LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

`ಬೇಲ್’ ಚಿತ್ರದ ಅಧಿಕೃತ ಟ್ರೈಲರ್ ಬಿಡುಗಡೆ


ಬೆಂಗಳೂರು: ಹ್ಯಾಟ್ರಿಕ್ ಹೀರೋ ಡಾ. ಶಿವರಾಜಕುಮಾರ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಬಹುನಿರೀಕ್ಷಿತ ಆಕ್ಷನ್ ಡ್ರಾಮಾ `ಬೇಲ್’ ಚಿತ್ರದ ಅಧಿಕೃತ ಟ್ರೆöÊಲರ್ ಅಂತಿಮವಾಗಿ ಬಿಡುಗಡೆಯಾಗಿದೆ. ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಈ ಸಿನಿಮಾದ ಟ್ರೇಲರ್‌ನಲ್ಲಿ ಪೋಲಿಸ್ ಆಕ್ಷನ್, ನ್ಯಾಯದ ಹೋರಾಟ, ರೋಚಕ ಸಂಘರ್ಷ ಮತ್ತು ತೀವ್ರ ಭಾವನಾತ್ಮಕ ಮುಖಾಮುಖಿಗಳ ಝಲಕ್ ಅನ್ನು ಸಿನಿಪ್ರಿಯರ ಮುಂದಿಟ್ಟಿದೆ. ಟ್ರೈಲರ್ ಮೂಲಕವೇ ಹೈ-ವೋಲ್ಟೇಜ್ ಸಿನಿಮಾ ಅನುಭವದ ಭರವಸೆ ಮೂಡಿಸಿರುವ ಈ ಚಿತ್ರವು ಗಾಂಧಿ ಜಯಂತಿಯ ಪ್ರಯುಕ್ತ ಅಕ್ಟೋಬರ್ 2 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅಬ್ಬರಿಸಲು ಸಜ್ಜಾಗಿದೆ.ಶಿವರಾಜಕುಮಾರ್ ಅವರ ಗಂಭೀರ ಸ್ಕಿçÃನ್ ಪ್ರೆಸೆನ್ಸ್, ಅಬ್ಬರದ ಪೋಲಿಸ್ ಅವತಾರ ಹಾಗೂ ರೋಮಾಂಚಕ ದೃಶ್ಯ ವೈಭವದಿಂದಾಗಿ ಟ್ರೆöÊಲರ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಆನ್‌ಲೈನ್‌ನಲ್ಲಿ ಭಾರೀ ಸದ್ದು ಮಾಡಿದ್ದು, ಸಿನಿಪ್ರಿಯರಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ಮುಗಿಲೆತ್ತರಕ್ಕೆ ಕೊಂಡೊಯ್ದಿದೆ.ಚಿತ್ರದಲ್ಲಿ ಶಿವರಾಜಕುಮಾರ್ ದೃಢನಿಶ್ಚಯದ, ಕಟ್ಟುನಿಟ್ಟಿನ ಹಾಗೂ ನಿರ್ಭೀತ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಅಪರಾಧ ಮತ್ತು ನ್ಯಾಯದ ನಡುವಿನ ಜಟಿಲ ಜಗತ್ತಿನಲ್ಲಿ ಎದುರಾಗುವ ಯಾವುದೇ ಆಪತ್ತಿಗೂ ಅಂಜದೆ ಧೈರ್ಯವಾಗಿ ನಿಲ್ಲುವ ಖಡಕ್ ಅಧಿಕಾರಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. ಕೇವಲ ಪೋಲಿಸ್ ವರ್ಸಸ್ ಕ್ರಿಮಿನಲ್ ನಡುವಿನ ಕಥೆಯಾಗಷ್ಟೇ ಉಳಿಯದೆ, ಕೌಟುಂಬಿಕ ಭಾವನಾತ್ಮಕ ತಿರುಳನ್ನು ಹೊಂದಿರುವುದು ‘ಬೇಲ್’ ಚಿತ್ರದ ಮತ್ತೊಂದು ಪ್ರಮುಖ ಹೈಲೈಟ್. ಈ ಚಿತ್ರವನ್ನು ಎಲ್ಲಾ ವರ್ಗದ ಪ್ರೇಕ್ಷಕರಿಗೂ ಹತ್ತಿರವಾಗಿಸುವ ಲಕ್ಷಣಗಳನ್ನು ತೋರುತ್ತಿದೆ. ಯಶಸ್ವಿ ನಿರ್ದೇಶಕ ಪವನ್ ಒಡೆಯರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ದಕ್ಷಿಣ ಭಾರತದ ಬೃಹತ್ ವೆಚ್ಚದ ಸಿನಿಮಾಗಳ ಮೂಲಕ ಗಮನಸೆಳೆದಿರುವ ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಅವರು ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ.  ಚಿತ್ರದ ತಾರಾಗಣದಲ್ಲಿ ಬಹುದೊಡ್ಡ ಪ್ರತಿಭೆಗಳ ದಂಡೇ ಇದೆ. ಶಿವರಾಜಕುಮಾರ್ ಅವರಿಗೆ ಸಾಥ್ ನೀಡಲು ಡೈಲಾಗ್ ಕಿಂಗ್ ಸಾಯಿಕುಮಾರ್, ಬಹುಭಾಷಾ ನಟ ಜಯರಾಮ್, ಲೂಸ್ ಮಾದ ಯೋಗೇಶ್, ದೀಕ್ಷಿತ್ ಶೆಟ್ಟಿ ಹಾಗೂ ನಟಿ ಸಂಜನಾ ಆನಂದ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರತಿಯೊಂದು ಪಾತ್ರಕ್ಕೂ ಕಥೆಯಲ್ಲಿ ಸಮಾನ ತೂಕವಿದ್ದು, ಪಾತ್ರಗಳ ನಡುವಿನ ಸಂಘರ್ಷದ ಸಣ್ಣ ತುಣುಕುಗಳು ಟ್ರೆöÊಲರ್‌ನ ವೇಗ ಮತ್ತು ರೋಚಕತೆಯನ್ನು ಹೆಚ್ಚಿಸಿವೆ. ಸುಮಾರು ಎರಡೂವರೆ ನಿಮಿಷಗಳ ಈ ಟ್ರೈಲರ್ಗೆ ಚುರುಕಾದ ಸಂಕಲನ, ಪವರ್‌ಫುಲ್ ಸಂಭಾಷಣೆಗಳು ಮತ್ತು ಖ್ಯಾತ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ಜೀವ ತುಂಬಿದೆ. ಖ್ಯಾತ ಸರೇಗಮ ಸೌತ್ ಸಂಸ್ಥೆಯು ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದ್ದು, ದೊಡ್ಡ ಮಟ್ಟದ ಪ್ರಚಾರ ಅಭಿಯಾನಕ್ಕೆ ಕೈಜೋಡಿಸಿದೆ. ಒಟ್ಟಾರೆಯಾಗಿ, ಶಿವಣ್ಣನ ಖಡಕ್ ಖಾಕಿ ಅವತಾರ ಹಾಗೂ ಭರ್ಜರಿ ಮಾಸ್-ಎಮೋಷನಲ್ ಡ್ರಾಮಾವನ್ನು ಹೊತ್ತು ತರುತ್ತಿರುವ ‘ಬೇಲ್’ ಅಕ್ಟೋಬರ್ 2 ರಂದು ಬೆಳ್ಳಿತೆರೆಗೆ ಬರಲು ಸಂಪೂರ್ಣ ಸಜ್ಜಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST