LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ನೈಜೀರಿಯಾದ ವೈದ್ಯಕೀಯ ವಿದ್ಯಾರ್ಥಿನಿಗೆ ಹೊಸ ಬದುಕು ನೀಡಿದ ಗೆನಿಗಲ್ಸ್ ಬಿಜಿಎಸ್ ಆಸ್ಪತ್ರೆ

ಬೆಂಗಳೂರು: ಗೆನಿಗಲ್ಸ್ ಬಿಜಿಎಸ್ ಆಸ್ಪತ್ರೆ ಇತ್ತೀಚೆಗೆ ಕೈಗೆತ್ತಿಕೊಂಡ ಅತ್ಯಂತ ಸಂಕೀರ್ಣ ಪ್ರಕರಣವೊಂದರಲ್ಲಿ ನೈಜೀರಿಯಾದ 22 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಗೆ ರ್ಯಾಡಿಕಲ್ ಸ್ಕ್ಯಾಲ್ಪ್‍ಪುಲೆಕ್ಟಮಿ ಪ್ರಕ್ರಿಯೆ, ಸಿಂಕ್ರೋನಸ್ ರೇಡಿಯೋಥೆರಪಿ ಹಾಗೂ ತೊಡೆ ಚರ್ಮ ಬಳಸಿಕೊಂಡು ರೀಕನ್ಸ್‍ಟ್ರಕ್ಷನ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಬಲಭುಜದ ಕಾಂಡ್ರೊಸಾರ್ಕೋಮಾ ಕ್ಯಾನ್ಸರ್‍ಗೆ ಮೊದಲು ಚಿಕಿತ್ಸೆ ಪಡೆದಿದ್ದ ಈ ರೋಗಿಗೆ, ಅದೇ ಭಾಗದಲ್ಲಿ ಪುನಃ ಕ್ಯಾನ್ಸರ್ ಬಂದು ದೊಡ್ಡ ಸವಾಲನ್ನು ಹುಟ್ಟಿಸಿತು, ಸಂಪೂರ್ಣ ಭುಜವನ್ನು ವ್ಯಾಪಿಸಿ, ಮೂಳೆಗೆ ಹಾನಿಯಾಗಿರುವುದೂ ಕಂಡುಬಂತು. ಆದರೆ ನ್ಯೂರೋವ್ಯಾಸ್ಕ್ಯುಲಾರ್ ವ್ಯವಸ್ಥೆಗೆ ಯಾವುದೇ ಹಾನಿಯಾಗಿರಲಿಲ್ಲ. ಈ ಜಟಿಲ ಪ್ರಕರಣದಲ್ಲಿ ಅತ್ಯಾಧುನಿಕ ಆಂಕಾಲಜಿ, ರೇಡಿಯೇಷನ್ ಮತ್ತು ರೀಕನ್ಸಸ್ಟ್ರಕ್ಷನ್ ಶಸ್ತ್ರಚಿಕಿತ್ಸೆಯ ಸಂಯೋಜಿತ ಪ್ರಯತ್ನ ಅತ್ಯಗತ್ಯವಾಗಿತ್ತು.

ಡಾ. ಕಾರ್ತಿಕ್ ಕೆ. ಪ್ರಸಾದ್, ಲೀಡ್ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞ (ಲೀಡ್ ಸರ್ಜಿಕಲ್ ಆಂಕಾಲಜಿಸ್ಟ್), ಶಸ್ತ್ರಚಿಕಿತ್ಸೆಯ ನೇತೃತ್ವ ವಹಿಸಿದ್ದರು. “ರ್ಯಾಡಿಕಲ್ ಸ್ಕ್ಯಾಲ್ಪ್‍ಪುಲೆಕ್ಟಮಿ ಅಪರೂಪವಾಗಿ ನಡೆಯುವ ಪ್ರಕ್ರಿಯೆಯಾಗಿದ್ದು, ಈ ಪ್ರಕರಣದಲ್ಲಿ 1.5 ಕೆ.ಜಿ ತೂಕದ ಟ್ಯೂಮರ್ ಅನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕಾಯಿತು. ಶಸ್ತ್ರಚಿಕಿತ್ಸೆಯ ವೇಳೆ ಕಡಿಮೆ ರಕ್ತಸ್ರಾವದೊಂದಿಗೆ ನಿಖರವಾದ ತಂತ್ರಜ್ಞಾನ ಮತ್ತು  ಫ್ರೋಝನ್ ಸೆಕ್ಷನ್ ವಿಶ್ಲೇಷಣೆಯ ಮೂಲಕ ಟ್ಯೂಮರ್ ಅನ್ನು ಸಂಪೂರ್ಣ ತೆರವುಗೊಳಿಸಲಾಯಿತು” ಎಂದು ಅವರು ವಿವರಿಸಿದರು.

ಡಾ. ಆಶಿಷ್ ಶೆಟ್ಟಿ ಮತ್ತು ಡಾ. ಪೂರ್ಣಿಮ, ಅನಸ್ಥೇಷಿಯಾ ತಜ್ಞರು, ಪ್ಲಾಸ್ಟಿಕ್ ಸರ್ಜನ್ ಡಾ. ನವೀನ್ ಕುಮಾರ್ ಹೆಚ್.ಆರ್., ಡಾ. ಜತೀಂದರ್ ಅರೋರಾ, ಕ್ಲಸ್ಟರ್ ಸಿಒಒ, ಗ್ಲೆನಿಗಲ್ಸ್ ಬಿಜಿಎಸ್ ಆಸ್ಪತ್ರೆ, ಬೆಂಗಳೂರು ಗಳ ತಂಡ ಯಶಸ್ವಿ ಚಿಕಿತ್ಸೆಯಲ್ಲಿ ನೆರವೇರಿಸಿದರು.“ನನ್ನ ವಿಶಿಷ್ಟ ಅಗತ್ಯಗಳನ್ನು ಪೂರೈಸಿದ ಗ್ಲೆನಿಗಲ್ಸ್ ಬಿಜಿಎಸ್ ಆಸ್ಪತ್ರೆಗೆ ಅನಂತ ಧನ್ಯವಾದಗಳು. ವಿಶಿಷ್ಟ ಅಗತ್ಯತೆಗಳನ್ನು ಪೂರೈಸುವ ಅವರ ಪರಿಣತಿಯಿಂದಾಗಿ ನನ್ನ ಭವಿಷ್ಯದ ಕುರಿತು ಹೊಸ ಭರವಸೆ ಮೂಡಿಸಿದೆ” ರೋಗಿ ತಮ್ಮ ಕೃತಜ್ಞತೆಯನ್ನು ತಿಳಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು