LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ನಿರಂತರಂ -ಸಂಗೀತ- ನೃತ್ಯೋತ್ಸವದ `ಸಂಭ್ರಮ ಪ್ರಶಸ್ತಿ' ಪ್ರದಾನ

ಸಂಗೀತ- ನೃತ್ಯ ಕಲಾವಿದರನ್ನು ಸತತವಾಗಿ  ಪ್ರೋತ್ಸಾಹಿಸುವ ಸಲುವಾಗಿ, ತಮ್ಮ ಸಂಗೀತ ಸಂಭ್ರಮ ಸಂಸ್ಥೆಯ ಮೂಲಕ ಪ್ರತಿವರ್ಷ `ನಿರಂತರ ರಾಷ್ಟ್ರೀಯ ಸಂಗೀತ -ನೃತ್ಯೋತ್ಸವ'ವನ್ನು ಆಯೋಜಿಸುತ್ತಿರುವ ಡಾ. ಪುಸ್ತಕಂ ರಮಾ ಅವರು ಮಲ್ಲೇಶ್ವರದ ಸೇವಾಸದನದಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ ಉತ್ಸವ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ.

ನಮ್ಮ ನಾಡಿನ ಒಳ-ಹೊರಗಿನ ಅನೇಕ ಕಲಾವಿದರು ವೈವಿಧ್ಯಪೂರ್ಣ ಸಂಗೀತ-ನೃತ್ಯ ಕಾರ್ಯಕ್ರಮಗಳನ್ನು ಬಹು ಸೊಗಸಾಗಿ ಪ್ರಸ್ತುತಪಡಿಸಿ ಕಲಾರಸಿಕರ ಮನಸೂರೆಗೊಂಡರು. ವಿವಿಧ ನೃತ್ಯ ಕಲಾವಿದರುಗಳಿಂದ ಏಕವ್ಯಕ್ತಿ ನೃತ್ಯ ಸುಂದರ ಪ್ರದರ್ಶನಗಳು ನಡೆದು, ಎಂ.ಎಸ್. ನಾಟ್ಯಕ್ಷೇತ್ರದ ಗುರು ಕೌಸಲ್ಯ ನಿವಾಸ್ ಮತ್ತು ತಂಡ `ರಾಮಪ್ರಿಯ ತುಳಸೀದಾಸ' ನೃತ್ಯರೂಪಕವನ್ನು ಬಹು ಸುಮನೋಹರವಾಗಿ, ಹೃದಯಂಗಮವಾಗಿ ಅರ್ಪಿಸಿದರು. ಖ್ಯಾತ ಕೊಳಲುವಾದಕ ವಿ. ರಘುನಂದನ್ ವಿಶಿಷ್ಟ ಪರಿಕಲ್ಪನೆಯ ವಾದ್ಯ-ಗಾಯನ ಸಂಯೋಜನೆಗಳ ಮನನೀಯ ಕಾರ್ಯಕ್ರಮ ನೂತನ ಅನುಭವ ನೀಡಿದವು.

ಕಡೆಯ ದಿನ- ಸಂಗೀತ ಸಂಭ್ರಮ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಗಾಯಕಿಯರಾದ ದೀಪ್ತಿ ಶ್ರೀನಾಥ್, ಹರಿಣಿ ಶ್ರೀಧರ್ ಮುಂತಾದ ಗಾಯಕರು ದಿ. ಚಂದ್ರಿಕಾ ಅವರಿಗೆ ಭಾವಾಂಜಲಿ ಅರ್ಪಿಸಿದ ಗಾಯನ ಸಂಜೆ ಮನನೀಯವಾಗಿತ್ತು. ಅನಂತರ ಚಲನಚಿತ್ರ ನಿರ್ದೇಶಕ ನಾಗಾಭರಣ, ಲಲಿತಾ ಶ್ರೀನಿವಾಸನ್, ಆನೂರು ಅನಂತ ಕೃಷ್ಣ ಶರ್ಮ, ಎಂ.ಎಸ್. ಶೀಲಾ, ಡಾ. ಎಂ.ಆರ್.ವಿ. ಪ್ರಸಾದ್, ಡಾ. ಟಿ.ಎಸ್. ಸತ್ಯವತಿ, ನಾಗವೇಣಿ ರಂಗನ್ ಸೇರಿದಂತೆ 14 ಜನ ಸಾಧಕರಿಗೆ `ಸಂಭ್ರಮ' ಪ್ರಶಸ್ತಿಯನ್ನು ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮಿಗಳು ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಡಾ. ನಾಗಮಣಿ ಶ್ರೀನಾಥ್ ಅತಿಥಿಗಳಾಗಿ ಭಾಗವಹಿಸಿದ್ದರು. ಡಾ. ಪಿ. ರಮಾ ಉಪಸ್ಥಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು