LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಮೊಬೈಲ್, ಲ್ಯಾಪ್‍ಟ್ಯಾಪ್ ಹೆಚ್ಚು ಬಳಕೆಯಿಂದ ಬಂಜೆತನ ಸಂಭವ; ಡಾ.ಕಾಮಿನಿರಾವ್

ಬೆಂಗಳೂರು: ಸ್ತ್ರೀ ರೋಗ,ಬಂಜೆತನ ಆರೈಕೆಯಲ್ಲಿ ಹೆಸರು ಮಾಡಿರುವ ಡಾ.ಕಾಮಿನಿ ಎ.ರಾವ್ ಆಸ್ಪತ್ರೆ ಬೆಂಗಳೂರಿನ ಯಾವುದಾದರೂ ಸರ್ಕಾರಿ ಆಸ್ಪತ್ರೆಯಲ್ಲಿ ಡಾ.ಕಾಮಿನಿರಾವ್ ಹೆಸರಿನಲ್ಲಿ ಐವಿಎಫ್ ಕೇಂದ್ರ ಪ್ರಾರಂಭಿಸಲು ಅವಕಾಶ ನೀಡಬೇಕೆಂದು ಆಸ್ಪತ್ರೆಯ ಸಂಸ್ಥಾಪಕಿ, ವ್ಯವಸ್ಥಾಪಕ ನಿರ್ದೇಶಕಿ ಪೂಜಾ ಸಿದ್ದಾರ್ಥ್ ರಾವ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಮಾಡಿದೆ.

ಬೆಂಗಳೂರಿನ ಶಿವಾನಂದ ವೃತ್ತದಲ್ಲಿರುವ  ಪ್ರೊ .ಡಾ.ಕಾಮಿನಿರಾವ್ ಸ್ತ್ರೀ ರೋಗ, ಬಂಜೆತನ ನಿವಾರಣಾ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು,ಎಲ್ಲ ಬಡ ಹೆಂಗಸರು ಮತ್ತು ಶ್ರೀಮಂತರು ತೆಗೆದುಕೊಳ್ಳುವ ಉನ್ನತ ಮಟ್ಟದ ಆರೋಗ್ಯ ಸೇವೆಯನ್ನು ನೀಡುವ ಉದ್ದೇಶದಿಂದ,ಬಿಪಿಎಲ್ ಕಾರ್ಡ್ ಹೊಂದಿರುವ ಸ್ತ್ರೀರೋಗಿಗಳಿಗೆ ಉತ್ತಮ ಆರೈಕೆ ನೀಡುವ ಉದ್ದೇಶದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಡಾ.ಕಾಮಿನಿರಾವ್ ಹೆಸರಿನಲ್ಲಿ ಆರೈಕೆ ಕೇಂದ್ರ ತೆರೆಯುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ಬೆಂಗಳೂರಿನ ಜಯನಗರ ಮತ್ತು ಶೇಷಾದ್ರಿಪುರಂನ ಶಿವಾನಂದ ಸರ್ಕಲ್ ನಲ್ಲಿ ಆಸ್ಪತ್ರೆ ತೆರೆಯಲಾಗಿದ್ದು,ನಗರದ ವಿವಿಧ ಭಾಗಗಳಲ್ಲಿ ಕೈ ಗೆಟುಕುವ ದರದಲ್ಲಿ ಸ್ತ್ರೀ ರೋಗ, ಬಂಜೆತನ, ಹೆರಿಗೆ ಚಿಕಿತ್ಸೆಯನ್ನು ನೀಡುವ ಉದ್ದೇಶದಿಂದ ಡಾ.ಕಾಮಿನಿರಾವ್ ಆಸ್ಪತ್ರೆಯನ್ನು ಪ್ರಾರಂಭಿಸಲಾಗುವುದು ಎಂದು ಡಾ.ಕಾಮಿನಿರಾವ್ ಸೊಸೆ ವೈದ್ಯೆ ಪೂಜಾ ಸಿದ್ಧಾರ್ಥ್ ರಾವ್ ತಿಳಿಸಿದರು.

ಡಾ.ಕಾಮಿನಿರಾವ್ ಮಾತನಾಡಿ, ಗರ್ಬಿಣಿ ಸ್ತ್ರೀಯರ ಹೆರಿಗೆ ಮತ್ತು ಆರೈಕೆಯಲ್ಲಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಿದೆ, ಮೆಡ್ ಲೈನ್ ಆಕಾಡೆಮಿಕ್ಸ್ ಮೂಲಕ ತರಬೇತಿ ಹೊಂದಿದ ವೈದ್ಯರನ್ನು ಹೊಂದಿದ್ದು,ವಿಶೇಷವಾಗಿ ಬಿಪಿಎಲ್ ಕಾರ್ಡ್ ಹೊಂದಿರುವ ಸ್ತ್ರೀಯರಿಗೆ ರಿಯಾಯಿತಿ ದರದಲ್ಲಿ ಹೆರಿಗೆಯನ್ನು ಮಾಡಿಸಲಾಗುವುದು,ಮೆನಾರ್ಕ್ ನಿಂದ ಮೆನೋಪಾಸ್ ವರೆಗೆ ಅದಕ್ಕಿಂತ ಮುಂದೆ ಮಹಿಳಾ ಆರೋಗ್ಯ ಸೇವೆಯನ್ನು ನೀಡಲಾಗುವುದು ಎಂದು ತಿಳಿಸಿದರು.

ತ್ವರಿತ ಹೆರಿಗೆ ಚಿಕಿತ್ಸಾ ವಿಧಾನ ಅಪಾಯಕಾರಿ ಯಾಗಿದ್ದು, ಗರ್ಭಿಣಿ ಸ್ತ್ರೀಯರಿಗೆ ಸಹಜ ಹೆರಿಗೆ ಮಾಡಿಸುವುದು ಅಗತ್ಯವಾಗಿದೆ,ಎಲ್ಲ ಆಸ್ಪತ್ರೆಗಳು ತ್ವರಿತ ಹೆರಿಗೆ (ಸೀಜರಿನ್)ವಿಧಾನವನ್ನು ಆರ್ಥಿಕ ದೃಷ್ಟಿಯಿಂದ ಅನುಸರಿಸುತ್ತವೆ ಎಂ ಬುದು ತಪ್ಪು ಅಭಿಪ್ರಾಯವಾಗಿದೆ, ಕೆಲವರು ಮಾಡಬಹುದು,ಗರ್ಭದಲ್ಲಿರುವ ಮಗು ಅಪಾಯಕಾರಿ ಸ್ಥಿತಿಯಲ್ಲಿದೆ ಎಂಬುದು ವೈದ್ಯರಿಗೆ ಮನವರಿಕೆಯಾದಗ ಈ ಹೆರಿಗೆ ವಿಧಾನ ಅನುಸರಿಸುವುದು ಸಹಜವಾಗಿದೆ ಎಂದರು.

ಬಂಜೆತನ ವಿಚಾರದಲ್ಲಿ ಕೇವಲ ಮಹಿಳೆಯನ್ನು ದೂಷಿಸುವುದು ಸರಿಯಲ್ಲ,ಇದರಲ್ಲಿ ಪುರುಷರ ಪಾತ್ರವೂ ಇರುತ್ತದೆ.ಕೆಲ ಪುರುಷರಿಗೂ ದೈಹಿಕವಾಗಿ ಬಂಜೆತನವಿರುತ್ತದೆ ಎಂದು ತಿಳಿಸಿದ ಅವರು, ಹೆಣ್ಣು ಮಕ್ಕಳು ಹೆಚ್ಚು ಮೊಬೈಲ್ ಬಳಸುವುದು, ಲ್ಯಾಪ್ ಟ್ಯಾಪ್ ತಮ್ಮ ತೊಡೆಯ ಮೇಲೆ ಇಟ್ಟುಕೊಂಡು ಕೆಲಸ ಮಾಡುವುದರಿಂದ ಬಂಜೆತನ ಉಂಟಾಗಬಹುದು ಎಂದು ಹೇಳಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು