LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Raichur

ಯಾರು ಹೀನನಾಗಿದ್ದಾನೋ, ದೂಷಣೆಗೊಳಗಾಗಿದ್ದನೋ ಅವನೇ ಹಿಂದೂ: ಹಿಂದೂ‌‌ ಎಂಬುದು ಅವಮಾನಕರ ಪದ; ಪ್ರೊ ಕೆ.ಎಸ್ ಭಗವಾನ್

ರಾಯಚೂರು: ಹಿಂದೂ‌‌ ಎಂಬುದು ಅತ್ಯಂತ ಅವಮಾನಕರ ಪದವಾಗಿದೆ. ನಾವು ಹಿಂದೂ ಎಂದು ಹೇಳಿಕೊಳ್ಳುವುದೇ ಒಂದು ಅವಮಾನಕರ. ಯಾರು ಹೀನರಾಗಿದ್ದಾರೋ, ಯಾರು ದೂಷಣೆಗೆ ಒಳಗಾಗಿದ್ದಾರೋ ಅವರೇ ಹಿಂದೂ ಎಂದು ಲೇಖಕ ಪ್ರೊ. ಕೆ.ಎಸ್ ಭಗವಾನ್ ಹೇಳಿದ್ದಾರೆ.

ರಾಯಚೂರು ಜಿಲ್ಲೆಯ ದೇವದುರ್ಗ ತಾ. ತಿಂಥಣಿಯ ಕನಕ ಮಠದಲ್ಲಿ ಮಾತನಾಡಿರುವ ಭಗವಾನ್ ಅವರು, ಹಿಂದೂ ಎಂಬ ಶಬ್ಧ 1030ನೇ ಇಸ್ವಿಯಲ್ಲಿ ಬಂದಿದೆ. ಪರ್ಶಿಯನ್ ಲೇಖಕ ಆಲ್ಬೇರೋನಿ ಎಂಬುವವನು ಭಾರತದ ಬಗ್ಗೆ ಬರೆಯುತ್ತಾ ಸಿಂಧೂ ನದಿಯನ್ನು ಹಿಂದೂ ಅಂತ ಕರೆದರು. ಪರ್ಶಿಯನ್ ಭಾಷೆಯಲ್ಲಿ‌ ಸಕಾರ ಇಲ್ಲವಂತೆ, ಸಕಾರ, ಹಕಾರವಾಗುತ್ತೆ. ಆದ್ದರಿಂದ ಅವರು ಸಿಂಧೂವನ್ನು ಹಿಂದೂ ಎಂದು ಕರೆದರು ಎಂದು ಹೇಳಿದ್ದಾರೆ.

ಮುಂದೆ ಅಕ್ಬರ್‌ನ ಕಾಲದಲ್ಲಿ ಈ ದೇಶಕ್ಕೆ ಹಿಂದೂಸ್ತಾನ್ ಎಂಬ ಹೆಸರು ಬಂತು. ಹೀಗಾಗಿ ಹಳೆಯ ಗ್ರಂಥಗಳಲ್ಲಿ ಹಿಂದೂ ಎನ್ನುವ ಶಬ್ಧ, ವೇದಗಳು, ಪುರಾಣಗಳು ಉಪನಿಷತ್ ಗಳಲ್ಲಿ ಹಿಂದೂ ಎನ್ನುವ ಪದ‌ ಇಲ್ಲ. ಈ ಹಿಂದೂ ಎನ್ನುವ ಶಬ್ದಕ್ಕೆ ಕಾಶ್ಮೀರಿ ಶೈವ ಗ್ರಂಥದಲ್ಲಿ ಹೀರಂಚ ದುಶ್ಯಂತೈವ ಹಿಂದೂ ವಿದುಶವಿಚತೇ ಅಂತ ಇದೆ. ಇದರ ಅರ್ಥ ಯಾರು ಹೀನನಾಗಿದಾನೋ, ಯಾರು ದೂಷಣೆಗೊಳಗಾಗಿದಾನೋ ಅವನು ಹಿಂದೂ ಅಂತ ಅವರು ಹೇಳ್ತಾರೆ. ಹಾಗಾಗಿ ಹಿಂದೂ ಎನ್ನುವಂತ ಶಬ್ಧ ಬಹಳಷ್ಟು ಅಪಮಾನಕರವಾಗಿದೆ ಎಂದು ಭಗವಾನ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಚಾತುರ್ವಣದಲ್ಲಿ ಶೂದ್ರ ಅನ್ನೋ ಶಬ್ದ ಸಹ ಮನುಸ್ಮೃತಿ ಪ್ರಕಾರ ಅಪಮಾನಕ್ಕೆ ಒಳಗಾಗಿದೆ. ಸಂವಿಧಾನದಲ್ಲಿ ಸಮಾನತೆ ಸ್ವಾತಂತ್ರ್ಯ ಸೇರಿ ದೊಡ್ಡ ತತ್ವವನ್ನ ಬಾಬಾ ಸಾಹೇಬರು ಅಳವಡಿಸಿದ್ದಾರೆ. ಅಂಥ ಸಂವಿಧಾನ ತೆಗೆದು ಹಾಕಲು ಕುತಂತ್ರ ಮಾಡುತ್ತಿದ್ದಾರೆ. ನಾವು ಇದಕ್ಕೆ ಅವಕಾಶ ಕೊಡಬಾರದು, ಮತ್ತೆ ಮನಸ್ಮೃತಿ ವಾಪಸ್ ತರದಂತೆ ತಡೆಯಬೇಕಿದೆ. ಮನಸ್ಮೃತಿಯಿಂದ ಶೂದ್ರರನ್ನ ಅನಾಗರಿಕರಂತೆ ನೋಡಲಾಯಿತು. ಈ ಕಾರಣಕ್ಕಾಗಿಯೇ ಬಾಬಾ ಸಾಹೇಬರು, ಪೆರಿಯಾರ್ ಮನಸ್ಮೃತಿಯನ್ನ ಸುಟ್ಟು ಹಾಕಿದರು. ಸಂವಿಧಾನ ಪರ ಹೋರಾಡಬೇಕು ಮನು ಸ್ಮೃತಿಯನ್ನ ತಿರಸ್ಕರಿಸಬೇಕು ಎಂದು ಕರೆ ನೀಡಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು