LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಮಾತೃಭೂಮಿ ಹಬ್ಬ ಹಾಗೂ ಪ್ರಕೃತಿ ಮಿತ್ರ ಪ್ರಶಸ್ತಿ ಪ್ರದಾನ ಸಮಾರಂಭ

ಬೆಂಗಳೂರು: ಬಿಎನ್‍ಎಂ ತಾಂತ್ರಿಕ ಸಂಸ್ಥೆ ಮತ್ತು ಹೆರಿಟೇಜ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ 'ಸೃಷ್ಟಿ ಸಂಭ್ರಮ- 2024 ಮಾತೃಭೂಮಿ ಹಬ್ಬ' ಹಾಗೂ ಪ್ರಕೃತಿ ಮಿತ್ರ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಬಿಎನ್‍ಎಂಐಟಿ ಆವರಣದಲ್ಲಿ ಆಯೋಜಿಸಲಾಗಿತ್ತು. ಬಿಎನ್‍ಎಂ ತಾಂತ್ರಿಕ ಸಂಸ್ಥೆಯ ಅಧ್ಯಕ್ಷರಾದ ನಾರಾಯಣರಾವ್ ಆರ್ ಮಾನೆ ಹಾಗೂ ಐಎಫ್‍ಎಸ್ ಅಧಿಕಾರಿ ಸ್ವಾತಿ ಮಿಶ್ರಾ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ವೇಳೆ ಐಎಫ್‍ಎಸ್ ಅಧಿಕಾರಿಸ್ವಾತಿ ಮಿಶ್ರಾ ರವರು ಮಾತನಾಡಿ ತಾಪಮಾನ, ಹವಾಮಾನ ವೈಪರೀತ್ಯದಂತಹ ಜಾಗತಿಕ ಸಮಸ್ಯೆಗಳನ್ನು ಎದುರಿಸಲು ಮುಂದಿನ ಪೀಳಿಗೆ ಸಜ್ಜಾಗಬೇಕಿದೆ. ಹಾಗಾಗಿ ಪ್ರತಿಯೊಬ್ಬರೂ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಜವಾಬ್ದಾರಿ ತೋರಬೇಕಿದೆ ಎಂದರು. ನಾರಾಯಣರಾವ್ ಆರ್ ಮಾನೆಮಾತನಾಡಿ ಪರಿಸರ ಹಾಗೂ ವನ್ಯಜೀವಿಗಳು, ಪಕ್ಷಿಗಳ ಬಗ್ಗೆ ಬಹುತೇಕರಿಗೆ ಮಾಹಿತಿ ಇಲ್ಲದ್ದರಿಂದ ರಕ್ಷಣೆ ದೊರೆಯುತ್ತಿಲ್ಲ. ಈ ಬಗ್ಗೆ ಎಲ್ಲರಿಗೂ ಮಾಹಿತಿತಿಳಿಸುವ ಮೂಲಕ ಅಳಿವಿನಂಚಿನಲ್ಲಿರುವ ವನ್ಯ ಜೀವಿ, ಸಂಪತ್ತು ಉಳಿಸಿಕೊಳ್ಳಬೇಕಿದೆ ಆದ್ದರಿಂದ ನಮ್ಮ ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆಯ ಕುರಿತು ಪ್ರತಿಯೊಬ್ಬರಲ್ಲೂ ಪ್ರಜ್ಞೆ ಇರಬೇಕು ಎಂದು ತಿಳಿಸಿದರು.

2013 ರಲ್ಲಿ ಪ್ರಾರಂಭವಾದ ಈ ಸೃಷ್ಟಿಸಂಭ್ರಮ ಕಾರ್ಯಕ್ರಮವು ಪ್ರತಿ ವರ್ಷವೂಬಿಎನ್‍ಎಂಐಟಿ ವತಿಯಿಂದ ಆಯೋಜಿಸಲಾಗುತ್ತಿದೆ ಪ್ರಕೃತಿಯ ಉಳಿವಿಗಾಗಿ ಯುವ ಪೀಳಿಗೆಗಳಲ್ಲಿ ಜಾಗೃತಿ ಮೂಡಿಸಿ ಸಂರಕ್ಷಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದು ಬಿಎನ್‍ಎಂಐಟಿ ಉಪನಿರ್ದೇಶಕರಾದ ಡಾ. ಕೃಷ್ಣಮೂರ್ತಿ ಜಿ ಎನ್ ತಿಳಿಸಿದರು.

ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆಗೆ ಕೊಡುಗೆ ನೀಡಿದ ವಲಯ ಅರಣ್ಯಾಧಿಕಾರಿಗಳಾದ ವಿವೇಕ್ ಎಸ್, ರೇವಣಸಿದ್ದಯ್ಯ ಬಿ ಹಿರೇಮಠ, ಉಪ ವಲಯ ಅರಣ್ಯಾಧಿಕಾರಿಗಳಾದ ಸಿ ಪ್ರಭುಸ್ವಾಮಿ, ಸಂಪತ್ ಆರ್, ಅರಣ್ಯ ಗಸ್ತು ವಾರ್ಡನ್ ದಿಲೀಪ್ ಕುಮಾರ್ ಎಸ್, ಶಂಕರ್ ರಾವ್, ಸುನಿಲ್ ದುಗಾರ್ ರವರಿಗೆ ಪ್ರಕೃತಿ ಮಿತ್ರ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.

ಈ ವೇಳೆ ಬಿಎನ್‍ಎಂಐಟಿ ಅಧ್ಯಕ್ಷ ನಾರಾಯಣರಾವ್ ಆರ್ ಮಾನೆ,ಡೀನ್  ಪ್ರೊ . ಈಶ್ವರ್ ಎನ್ ಮಾನೆ, ಹೆಚ್ಚುವರಿನಿರ್ದೇಶಕರು ಮತ್ತು ಪ್ರಾಂಶುಪಾಲಡಾ. ಎಸ್ ವೈ ಕುಲಕರ್ಣಿ, ಉಪನಿರ್ದೇಶಕರಾದ ಡಾ. ಕೃಷ್ಣಮೂರ್ತಿ ಜಿ ಎನ್, ಡಿಟಿಇ ಮತ್ತು ವನ್ಯಜೀವಿ ಛಾಯಾಗ್ರಾಹಕ ಎಸ್ ಪಿ ನಾಗೇಂದ್ರ, ವಿಜಯಲಕ್ಷ್ಮಿ ವಿಜಯ್ ಕುಮಾರ್, ಶರತ್ ಬಾಬು ಉಪಸ್ಥಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು