂ.ರವಿನಾಯ್ಡು, ಪಿಎಂಜೆಎಫ್ ತಿಳಿಸಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು