LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Hassan

ಬಣ್ಣ ಹಚ್ಚಿ ಪ್ರೇಕ್ಷಕರನ್ನು ರಂಜಿಸಿದ ಆರಕ್ಷಕರು: ಪೊಲೀಸರ ಕಲೆಗೆ ಜನರು ಫಿದಾ

ಹಾಸನದ ಹೊಳೆನರಸೀಪುರ ಪೊಲೀಸರು ಕುರುಕ್ಷೇತ್ರದ ಪೌರಾಣಿಕ ನಾಟಕವನ್ನು ಅದ್ಭುತವಾಗಿ ಪ್ರದರ್ಶಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಮೂರು ತಿಂಗಳ ತರಬೇತಿಯ ನಂತರ, ಅವರು ಈ ನಾಟಕವನ್ನು ಪ್ರದರ್ಶಿಸಿ ಜನರನ್ನು ರಂಜಿಸಿದರು. ಈ ಪ್ರದರ್ಶನವು ಪೊಲೀಸರಲ್ಲಿನ ಕಲಾತ್ಮಕ ಪ್ರತಿಭೆಯನ್ನು ಹೊರಹಾಕಿದ್ದಾರೆ ಮತ್ತು ಸಮಾಜ ಸೇವೆಗೂ ಮೀರಿ ಅವರ ಬಹುಮುಖತೆಯನ್ನು ಪ್ರದರ್ಶಿಸಿದ್ದಾರೆ. ಪೊಲೀಸರ ನೂತನ ಪ್ರಯತ್ನಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಂದಲ್ಲ ಒಂದು ಕಾರಣಕ್ಕೆ ಸದಾ ಬ್ಯುಸಿ ಆಗಿರುವ ಪೊಲೀಸರು ಬಣ್ಣ ಹಚ್ಚಿದ್ರೆ ಹೇಗಿರುತ್ತೆ, ಕಲಾವಿದರಾಗಿ ಜನರಿಗೆ ರಂಜಿಸುವುಕ್ಕೆ ಶುರುಮಾಡಿದರೆ ಜನ ಹೇಗೆ ಸ್ವೀಕರಿಸುತ್ತಾರೆ, ಇಂತಹದ್ದೇ ಒಂದು ವಿಭಿನ್ನ ಪ್ರಯತ್ನ ಮಾಡಿದ್ದಾರೆ ಹಾಸನದ ಪೊಲೀಸರು. ತಮ್ಮೆಲ್ಲಾ ಒತ್ತಡವನ್ನು ಬದಿಗಿಟ್ಟು ಎರಡು-ಮೂರು ತಿಂಗಳು ಅಭ್ಯಾಸ  ಮಾಡಿ ವೇದಿಕೆಯಲ್ಲಿ ಅದ್ಭುತವಾಗಿ ಪೌರಾಣಿಕ ನಾಟಕ ಪ್ರದರ್ಶನ ಮಾಡುವ ಮೂಲಕ ಜನರಿಂದ ಸೈ ಎನಿಸಿಕೊಂಡಿದ್ದಾರೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ಉಪವಿಭಾಗದ ಹೊಳೆನರಸೀಪುರ ವೃತ್ತದ ಪೊಲೀಸ್ ಸಿಬ್ಬಂದಿ ಕುರುಕ್ಷೇತ್ರ ನಾಟಕ ಕಲಿತು ಪ್ರದರ್ಶನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ದಶಕಗಳಿಂದಲೂ ಈ ವೃತ್ತದ ಪೊಲೀಸರು ಇಂತಹದ್ದೊಂದು ಕಲೆಯನ್ನ ಪ್ರದರ್ಶನ ಮಾಡುತ್ತಾ ಹೊಸ ಪರಂಪರೆ ಹುಟ್ಟು ಹಾಕಿದ್ದಾರೆ.

ಕೊರೊನಾ ಬಳಿಕ ನಿಂತು ಹೋಗಿದ್ದ ಈ ನಾಟಕ ಕಲೆಗೆ ಮರು ಜೀವ ನೀಡಿದ ಇಲ್ಲಿನ ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್ ಮತ್ತು ತಂಡ ಪೊಲೀಸರು ಕೂಡ ಮನಸ್ಸು ಮಾಡಿದರೆ ಜನರನ್ನ ರಂಜಿಸಬಲ್ಲರು ಎಂದು ಸಾಬೀತು ಮಾಡಿದ್ದಾರೆ. ಸ್ವತಃ ಇನ್ಸ್ಪೆಕ್ಟರ್ ಪ್ರದೀಪ್ ಕೃಷ್ಣನ ಪಾತ್ರದಲ್ಲಿ ಮಿಂಚಿದ್ದು, ಪಿಎಸ್​ಐ ರಂಗಸ್ವಾಮಿ ದುರ್ಯೋದನ, ಪೊಲೀಸ್ ಸಿಬ್ಬಂದಿ ದೇವಯ್ಯ ಅರ್ಜುನನಾಗಿ ಕಾಣಿಸಿಕೊಂಡಿದ್ದರೆ. ಭೀಮ, ಅರ್ಜುನ, ನಕುಲ ಸಹದೇವರು, ಧರ್ಮರಾಯ, ಕರ್ಣ ಪಾತ್ರದಲ್ಲಿ ಒಬ್ಬೊಬ್ಬ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ಮನೋಜ್ಞ ಅಭಿನಯಕ್ಕೆ ಕಲಾಸಕ್ತರು ಬೆರಗಾಗಿದ್ದಾರೆ.

ಗಂಟೆಗಟ್ಟಲೇ ಡೈಲಾಗ್ ಹೇಳುತ್ತಾ, ರಾಗಬದ್ದವಾಗಿ ಹಾಡು ಹಾಡಿ ನೆರೆದಿದ್ದವನರನ್ನೆಲ್ಲಾ ಇಡೀ ರಾತ್ರಿರಂಜಿಸಿದ್ದಾರೆ. ಪೊಲೀಸ್ ಎಂದ್ರೆ ಭಯ ಅಲ್ಲ, ಪೊಲೀಸ್​ ಅಂದರೆ ಭರವಸೆ, ಸಮಾಜದೊಟ್ಟಗೆ ಪೊಲೀಸ್ ಇರ್ತಾರೆ ಎನ್ನೋದನ್ನ ಸಾಬೀತು ಮಾಡಿದರೆ, ತಮ್ಮ ಸಿಬ್ಬಂದಿಗಳ ಈ ವಿಭಿನ್ನ ಪ್ರಯತ್ನಕ್ಕೆ ಸಾಥ್ ನೀಡಲು ಬಂದಿದ್ದ ದಕ್ಷಿಣ ವಲಯ ಐಜಿಪಿ ಡಾ ಬೋರಲಿಂಗಯ್ಯ ತಮ್ಮ ಅಧಿಕಾರಿ ಸಿಬ್ಬಂದಿಗಳ ಪ್ರಯತ್ನವನ್ನ ಶ್ಲಾಘಿಸಿದರು.

ಹೊಳೆನರಸೀಪುರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮಿನರಸಿಂಹ ಜಾತ್ರಾಮಹೋತ್ಸವದ ವೇಳೆ ಪೊಲೀಸರಿಂದ ನಡೆಯುತ್ತಿದ್ದ ನಾಟಕ ಪ್ರದರ್ಶನ ಒಂದು ಪರಂಪರೆಯಾಗಿ ನಡೆದುಕೊಂಡು ಬಂದಿತ್ತು. ಆದರೆ ಕಾಲಾನಂತರ ಭದ್ರತೆ ಕಾರಣದಿಂದ ಆ ಸಮಯದ ಬದಲಾಗಿ ಪ್ರತಿ ವರ್ಷ ಸಂಕ್ರಾಂತಿ ದಿನ ನಾಟಕ ಪ್ರದರ್ಶನಕ್ಕೆ ದಿನ ನಿಗದಿ ಮಾಡಲಾಗಿತ್ತು.

ಇಲ್ಲಿಗೆ ಬರುವ ವೃತ್ತ ನಿರೀಕ್ಷಕರ ಆಸಕ್ತಿಗೆ ಅನುಗುಣವಾಗಿ ಕುರುಕ್ಷೇತ್ರ ಅಥವಾ ಬೇರೆ ನೇರೆ ನಾಟಕಗಳು ನಡೆದುಕೊಂಡು ಬಂದಿವೆ, ಆದರೆ ಕೊರೊನ ಬಳಿಕ ನಾಟಕ ಪ್ರದರ್ಶನ ನಡೆದಿರಲಿಲ್ಲ, ಈ ವರ್ಷ ಸತತ ಮೂರು ತಿಂಗಳು ಪೌರಾಣಿಕ ನಾಟಕ ನಿರ್ದೇಶಕರಾದ ಮಲ್ಲತಮ್ಮನಹಳ್ಲೀಯ ಎಂ.ಪಿ. ಪದ್ಮರಾಜ್ ಅವರ ಮಾರ್ಗದರ್ಶನದಲ್ಲಿ ನಾಟಕವನ್ನ ಅಭ್ಯಾಸ ಮಾಡಿದ ಪೊಲೀಸರು, ಕೆಲ ಮಹಿಳಾ ವೃತ್ತಿಪರ ಕಲಾವಿದರ ಸಹಕಾರದಿಂದ ಕುರುಕ್ಷೇತ್ರ ನಾಟಕವನ್ನು ಅದ್ಭುತವಾಗಿ ಪ್ರಸ್ತುತಪಡಿಸಿದ್ದಾರೆ.

ಗ್ರಾಮೀಣ ಕಲೆಗಳು ತರೆಮರೆಗೆ ಸರಿಯುತ್ತಿರುವ ಈ ಕಾಲಘಟ್ಟದಲ್ಲಿ ಒಂದಿಡೀ ರಾತ್ರಿ ಜನರನ್ನ ರಂಜಿಸುವ ಪೊಲೀಸರ ಯತ್ನ ಎಲ್ಲರ ಮೆಚ್ಚುಗೆ ಗಳಿಸಿದೆ. ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಕಲಾಸಕ್ತರು ಪೊಲೀಸರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಸಿಬ್ಬಂದಿಗಳ ಪ್ರಯತ್ನಕ್ಕೆ ಸಾಕ್ಷಿಯಾದ ಹಿರಿಯ ಅಧಿಕಾರಿಗಳು ಯೂನಿಫಾರ್ಮ್ ಹಾಕಿ ಗತ್ತು ಗೈರತ್ತಿನಲ್ಲಿ ಡ್ಯೂಟಿ ಮಾಡುವ ತಮ್ಮ ಸಿಬ್ಬಂದಿಯೊಳಗಿರುವ ಕಲಾವಿದರನ್ನ ಕಂಡು ಬೆರಗಾದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು