LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಪ್ರೀತಿಯ ಹೊಸ ಆಯಾಮ `ಭಾವ ತೀರ ಯಾನ' ನಾಳೆ ಬಿಡುಗಡೆ ಹೊಸಬರ 'ಭಾವ ತೀರ ಯಾನ' ತೆರೆಗೆ ಎಂಟ್ರಿ

ಭಾವನೆಗಳ ಬೆಸೆದ ಸುಂದರ ಪ್ರೇಮಕಥೆಯ ಭಾವ ತೀರ ಯಾನ ಸಿನಿಮಾಗೆ ಈ ವಾರ ತೆರೆಗೆ ಬರ್ತಿದೆ. ಹೊಸ ಪ್ರತಿಭೆಗಳು ಸೇರಿ ಮಾಡಿರುವ ಚಿತ್ರಕ್ಕೆ ನಿರ್ದೇಶಕರಾದ ಮಯೂರ್ ಅಂಬೆಕಲ್ಲು ಹಾಗೂ ತೇಜಸ್ ಕಿರಣ್ ಸಾರಥಿಗಳು. ಇದೇ 21ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಭಾವ ತೀರ ಯಾನ ಬಿಡುಗಡೆಯಾಗುತ್ತಿದ್ದು, ಈ ಕುರಿತು ಚಿತ್ರತಂಡ ಸಾಕಷ್ಟು ಮಾಹಿತಿ ಹಂಚಿಕೊಂಡಿದೆ. ನಿನ್ನೆ ಬೆಂಗಳೂರಿನ ಎಸ್ ಆರ್ ವಿ ಚಿತ್ರಮಂದಿರದಲ್ಲಿ ಸುದ್ದಿಗೋಷ್ಟಿ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ನಿರ್ದೇಶಕ ಮಯೂರ್ ಅಂಬೆಕಲ್ಲು ಮಾತನಾಡಿ, ಶುಕ್ರವಾರ ಭಾವ ತೀರ ಯಾನ ಸಿನಿಮಾ ಬಿಡುಗಡೆಯಾಗುತ್ತಿದೆ. ಎರಡು ವರ್ಷಗಳ ಪ್ರಯತ್ನದ ಫಲ ಇಂದು ರಿಲೀಸ್ ವರೆಗೂ ಬಂದು ನಿಂತಿದೆ. ಇಲ್ಲಿವರೆಗೂ ಯಾರು ಮಾಡಿರದ ಪ್ರೇಮಕಥೆಯೊಂದನ್ನು ತೋರಿಸುವ ಪ್ರಯತ್ನಪಟ್ಟಿದ್ದೇವೆ. ಲವ್ ಸ್ಟೋರಿ ಅಂದಾಗ ಕಾಮನ್ ಕ್ಲೈಮ್ಯಾಕ್ಸ್ ಇರುತ್ತದೆ. ಪ್ರೀತಿಯ ಹೊಸ ಆಯಾಮವನ್ನು ಈ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದೇವೆ. ಪ್ರೀತಿ ಆಳವನ್ನು ಮನರಂಜನೆ ಜೊತೆಗ ಹೆಣೆದಿದ್ದೇವೆ. 21ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಇಡೀ ಫ್ಯಾಮಿಲಿ ಕುಳಿತು ನೋಡುವ ಸಿನಿಮಾ ಇದು ಎಂದರು,

ನಾಯಕ ತೇಜಸ್ ಕಿರಣ್ ಮಾತನಾಡಿ, 21ರಂದು ಭಾವ ತೀರ ಯಾನ ರಿಲೀಸ್ ಆಗುತ್ತಿದೆ. ಇದು ರೂಟಿನ್ ಸ್ಟೋರಿ ಅಲ್ಲ. ಇದರಲ್ಲಿ ಹೊಸ ವಿಷಯವನ್ನು ಹೇಳೋದಿಕ್ಕೆ ಹೊರಟಿದ್ದೇವೆ. ಇಬ್ಬರು ಕುಳಿತು ಸ್ಟೋರಿ ಎಣೆದು ಈ ಚಿತ್ರ ಮಾಡಿದ್ದೇವೆ. ನಿಮ್ಮ ಬೆಂಬಲ ನಮ್ಮ ಸಿನಿಮಾ ಮೇಲೆ ಇರಲಿ ಎಂದು ತಿಳಿಸಿದರು.ನಿರ್ದೇಶಕನದ ಜೊತೆಗೆ ತೇಜಸ್ ಕಿರಣ್ ನಾಯಕನಾಗಿಯೂ ಅಭಿನಯಿಸಿದ್ದು, ಆರೋಹಿ ನೈನಾ, ಅನುಷಾ ಕೃಷ್ಣ ನಾಯಕಿಯರಾಗಿ ಅಭಿನಯಿಸಿದ್ದಾರೆ. ರಮೇಶ್ ಭಟ್ ಇಲ್ಲಿಯವರೆಗೂ ಕಾಣಿಸಿದ ವಿಭಿನ್ನ ಪಾತ್ರದಲ್ಲಿ ನಟಿಸಿದ್ದು, ಚಂದನಾ ಆನಂತಕೃಷ್ಣ , ವಿದ್ಯಾಮೂರ್ತಿ ತಾರಾಬಳಗದಲ್ಲಿದ್ದಾರೆ.

ಆರೋಹ ಫಿಲಂಸ್ ಬ್ಯಾನರ್ ನಡಿ ಶೈಲೇಶ್ ಅಂಬೆಕಲ್ಲು ಹಾಗೂ ಲಕ್ಷ್ಮಣ್ ಬಿಕೆ ನಿರ್ಮಾಣ ಮಾಡಿದ್ದಾರೆ. ಶಿವಶಂಕರ್ ನೂರಂಬಡ ಛಾಯಾಗ್ರಹಣ, ಸುಪ್ರಿತ್ ಬಿಕೆ ಸಂಕಲನ, ಮಯೂರ್ ಸಂಗೀತ ನಿರ್ದೇಶನ ಭಾವ ತೀರ ಯಾನ ಸಿನಿಮಾಕ್ಕಿದೆ. ಈ ಚಿತ್ರವನ್ನು ಬ್ಲಿಂಕ್ ಸಿನಿಮಾ ನಿರ್ಮಾಪಕರಾದ ರವಿಚಂದ್ರ ವಿತರಣೆ ಮಾಡುತ್ತಿದ್ದು, ಶಾಖಾಹಾರಿ ಚಿತ್ರದ ನಿರ್ಮಾಪಕರಾದ ರಾಜೇಶ್ ಕೀಳಂಬಿ ಹಾಗೂ ರಂಜನಿ ಪ್ರಸನ್ನ ಪ್ರೆಸೆಂಟ್ ಮಾಡುತ್ತಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು