LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Chikmagalur

ಬೈಕ್​ನ್ನ 60 ಮೀಟರ್ ಎಳೆದೊಯ್ದ ಕಾರು: ಭೀಕರ ರಸ್ತೆ ಅಪಘಾತ 

ಚಿಕ್ಕಮಗಳೂರು: ನಗರದ ಬೈಪಾಸ್ ಸಮೀಪದ ಕುರುವಂಗಿ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾರಿಗೆ ಸಿಲುಕಿದ ಬೈಕ್​ನ್ನ 60 ಮೀಟರ್ ಎಳೆದೊಯ್ದಿದ್ದು, ಕಾರು ಉಜ್ಜಿಕೊಂಡು ಹೋಗುವ ರಭಸಕ್ಕೆ ಬೆಂಕಿಯ ಕಿಡಿ ಹಾರಿದೆ. ಇನ್ನು ಬೈಕ್ ಸವಾರರ ರಾಜಶೇಖರ್​ಗೆ ಗಂಭೀರ ಗಾಯಗಳಾಗಿವೆ. ರಾಜಶೇಖರ್ ಕೆಲಸ ಮುಗಿಸಿ ಮನಗೆ ಹೋಗುವಾಗ ಈ ಅಪಘಾತ ಸಂಭವಿಸಿದ್ದು, ಜೆನ್ ಕಾರು ಚಾಲಕ ನಿಲ್ಲಿಸದೇ ಫಾಸ್ಟ್ ಆಗಿ ಹೋಗಿದ್ದಾನೆ. ಇನ್ನು ಈ ದೃಶ್ಯ ಸಿಟಿ ಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ನೋಡಿದರೆ ಎದೆ ಝಲ್​ ಎನ್ನುತ್ತೆ. ಬೈಕ್ ಸವಾರ ರಾಜಶೇಖರ್​ ಸೊಂಟದ ಮೂಳೆ ಮುರಿದಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಚಿಕ್ಕಮಗಳೂರು ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ‌ದಾಖಲಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST