LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Ramanagara

ಮಾರಕಾಸ್ತ್ರಗಳಿಂದ ಪರಸ್ಪರ ಹಲ್ಲೆ: 10 ಮಂದಿ ಬಂಧನ

ರಾಮನಗರ: ಇಬ್ಬರು ರೌಡಿಗಳ ಸಹಚರರ ಗುಂಪು ಹಾಡಹಗಲೇ ನಗರದ ಜಿಲ್ಲಾ ನ್ಯಾಯಾಲಯದ ಹೊರ ಭಾಗದಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಪರಸ್ಪರ ಹಲ್ಲೆಗೆ ಮುಂದಾಗಿದ್ದು, ಪೊಲೀಸರು ಸಕಾಲಕ್ಕೆ ಮಧ್ಯ ಪ್ರವೇಶಿಸಿ ಸಂಭವಿಸಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.ರೌಡಿಗಳಾದ ಮತಿನ್ ಮತ್ತು ಸಯಾನ್ ಖಾನ್ ಸಹಚರರ ಗುಂಪು ಲಾಂಗು, ಮಚ್ಚುಗಳನ್ನು ಹಿಡಿದು ಪರಸ್ಪರ ಘರ್ಷಣೆಗೆ ಮುಂದಾಗಿದ್ದವು.

ನ್ಯಾಯಾಲಯದ ಬಳಿಯೇ ಮಧ್ಯಾಹ್ನ ಇಂತಹದೊಂದು ಘಟನೆ ಜರುಗಿದ್ದು ಜನರನ್ನು ಆತಂಕಕ್ಕೀಡು ಮಾಡಿತು.ಈ ಘಟನೆ ಸಂಬಂಧ ಐಜೂರು ಠಾಣೆ ಪೊಲೀಸರು ಕಾನೂನು ಸಂಘರ್ಷಕ್ಕೆ ಒಳಗಾದ ನಾಲ್ವರು ಬಾಲಕರು ಸೇರಿದಂತೆ 10 ಮಂದಿ ಬಂಧಿಸಿದ್ದಾರೆ. ನಾಲಬಂದವಾಡಿ ಬಡಾವಣೆ ವಾಸಿ ಮತಿನ್, ಯಾರಬ್ ನಗರ ಬಡಾವಣೆ ವಾಸಿ ಸಯಾನ್ ಖಾನ್, ಸಮೀರ್, ಮುಹಿಬ್, ಸೈಯದ್ ನದೀಂ, ಮಹಮ್ಮದ್ ಫಾರೂಕ್ ಬಂಧಿತರು.

ಘಟನೆ ವಿವರ: ಮತಿನ್ ಮತ್ತು ಸಯಾನ್ ಖಾನ್ ನಡುವೆ ವೈಯಕ್ತಿಕ ದ್ವೇಷದಕಾರಣ ಹಲವು ವರ್ಷಗಳಿಂದ ಗಲಾಟೆ ನಡೆಯುತ್ತಲೇ ಇತ್ತು. 2023ರಲ್ಲಿ ಸಯಾನ್ ತನ್ನ ಸ್ನೇಹಿತ ಅದ್ನಾನ್ ಪಾಷನೊಂದಿಗೆ ಸುಜುಕಿ ಬೈಕಿನಲ್ಲಿ ತೆರಳುತ್ತಿದ್ದಾಗ ರೇಲ್ವೆ ನಿಲ್ದಾಣ ವೃತ್ತದಲ್ಲಿ ಮತಿನ್ ತನ್ನ 8 ಮಂದಿ ಸ್ನೇಹಿತರೊಂದಿಗೆ ಲಾಂಗ್ ನಿಂದ ಹಲ್ಲೆ ನಡೆಸಿದ್ದನು. ಈ ಸಂಬಂಧ ಅದ್ನಾನ್ ಪಾಷ 9 ಮಂದಿ ವಿರುದ್ಧ ರಾಮನಗರ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದನು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಯಾನ್, ನದೀಂ, ಫಾರೂಕ್, ಫಜಲ್, ಅಕ್ಬರ್ ಖಾನ್ ನ್ಯಾಯಾಲಯಕ್ಕೆ ಹಾಜರಾದರೆ, ಅವರ ಜೊತೆಯಲ್ಲಿ ಬಂದಿದ್ದ ಶಾಹುಲ್, ಮಹಮ್ಮದ್ ನವಾಜ್ ಪಾಷ, ಸುಹೇಬ್ ಪಾಷ, ಮಹ ಮ್ಮದ್ ಜುನೇದ್ ಪಾಷ ಕೋರ್ಟ್ ರಸ್ತೆಯಲ್ಲಿ ನಿಂತಿದ್ದರು. ಇದೇ ಸಮಯಕ್ಕೆ ರೌಡಿ ಮತೀನ್ ತನ್ನ ಸಹಚರರಾದ ಸಮೀರ್, ಮುಹಿಬ್, ಮಹಮ್ಮದ್ ಫಾರೂಕ್ ರೊಂದಿಗೆ ಬಂದಿದ್ದಾನೆ. ಮತೀನ್ ಮತ್ತು ಸಯಾನ್ ಖಾನ್ ಗುರುವಾರ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಪ್ರಕರಣದ ವಿಚಾರಣೆ ಮುಗಿಸಿಕೊಂಡು ಹೊರಗಡೆ ಬಂದಿದ್ದಾರೆ.

ಮತೀನ್, ಸಮೀರ್ , ಮುಹಿಬ್ , ಮಹಮ್ಮದ್ ಫಾರೂಕ್ ರವರು ಕೋರ್ಟ್ ರಸ್ತೆಲ್ಲಿ ನಿಂತಿದ್ದ ಸಯಾನ್ ನ ಸಹಚರರಾದ ಶಾಹುಲ್ , ಮಹಮ್ಮದ್ ನವಾಜ್ ಪಾಷ, ಸುಹೇಬ್ ಪಾಷ, ಮಹಮ್ಮದ್ ಜುನೇದ್ ಪಾಷ ಬಳಿ ಹೋಗಿ ಮಚ್ಚುಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸಯಾನ್ ಸಹಚರರು ಕೂಡ ಬೆನ್ನಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆಗೆ ಮುಂದಾಗಿದ್ದಾರೆ. ಉಭಯ ಗುಂಪುಗಳು ನ್ಯಾಯಾಲಯದ ಹೊರ ಭಾಗದಿಂದ ನಾಲಬಂದವಾಡಿ ಸೇರುವ ಸೇತುವೆವರೆಗೂ ಮಾರಕಾಸ್ತ್ರಗಳಿಂದ ಹಿಡಿದು ಪರಸ್ಪರ ಹಲ್ಲೆಗೆ ಬೆನ್ನಟ್ಟಿ ಓಡಾಡಿದ್ದಾರೆ.

ತಕ್ಷಣ ಎಚ್ಚೆತ್ತ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್ಪಿ , ವೃತ್ತ ನಿರೀಕ್ಷಕ ಹಾಗೂ ಸಬ್ ಇನ್ಸ್ ಪೆಕ್ಟರ್ ಗಳು ಸ್ಥಳಕ್ಕೆ ಆಗಮಿಸಿ ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸುವಲ್ಲಿ ಯಶಸ್ವಿಯಾದರು. ಈ ಸಂಬಂಧ ಐಜೂರು ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು