LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Chikkaballapura

ಭಜನೆ, ಹಾಡು, ಕೋಲಾಟ, ದೇವರ ನಾಮದ ಸ್ತುತಿಗಳು, ಪಾಶ್ಚಾತ್ಯ ನಾಗರೀಕತೆಯ ದಾಳಿಗೆ ಸಿಕ್ಕಿ ಕಣ್ಮರೆಯಾಗುತ್ತಿರುವುದು ನೋವಿನ ಸಂಗತಿ

ಚಿಕ್ಕಬಳ್ಳಾಪುರ: ನಮ್ಮ ಪೂರ್ವಿಕರು ಬದುಕಿನ ಭಾಗವಾಗಿ ರೂಢಿಸಿ ಕೊಂಡು ಬಂದಿದ್ದ ಭಜನೆ, ಹಾಡು,ಕೋಲಾಟ, ದೇವರ ನಾಮದ ಸ್ತುತಿಗಳು, ಪಾಶ್ಚಾತ್ಯ ನಾಗರೀಕತೆಯ ದಾಳಿಗೆ ಸಿಕ್ಕಿ ಕಣ್ಮರೆಯಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಆದರೆಚುಂಚಶ್ರೀ ಪ್ರತಿಷ್ಠಾನದ ಚಿಕ್ಕಬಳ್ಳಾಪುರ ಜಿಲ್ಲೆಯಪದಾಧಿಕಾರಿಗಳು ಸಾಂಸ್ಕೃತಿಕ ಸುಗ್ಗಿಯ ಮೂಲಕ ಇವುಗಳಿಗೆ ಮರುಜೀವ ಕೊಡುತ್ತಿರುವುದು ಸಂತೋಷದ ತಂದಿದ್ದು ಇವರಿಗೆ ಭೈರವೇಶ್ವರ ಒಳಿತು ಮಾಡಲಿ ದು ಆದಿಚುಂಚನಗಿರಿ ಶಾಖಾ ಮಠದ ಶ್ರೀಮಂಗಳನಾಥಸ್ವಾಮೀಜಿ ತಿಳಿಸಿದರು.

ನಗರ ಹೊರವಲಯ ಎಸ್‍ಜೆ ಸಿಐಟಿ ಸಿವಿಲ್ ಇಂಜನಿಯರಿಂಗ್ ವಿಭಾಗದ ಸಭಾಂಗಣದಲ್ಲಿ ಸೋಮ ವಾರ ಚುಂಚಶ್ರೀ ಪ್ರತಿಷ್ಠಾನ ಚಿಕ್ಕಬಳ್ಳಾಪುರದ ವತಿಯಿಂದ ಏರ್ಪಡಿಸಿದ್ದ ಸಾಂಸ್ಕೃತಿಕ ಸುಗ್ಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ನಾರೀಶಕ್ತಿಯ ಬಗ್ಗೆ ದೇಶದ ಪ್ರಧಾನಿಗಳು ಮಾತನಾಡುವ ಈ ಹೊತ್ತಿನಲ್ಲಿ ಚುಂಚಶ್ರೀ ಪ್ರತಿಷ್ಠಾನ ಚಿಕ್ಕಬಳ್ಳಾಪುರ ಘಟಕವು ನಿರ್ಮಲ ಭಾವದಲ್ಲಿ ಜಿಲ್ಲೆಯ ಮಹಿಳಾ ಕಲಾರಂಡಗಳನ್ನು ಒಂದೆಡೆ ಸೇರಿಸಿ ಅವರಲ್ಲಿ ಅಂತರ್ಗತವಾಗಿರುವ ಪ್ರತಿಭಾಶಕ್ತಿಯನ್ನು ಹೊರತೆಗೆಯುವ ಕೆಲಸ ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಧಾರ್ಮಿಕ ಆಚರಣೆಗಳಿಗೆ ಪ್ರಧಾನ ಸ್ಥಾನವಿದೆ ಎಂಬುದಕ್ಕೆ ಇಲ್ಲಿನ ಗುಡಿಗುಂಡಾರ ಸಹಿತ ದೇವತಾ ನೆಲೆಗಳೇ ಸಾಕ್ಷಿ ಎಂದರು.ಗ್ರಾಮೀಣ ಪ್ರದೇಶದಲ್ಲಿ ನಡೆಯುವ ದೇವತಾ ಕಾರ್ಯಗಳಲ್ಲಿ ಹಬ್ಬ ಹರಿದಿನಗಳಲ್ಲಿ, ಭಜನೆ ಮತ್ತುಕೋಲಾಟಕ್ಕೆ ಹೆಚ್ಚಿನ ಮನ್ನಣೆಯಿ ರುವುದನ್ನು ಕಾಣಬಹುದು. ಸಮಾನ ಮನಸ್ಥಿತಿಯ ಹತ್ತಾರು ಜನ ಕೂಡಿಕೊಂಡು ಮಾಡುವ ಭಜನೆ, ಹಾಡುವದೇವರ ನಾಮ, ಕೋಲಾಟಗಳು ಹಳ್ಳಿಯ ಸೊಬಗನ್ನು ಸಾರುವುದಲ್ಲದೆ, ಏಕತೆಯನ್ನು ಸಾರುತ್ತವೆ. ಭಗವಂತನ ನಾಮಸ್ಮರಣೆ ಮಾಡುವುದರಿಂದ ಮಾನಸಿಕ ರೋಗಗಳು ದೂರವಾಗಿ ಮನಸ್ಸು ಶಾಂತವಾಗುತ್ತದೆ.

ಆದ್ದರಿಂದ ಸಾಂಸ್ಕೃತಿಕ ಸುಗ್ಗಿಯಲ್ಲಿ ಭಾಗಿಯಾಗಿರುವ ತಾಯಂದಿರು ಪೂರ್ವಿಕರು ಬಿಟ್ಟುಹೋಗಿರುವ ಪದ್ಧತಿಗಳನ್ನು ಎಳೆಯ ಮಕ್ಕಳಿಗೆ ಧಾರೆಯೆರೆಯುವ ಮೂಲಕ ಭಾರತೀಯ ಸಂಸ್ಕೃತಿ ಸಂಸ್ಕಾರವನ್ನು ಪೊರೆಯುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.ಚುಂಚಶ್ರೀ ಮಹಿಳಾ ಪ್ರತಿಷ್ಟಾನನಡೆಸಿದ ಜಿಲ್ಲಾ ಮಟ್ಟದ ಸಾಂಸ್ಕೃತಿಕಸ್ಪರ್ಧೆಯಲ್ಲಿ 32 ಭಜನಾತಂಡ, 22ಕೋಲಾಟ ತಂಡಗಳು ಭಾಗವಹಿಸಿ ದ್ದರು. ಈ ಪೈಕಿ ಚಿಕ್ಕಬಳ್ಳಾಪುರ ನಗರದ ಆರ್.ಸುಬ್ಬಲಕ್ಷ್ಮಿ ಬ್ರಹ್ಮಾಚಾರಿನೇತೃತ್ವದಲ್ಲಿ ಭಾಗವಹಿಸಿದ್ದ ಜಮುನಾ,ಪುಷ್ಪಾವತಮ್ಮ, ಪಾರಿಜಾತ, ಭಾರತೀ, ವಿನೋಧಲಕ್ಷ್ಮಿ, ಲತಾ, ವಾಣಿ ಅವರ ವಿಶ್ವಕರ್ಮ ಮಹಿಳಾ ತಂಡ ಎರಡನೇ ಬಹುಮಾನ ಪಡೆದರು.

ಈ ಸಂದರ್ಭದಲ್ಲಿ ಚುಂಚಶ್ರೀ ಮಹಿಳಾ ಪ್ರತಿಷ್ಠಾನದ ಜಿಲ್ಲಾ ಗೌರವಾಧ್ಯಕ್ಷೆ, ರಾಜ್ಯ ಉಪಾಧ್ಯಕ್ಷೆ ಉಷಾ ಆಂಜನೇಯರೆಡ್ಡಿ, ರಾಜ್ಯ ನಿರ್ದೇಶಕಿ ಅನಸೂಯ ಆನಂದ್, ಜಿಲ್ಲಾಧ್ಯಕ್ಷೆ ಶಾಂತಾವೆoಕಟೇಶ್, ಚುoಚಶ್ರೀ ಪ್ರತಿಷ್ಠಾನದ ನಿರ್ಧೇಶಕಿ ಲೀಲಮ್ಮ, ಪ್ರಾಂಶುಪಾಲ ಡಾ.ರಾಜು. ಮತ್ತಿತರರು ಇದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು