LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

`ಪೃಥ್ವಿವಲ್ಲಭ ಕನ್ನರದೇವ' ಐತಿಹಾಸಿಕ ಕಾದಂಬರಿ, `ತಾಳ್ಮೆ' ಕವನ ಸಂಕಲನಗಳು ಲೋಕಾರ್ಪಣೆ

ಇದೇ 5ನೇ ಜನವರಿ 2025 ಭಾನುವಾರದಂದು ಖ್ಯಾತ ವೈದ್ಯರಾದ ಡಾ ನಾಗರಾಜ್ ದೇಶ ಪಾಂಡೆ ಅವರ "ಪೃಥ್ವಿವಲ್ಲಭ ಕನ್ನರದೇವ" ಐತಿಹಾಸಿಕ ಕಾದಂಬರಿ ಹಾಗೂ "ತಾಳ್ಮೆ" ಕವನ ಸಂಕಲನಗಳು ಲೋಕಾರ್ಪಣೆಗೊಂಡವು.ಈ ಕಾರ್ಯಕ್ರಮವು ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷರಾಗಿ ಶಾಸನ ರತ್ನಾಕರ ಎಂದೇ ಪ್ರಸಿದ್ಧರಾದ ಶ್ರೀ ದೇವರಕೊಂಡಾ ರೆಡ್ಡಿಯವರು ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ನಾಡೋಜ  ಪ್ರೊ .ಹಂ ಪಾ ನಾಗರಾಜಯ್ಯನವರು, ಗಮಕಿ ಶ್ರೀಮತಿ ಗಂಗಮ್ಮ ಕೇಶವಮೂರ್ತಿ, ಡಾ ಶ್ರೀಮತಿ ಆರತಿ ವಿ ಬಿ, ಡಾ ರಮಾನಂದ, ಶ್ರೀ ಶೇಷಾಚಲ ಹವಾಲ್ದಾರ್ ಮತ್ತು ಶ್ರೀ ಅನಂತ್ ಅವರು ಭಾಗವಹಿಸಿದ್ದರು. ಹಂ.ಪಾ.ನಾ ಇವರು ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ.

ಪುಸ್ತಕ ಲೋಕಾರ್ಪಣೆ ಸಂದರ್ಭದಲ್ಲಿ ಮಾತನಾಡಿದ ಶ್ರೀ ಹಂ ಪಾ ನಾ ಈ ಕೃತಿಯು ಯುದ್ಧಗಳ ನಿರೂಪಣೆ ಮಾತ್ರ ನೀಡುವುದಿಲ್ಲ, ನಾನಾ ರಾಜರ ಕಿರು ಪರಿಚಯ ನೀಡುತ್ತದೆ. ಈ ಕೃತಿ ಡಾ ನಾಗರಾಜ್ ದೇಶಪಾಂಡೆಯವರ ಸೃಜನ ಸಾಮರ್ಥ್ಯವನ್ನು ಬಿಂಬಿಸುತ್ತದೆ. ಈ ಕಾದಂಬರಿ ಒಮ್ಮೆ ವರದಿಯಂತೆ, ಇನ್ನೊಮ್ಮೆ ಚರಿತ್ರೆಯ ಪುಟಗಳಂತೆ, ಮತ್ತೊಮ್ಮೆ ಶಾಸನ ಪಠ್ಯದಂತೆ ಮಗದೊಮ್ಮೆ ಸಾಹಸಗಾಥೆಯಂತೆ ಓದಿಸಿಕೊಂಡು ಹೋಗುತ್ತದೆ. ಶ್ರೀ ದೇವರಕೊಂಡಾ ರೆಡ್ಡಿಯವರು ಈ ಕೃತಿ ನಮ್ಮ 9-10ನೆಯ ಶತಮಾನದ ಗತವೈಭವವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ. ಇಂತಹ ಅಪೂರ್ವ ಕೃತಿಯನ್ನು ರಚಿಸಿರುವ ಡಾ ದೇಶಪಾಂಡೆಯವರು ಶ್ಲಾಘನಾರ್ಹರು ಎಂದು ಹೇಳಿದರು.

ಈ ಕೃತಿಯಲ್ಲಿ ಸಂಸ್ಕೃತಿ, ಸಾಹಿತ್ಯ ಮತ್ತು ಕಲೆಯ ತ್ರಿವೇಣಿ ಸಂಗಮ ಜೀವ ತಳೆದಿದೆ ಎಂದು ಡಾ ರಮಾನಂದ ನುಡಿದರು. ಇಂತಹ ಪುಸ್ತಕವನ್ನು ನೀಡಿದ ಡಾ ನಾಗರಾಜ್ ದೇಶಪಾಂಡೆಯವರ ಸಾಹಿತ್ಯ ಕೃಷಿ ಹೀಗೆಯೇ ಮುಂದುವರೆಯಲಿ ಎಂದು ಆಶಿಸೋಣ.
-ಮಾಧುರಿ ಕುಲಕರ್ಣಿ

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು