LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಯುವ ನಿರ್ಮಾಪಕಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಾಥ್: ‘ಕುಬುಸ’ ಟ್ರೈಲರ್ ರಿಲೀಸ್

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವಿಭಿನ್ನ ಚಿತ್ರಗಳು ಬರುತ್ತಿವೆ. ಕೆಲವು ಸಿನಿಮಾಗಳು ಟೈಟಲ್ ನಿಂದ ಗಮನ ಸೆಳೆಯೋಕೆ ಶುರುಮಾಡಿವೆ. ಸಿನಿಮಾ ಕಂಟೆಂಟ್ ಕೂಡ ಗಮನ ಸೆಳೆಯುತ್ತವೆ. ಇಂತಹ ಸಿನಿಮಾಗಳಲ್ಲಿ ’ಕುಬುಸ’ ಕೂಡ ಒಂದು. ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ಬೆಂಗಳೂರಿನ ವಸಂತ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ನಿರ್ಮಾಪಕಿ ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ’ಕುಬುಸ’ ಟ್ರೈಲರ್ ಅನಾವರಣ ಮಾಡಿ ಇಡೀ ತಂಡಕ್ಕೆ ಶುಭ ಕೋರಿದ್ದಾರೆ.ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ವೇದಿಕೆಯ ಮೇಲೆ ಕೇಂದ್ರ ಬಿಂದುವಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಮಾತಾ ಶ್ರೀ ಡಾಕ್ಟರ್ ಮಂಜಮ್ಮ ಜೋಗತಿ ರವರು ಮುಖ್ಯ ಅತಿಥಿಯಾಗಿ ಹೊಸಪೇಟೆಯ ಸಮಾಜ ಸೇವಕರಾದ ತಾಯಮ್ಮ ಶಕ್ತಿ ಸಂಘದ ಅಧ್ಯಕ್ಷರಾದ ಶ್ರೀಮತಿ ಕವಿತಾ ಈಶ್ವರ್ ಸಿಂಗ್ ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ಅವರು, ಒಬ್ಬ ಮಹಿಳೆ ನಿರ್ಮಾಪಕರಾಗಿ ಉತ್ತಮ ಚಲನಚಿತ್ರವನ್ನು ಕಷ್ಟಪಟ್ಟು ನಿರ್ಮಿಸಿದ್ದಾರೆ ನಾವೆಲ್ಲರೂ ಅವರಿಗೆ ಪ್ರೋತ್ಸಾಹಿಸುವುದರ ಮೂಲಕ ಅವರಿಗೆ ಮತ್ತಷ್ಟು ಬಂದಂತಾಗುವುದು ಎಂದು ನಾನು ಯಾವತ್ತಿಗೂ ಕಲಾವಿದರಿಗೆ ಬೆಂಬಲವಾಗಿ ಇರುತ್ತೇನೆಂದು ಹೇಳಿದರು ಹಾಗೂ ಅಪ್ಪು ಅಭಿಮಾನಿಗಳಾದ ಯೂತ್ ಐಕಾನ್ ಎಂದು ಹೆಸರು ಪಡೆದಿರುವ ಸಮಾಜ ಸೇವಕರಾದ ಶ್ರೀಯುತ ಸಿದ್ದಾರ್ಥ್ ಸಿಂಗ್ ರವರು ಅಪ್ಪು ಆದರ್ಶಗಳನ್ನು ಪಾಲಿಸಿಕೊಂಡು ಬರುವಂತೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುತ್ತಾ ಈ ಚಲನಚಿತ್ರ ಯಶಸ್ವಿಯಾಗಲೆಂದು ಅಹಾರೈಸಿದರು. ಕಾರ್ಯಕ್ರಮದಲ್ಲಿ ಹೋಂ ಆಫ್ ಹೋಪ್ ಸಂಸ್ಥಾಪಕರಾದ ಆಟೋರಾಜ್ ರವರು ಡ್ಯಾನ್ಸ್ ಹರಿಪ್ರಸಾದ್, ಕೃಷ್ಣ ರಿತ್ತಿ, ಯೂಸುಫ್, ಇಮ್ತಿಯಾಜ್, ರಾಜು ಉಪ್ಪರ್, ನಂದೀಶ ಇನ್ನು ಇತರರು ಉಪಸ್ಥಿತರಿದ್ದರು.

ಟ್ರೈಲರ್ ರಿಲೀಸ್ ಬಳಿಕ ನಾಯಕ ನಟರಾಜ್ ಎಸ್ ಭಟ್ ಮಾತನಾಡಿ, ಸಿನಿಮಾದ ಆಮಂತ್ರಣ ಹಾಡುಗಳು ಟೀಚರ್, ಟ್ರೈಲರ್ ಇನ್ನಷ್ಟು ಇನ್ವಿಟೇಶನ್ ಎಂದು ಕೊಟ್ಟಿದ್ದೇವೆ. ತುಂಬಾ ರೂಟ್‌ಇಂದ ಬಂದ ಕಾನ್ಸೆಪ್ಟ್ ಇದು. ಇಂತಹ ಚಲನಚಿತ್ರ ನಿರ್ಮಾಣ ಮಾಡಲು ವಿ ಶೋಭಾ ಆದಿ ನಾರಾಯಣರವರಂತಹ ಒಳ್ಳೆಯ ವ್ಯಕ್ತಿ ಮತ್ತೆ ಸಿಗುವುದಿಲ್ಲ. ಈ ರೀತಿ ಚಿತ್ರಗಳು ಗೆಲ್ಲಬೇಕು ಈ ಸಿನಿಮಾ ಗೆದ್ದಾಗ ನಿರ್ಮಾಪಕರು ಮತ್ತೆ ಸಿನಿಮಾ ಮಾಡಲು ಮುಂದಾಗುತ್ತಾರೆ.

ಇಡೀ ತಂಡ ಈ ಚಿತ್ರಕ್ಕಾಗಿ ಬಹಳಷ್ಟು ಕೆಲಸ ಮಾಡಿದ್ದಾರೆ .ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ ನಿಮ್ಮ ಸಹಕಾರ ಕುಬುಸ ಸಿನಿಮಾ ಮೇಲೆ ಇರಲಿ ಎಂದರು.
ನಿರ್ದೇಶಕರು ರಘುರಾಮ ಚರಣ್ ಮಾತನಾಡಿ ಪುಟ್ಟ ಕನಸು ದೊಡ್ಡದಾಗುತ್ತಾ ಬಂತು, ಅದು ಈಗ ಸಿನಿಮಾ ರೂಪತಾಳಿದೆ. ಇದು ಯಾವ ಜಾನರ್ ಎಂದು ಹೇಳಲು ಆಗುವುದಿಲ್ಲ . ಕಥೆ ಬರೆಯುವಾಗ ಏನು ವಿಜ್ವಲ್ ಬಂತು ಅದನ್ನು ಶೂಟ್ ಮಾಡಿದ್ದೇವೆ. ೧೯೬೦ರ ಕಾಲಘಟ್ಟದಲ್ಲಿ ಬರುವ ಕಥೆ ಇದು. ಸಿನಿಮಾದಲ್ಲಿ ನಾಲ್ಕು ಹಾಡುಗಳಿವೆ ಎಂದು ಮಾಹಿತಿ ನೀಡಿದರು.

ವಿ.ಶೋಭಾ ಆದಿನಾರಾಯಣವರ ಮಾತನಾಡಿ, ಕುಬುಸ ಚಲನಚಿತ್ರದಲ್ಲಿ ಹಳ್ಳಿ ಸೊಗಡಿನ ಚಿತ್ರಕಥೆಯಾಗಿದ್ದು ಈ ಚಿತ್ರದಲ್ಲಿ ನನಗೆ ತುಂಬಾ ಅನುಭವವಾಗಿದ್ದು, ಜನರ ಮನಸ್ಸಿನಲ್ಲಿ ಉಳಿಯುವಂತಹ ಸಿನಿಮಾಗಳನ್ನು ಮುಂದಿನ ದಿನಗಳಲ್ಲಿ ನಿರ್ಮಾಣ ಮಾಡುತ್ತೇನೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಇದೇ ತಿಂಗಳು ಜುಲೈ ೨೬ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಪ್ರೇಕ್ಷಕರು ಸಿನಿಮಾ ನೋಡಿ ಪ್ರೋತ್ಸಾಹಿಸಬೇಕು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು