LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Politics News

ಬಿಎಸ್‍ವೈ, ಬೊಮ್ಮಾಯಿಗೆ ಮುಜುಗರ ಮಾಡಲು ಯತ್ನಾಳ್ ಹೋರಾಟ

ಬೆಂಗಳೂರು: ಬಿಜೆಪಿ ಅಧಿಕಾರ ಅವಧಿಯಲ್ಲಿ 2,900 ಎಕರೆಗೆ ವಕ್ಫ್ ನೋಟಿಸ್ ಜಾರಿಯಾಗಿದೆ. ಇದು ಯಡಿಯೂರಪ್ಪ, ಬೊಮ್ಮಾಯಿ ಕಾಲದಲ್ಲಿ ಆಗಿತ್ತು. ಅದಕ್ಕಾಗಿ ಶಾಸಕ ಯತ್ನಾಳ್ ಅವರು ಬಿಜೆಪಿ ಹಾಗೂ ಯಡಿಯೂರಪ್ಪ, ಬೊಮ್ಮಾಯಿಗೆ ಮುಜುಗರ ಉಂಟುಮಾಡಲು ಹೋರಾಟಕ್ಕೆ ಹೊರಟಿದ್ದಾರೆ ಎಂದು ಗೃಹಸಚಿವ ಜಿ. ಪರಮೇಶ್ವರ್ ಕುಟುಕಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಅವಧಿಯಲ್ಲಿ ಹೆಚ್ಚು ವಕ್ಫ್ ನೊಟೀಸ್ ಕೊಟ್ಟಿರುವ ವಿಚಾರ ಹಾಗೂ ವಕ್ಫ್ ವಿರೋಧಿಸಿ ಬಿಜೆಪಿ ರೆಬಲ್ಸ್ ಟೀಂ ಹೋರಾಟಕ್ಕೆ ಪ್ರತಿಕ್ರಿಯಿಸಿದರು. ಜಾಸ್ತಿ ದಿನ ಸತ್ಯ ಮುಚ್ಚಿಡಲು ಆಗಲ್ಲ. ಬಿಜೆಪಿಯವರು ನಮ್ಮ ಮೇಲೆ ನೊಟೀಸ್ ಕೊಟ್ಟಿರೋ ಬಗ್ಗೆ ಆರೋಪ ಮಾಡ್ತಿದ್ರು. ಇವರು ಅಧಿಕಾರದಲ್ಲಿ ಇದ್ದಾಗ ಏನು ಮಾಡಿದ್ರು? ಕುಮಾರ್ ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿ ವಕ್ಫ್ ನೊಟೀಸ್ ಜಾರಿ ಮಾಡಿದ್ದಾರೆ.

ಈ ಸಮಿತಿ 2,900 ಎಕರೆಗೆ ನೊಟೀಸ್ ಜಾರಿ ಮಾಡಿದೆ. ಸಿದ್ದರಾಮಯ್ಯ ಅವಧಿಯಲ್ಲಿ 300 ಎಕರೆಗೆ ನೊಟೀಸ್ ಜಾರಿ ಆಗಿದೆ. ಯಾರ ಅವಧಿಯಲ್ಲಿ ನೊಟೀಸ್ ಜಾಸ್ತಿ ಜಾರಿ ಮಾಡಿದ್ದಾರೆ ಅಂತ ಗೊತ್ತಾಯ್ತಲ್ಲ.ನಾವು ಯಾರ ಮೇಲೆ ಆರೋಪ ಮಾಡಬೇಕು? ಈಗ ಬಿಜೆಪಿಯವರು ವಕ್ಫ್ ವಿಚಾರದಲ್ಲಿ ರಾಜ್ಯ ಪ್ರವಾಸ ಮಾಡಲು ಹೊರಟಿದ್ದಾರಲ್ಲ, ಇದು ಮೊದಲು ಅವರಿಗೆ ಅರ್ಥ ಆಗಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

ಬಹುಶಃ ಯತ್ನಾಳ್ ಟೀಮ್ ಹೊರಟಿರೋದು ಬಿಜೆಪಿಯವರಿಗೆ ಮುಖಭಂಗ ಮಾಡೋದಕ್ಕೆ. ಬಿಜೆಪಿಯವರು ಹೆಚ್ಚು ನೊಟೀಸ್ ಕೊಟ್ಟಿದ್ದಾರೆ ಎಂದು ಗೊತ್ತಾದ ಮೇಲೂ ಇವರು ಪ್ರವಾಸ ಹೊರಟಿದ್ದಾರೆ ಅಂದ್ರೆ, ಬಿಜೆಪಿಯವರಿಗೆ ಮುಜುಗರ ಮಾಡಲು ಹೊರಟಿದ್ದಾರೆ ಅಂತ ನನಗನ್ನಿಸುತ್ತೆ. ಇಲ್ಲ ಅಂದ್ರೆ ಯಾಕ್ ಹೋಗ್ತಾರೆ ಅವರು? ಬಿಜೆಪಿ ಕಾಲದಲ್ಲೇ ಹೆಚ್ಚು ವಕ್ಫ್ ನೊಟೀಸ್ ಕೊಟ್ಟಿದ್ದಾರಲ್ಲ, ಅದನ್ನೆಲ್ಲ ಎಕ್ಸ್‍ಪೋಸ್ ಮಾಡಲು ಯತ್ನಾಳ್ ಹೋಗ್ತಿದ್ದಾರೆ ಅಂತ ಅರ್ಥ.

ಯಡಿಯೂರಪ್ಪ, ಬೊಮ್ಮಾಯಿ ಕಾಲದಲ್ಲಿ ಆಗಿತ್ತು ಅಂತ ಇದೆಯಲ್ಲ, ಆದ್ದರಿಂದ ಅವರಿಬ್ಬರನ್ನೂ ಎಕ್ಸ್‍ಪೋಸ್ ಮಾಡಲು ಹೊರಟಿದ್ದಾರೆ ಅನಿಸುತ್ತೆ. ಹಿಂದೆ ಬಿಜೆಪಿ ವಕ್ಫ್ ನೊಟೀಸ್ ಕೊಟ್ಟಿದ್ದು ನಮ್ಮ ಗಮನಕ್ಕೆ ಬಂದಿರಲಿಲ್ಲ ಆ ಸಂಧರ್ಭದಲ್ಲಿ. ಅದನ್ನ ನಾವು ಇಶ್ಯೂ ಆಗಿ ತೆಗೆದುಕೊಂಡಿರಲಿಲ್ಲ. ಈಗ ಎಚ್ಚರಿಕೆ ವಹಿಸಿಕೊಂಡು ಕೆಲಸ ಮಾಡ್ತೀವಿ ಎಂದು ಹೇಳಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು