LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಬರ್ಗೆಟ್ ಬಸ್ಯಾನಿಗೆ ಮನಸೋತ ಪ್ರೇಮಾ

'ಬರ್ಗೆಟ್ ಬಸ್ಯಾ' ಟೀಸರ್ ನೋಡಿ ಬಿದ್ದು ಬಿದ್ದು ನಕ್ಕರು 'ಓಂ' ಪ್ರೇಮಾ ಹೊಸ ಕಾಶಿನಾಥ್ ಹುಟ್ಟಿಕೊಂಡರು ಅಂತಾರೆ 'ಯಜಮಾನ' ಪ್ರೇಮಾ ಖಂಡಿತವಾಗಿಯೂ ಚಿತ್ರಮಂದಿರದಲ್ಲಿ ಸಿನಿಮಾ ನೋಡುವೆ ಎಂದರು 'ಕನಸುಗಾರ' ಪ್ರೇಮ.

ಮೊನ್ನೆಯಷ್ಟೇ ಹೊಸಬರ 'ಬರ್ಗೆಟ್ ಬಸ್ಯಾ' ಚಿತ್ರದ ಟೀಸರ್ ಮತ್ತು ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ನಟಿ ಪ್ರೇಮಾ ಮುಖ್ಯ ಅತಿಥಿಯಾಗಿ ಆಗಮಿಸಿ ನಗುತ್ತಲೇ ಎಲ್ಲರ ಗಮನ ಸೆಳೆದರು. ಅವರು ತುಣುಕುಗಳು ಬರುವ ಮುಂಚೆ, ನೋಡಿದ ನಂತರವೂ ಹಿರಿಯ ಪ್ರಸ್ ಪೋಟೋಗ್ರಾಫರ್ ಹೇಳಿದ ಮಾತಿಗೆ ಒಂದೇ ಸಮನೆ ನಕ್ಕರು. ವೇದಿಕೆ ಮೇಲೆ ಬಂದರೂ ನಗು ತಡೆಯಲಾಗದೆ ಸುಸ್ತಾದರು.

ಮೈಕ್ ತೆಗೆದುಕೊಂಡ ಪ್ರೇಮ ಮೊದಲು ಪ್ರಶ್ನೆ ಮಾಡಿದ್ದು ನಿರ್ದೇಶಕ ಮತ್ತು ನಾಯಕ ರಿಶ್ ಹಿರೇಮಠ ಅವರನ್ನು, ಈ ತರಹದ ಆಲೋಚನೆ ಹೇಗೆ ಬಂತು. ಈಗಾಗಲೇ ಉಪೇಂದ್ರ ತೋರಿಸಿದ್ದಾರೆ. ಈ ಕಾಲದಲ್ಲಿ ಒಂದು ಹುಡುಗಿರನ್ನು ನೋಡಿ ಖಿನ್ನತೆಗೆ ಹೋಗುತ್ತಾರೆ. ಅಂತಹುದರಲ್ಲಿ 55 ಹುಡುಗೀರನ್ನು ಸಂಭಾಳಿಸಿದ್ದೀರಾ ಅಂದರೆ ನಿಜಕ್ಕೂ ಮೆಚ್ಚುವಂತದ್ದು. ನಾನು ಎಷ್ಟೋ ಇಂತಹ ಕಾರ್ಯಕ್ರಮಗಳಿಗೆ ಹೋಗಿದ್ದೇನೆ. ಆದರೆ ಇದು ವಿಭಿನ್ನವಾಗಿದೆ. ಕೂತಿದ್ದಾಗಲೇ ಕಾಶಿನಾಥ್ ಪ್ರತಿರೂಪ ಅಂತ ಹೇಳಿದೆ.

ಬಾ.ಮ.ಹರೀಶ್ ಸಹ ಅದನ್ನೆ ಧ್ವನಿಗೂಡಿಸಿದರು. ಒಂದು ಕಾಮಿಡಿ ಮಾಡಿ ನಗಿಸುವುದು ಅಂದರೆ ಅಷ್ಟು ಸುಲಭವಲ್ಲ. ಅದು ಸ್ವಾಭಾವಿಕವಾಗಿಬೇಕು. ನಾನು ನೋಡಿ ಅಷ್ಟು ನಕ್ಕಿದ್ದೀನಿ ಅಂದರೆ, ಸಿನಿಮಾ ಹೇಗಿರಬಹುದು ಎಂಬ ಕುತೂಹಲ ಬಂದಿದೆ. ನಾನಂತೂ ಸಿನಿಮಾ ನೋಡುತ್ತೇನೆ. ಇಂತಹ ಪ್ರತಿಭೆಗಳು ಹೊರಬರಬೇಕು. ಕೆಲವರಿಗೆ ನಿರ್ದೇಶನ, ನಟನೆ ಮಾಡುವಾಗ ಭಯ ಇರುತ್ತದೆ. ನಿಮಗೆ ಅದೆಲ್ಲ ವು ತೆರೆ ಮೇಲೆ ಕಾಣಿಸಿಲ್ಲ. ನಿಮ್ಮ ಪರಿಕಲ್ಪನೆ ಚೆನ್ನಾಗಿದೆ. ಒಳ್ಳೆಯದಾಗಲಿ ಎಂದರು. ಯರಂರೆಡ್ಡಿ ಪಿಕ್ಚರ್ಸ್ ಸಂಸ್ಥೆ ಅಡಿಯಲ್ಲಿ ಬಳ್ಳಾರಿಯ ವೈ.ನಾಗಾರ್ಜುನರೆಡ್ಡಿ ಬಂಡವಾಳ ಹೂಡಿದ್ದಾರೆ. ಮಲ್ಲಿಕಾರ್ಜುನ್.ಕೆ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. 'ಕಂಡ್ ಕಂಡ್ ಹುಡ್ಗ ಹುಡ್ಡಿರ್ಗೆಲ್ಲ ...' ಎಂಬ ಅಡಿಬರಹವಿದೆ.

ರಿಶ್ ಹಿರೇಮಠ ನಿರ್ದೇಶನ ಮಾಡುವ ಜತೆಗೆ ನಾಯಕನಾಗಿ ಅಭಿನಯಿಸಿದ್ದಾರೆ. ಇವರು ಹೇಳುವಂತೆ ನೀವುಗಳು ನೋಡಿದಂತ ಸೀನ್‍ಗಳು ನಿಜ ಜೀವನದಲ್ಲಿ ನಡೆಯುತ್ತಿದೆ. ನಿಮ್ಮೊಳಗಡೆ ಇನ್ನೊಬ್ಬ ಪಾತ್ರಧಾರಿ ಇರುತ್ತಾನೆ. ಹುಡುಗಿರನ್ನು ನೋಡಿದಾಗ ಪಾತ್ರದಿಂದ ಹೊರಗೆ ಬರುತ್ತಾನೆ. ಇದು ಆರಂಭ ಅಷ್ಟೇ. ಅಂತ್ಯ ನೀವೇ ನೋಡುತ್ತಿರಾ. ಮುಂದೆ ಬರ್ಗೆಟ್ ಬಸ್ಯಾ ಪಾರ್ಟ್-2 ಬರುತ್ತೆ ಎಂದು ಹೇಳುವಾಗ ಪ್ರೇಮ ಅವರನ್ನೇ ನೋಡುತ್ತಾ ನಗುತ್ತಲೇ ಇದ್ದರು. ಸುಂದರ ವಾತಾವರಣದಲ್ಲಿ ಬಾ.ಮ.ಹರೀಶ್, ಬಾ.ಮ.ಗಿರೀಶ್, ಗಿಲ್ಲಿನಟ ಮುಂತಾದವರು ಉಪಸ್ತಿತರಿದ್ದರು. ಚಿತ್ರೀಕರಣವು ಬೆಂಗಳೂರು, ತೀರ್ಥಹಳ್ಳಿ, ಕೊಪ್ಪ ನಡೆಸಿ, ಬೆನಗನಹಳ್ಳಿಯ ಸುಂದರ ತಾಣದಲ್ಲಿ ನಡೆದಿದೆ. ಪ್ರಕಾಶ್.ಜಿ ಸಾಹಿತ್ಯಕ್ಕೆ ಸಿದ್ದಾರ್ಥ್ ಕಾಮತ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಶಾಮ್‍ಸಾಲ್ವಿನ್, ಸಂಕಲನ ಸಿದ್ದು ದಳವಾಯಿ ಅವರದಾಗಿದೆ. ಚಿತ್ರವನ್ನು ಸದ್ಯದಲ್ಲೇ ತೆರೆಗೆ ತರಲು ತಂಡವು ಯೋಜನೆ ರೂಪಿಸಿಕೊಂಡಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು