LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

`ಬಾಲ್ಯ ವಿವಾಹ ಮುಕ್ತ ಭಾರತ’ ಅಭಿಯಾನಕ್ಕೆ ಬೆಂಬಲ'

ಬೆಂಗಳೂರು: ಭಾರತ ಸರ್ಕಾರದ `ಬಾಲ್ಯ ವಿವಾಹ ಮುಕ್ತ ಭಾರತ’ ಅಭಿಯಾನಕ್ಕೆ ಅಪಾರವಾದ ಬೆಂಬಲವನ್ನು ವಿಸ್ತರಿಸುತ್ತಾ, ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್(JRC) ಒಕ್ಕೂಟದ ಮೂಲಕ ಆಯೋಜಿಸಲಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕರ್ನಾಟಕಾದ್ಯಂತದ ಸಾವಿರಾರು ಜನರು ರಸ್ತೆಗಳಲ್ಲಿ, ಶಾಲೆಗಳು, ಬೀದಿಗಳು ಮತ್ತು ಮಾರುಕಟ್ಟೆಯಲ್ಲಿ ಜಮೆಯಾದರು. ಒಂಬತ್ತು ಜಿಲ್ಲೆಗಳ 450 ಹಳ್ಳಿಗಳು ಬಾಲ್ಯ ವಿವಾಹ ವಿರುದ್ಧ ಜಾಗೃತಿ ಕಾರ್ಯಕ್ರಮಗಳು, ಮೇಣದಬತ್ತಿ ಮೆರವಣಿಗೆ ಮತ್ತು ಬೀದಿ ನಾಟಕಗಳಿಗೆ ಸಾಕ್ಷಿಯಾದರು.

ಒಂದು ಸಾಮಾಜಿಕ ಕಾರಣಕ್ಕಾಗಿ ಒಗ್ಗಟ್ಟಿನ ಅಭೂತಪೂರ್ವ ಪ್ರದರ್ಶನದಲ್ಲಿ ಪೊಲೀಸ್ ಸ್ಟೇಷನ್‍ಗಳು, ನ್ಯಾಯಾಲಯ ಕೊಠಡಿಗಳು, ಪಂಚಾಯ್ತಿ ಸದಸ್ಯರು, ಧರ್ಮ ಗುರುಗಳು, ಶಾಲಾ ಮಕ್ಕಳು, ಶಿಕ್ಷಕರು, ಮಕ್ಕಳು ಮತ್ತು ಬಾಲ್ಯ ವಿವಾಹದ ಸಂತ್ರಸ್ತೆಯರು ಬಾಲ್ಯ ವಿವಾಹವನ್ನು ನಿಲ್ಲಿಸಲು ಮತ್ತು ಅದರ ವಿರುದ್ಧ ದೂರು ನೀಡಲು ಪ್ರತಿಜ್ಞೆಗಳನ್ನು ಮಾಡಿದರು.

ದೇಶದ 400 ಜಿಲ್ಲೆಗಳಲ್ಲಿನ 250ಕ್ಕೂ ಅಧಿಕ ಓಉಔ ಪಾಲುದಾರರನ್ನು ಒಳಗೊಂಡ ಎಖಅ ಒಕ್ಕೂಟವು ಬಾಲ್ಯ ವಿವಾಹವನ್ನು ನಿರ್ಮೂಲನೆ ಮಾಡಲು ಕರ್ನಾಟಕದ ರಾಜ್ಯ ಸರ್ಕಾರ ಮತ್ತು ಅಲ್ಲಿನ ಒಂಬತ್ತು ಜಿಲ್ಲೆಗಳಲ್ಲಿನ ಸ್ಥಳೀಯ ಆಡಳಿತಾಧಿಕಾರಿಗಳೊಂದಿಗೆ ಕಾರ್ಯನಿರ್ವಹಿಸುತ್ತದೆ. ಎಖಅ ತನ್ನ ಮನವೊಲಿಸುವ ತಂತ್ರ ಮತ್ತು ಕಾನೂನು ಮಧ್ಯಸ್ಥಿಕೆಗಳ ಮೂಲಕ 2023-24ರಲ್ಲಿ ಭಾರತಾದ್ಯಂತ 2,50,000ಕ್ಕೂ ಅಧಿಕ ಬಾಲ್ಯ ವಿವಾಹಗಳನ್ನು ತಡೆಗಟ್ಟಿದೆ.

ಎಖಅ ಸಂಸ್ಥಾಪಕರಾದ ಭುವನ್ ರಿಭು ಮಾತನಾಡಿ, ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ ಒಕ್ಕೂಟದ 250 ಕ್ಕೂ ಹೆಚ್ಚು ಓಉಔಗಳಲ್ಲಿ ನನ್ನ ಸಹೋ
ದ್ಯೋಗಿಗಳ ದಣಿವರಿಯದ ಪ್ರಯತ್ನಗಳ ಜೊತೆಗೆ ಲಕ್ಷಾಂತರ ಹುಡುಗಿಯರು ಮತ್ತು ತಾಯಂದಿರ ನೋವು ಮತ್ತು ಸಹಿಷ್ಣುತೆಯು ನಮಗೆ ಈ ಐತಿಹಾಸಿಕ ಕ್ಷಣವನ್ನು ತಂದಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಭಾಗದ ಕೇಂದ್ರ ಸಚಿವೆ, ಅನ್ನಪೂರ್ಣ ದೇವಿ ಅವರು ಬಾಲ್ಯ ವಿವಾಹ ಕೊನೆಗೊಳಿಸಲು ಪ್ರತಿಜ್ಞೆ ಮಾಡುವಂತೆ ತನ್ನ ನಾಗರೀಕರಲ್ಲಿ ಮನವಿ ಮಾಡುತ್ತಾ ನವದೆಹಲಿಯ ವಿಜ್ಞಾನ ಭವನದಲ್ಲಿ ನವೆಂಬರ್ 27ರಂದು ‘ಬಾಲ್ಯ ವಿವಾಹ ಮುಕ್ತ ಭಾರತ’ ಅಭಿಯಾನವನ್ನು ಆರಂಭಿಸಿದರು. ಇದೇ ಸಮಯದಲ್ಲಿ ಬಾಲ್ಯ ವಿವಾಹದ ದೂರುಗಳನ್ನು ದಾಖಲಿಸಲು ಒಂದು ರಾಷ್ಟ್ರೀಯ ಪೋರ್ಟಲ್ ಅನ್ನು ಬಿಡುಗಡೆ ಮಾಡಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು